ಸುದ್ದಿಗಳು

ಕರಾಟೆ ಕಿಂಗ್ ಶಂಕರ್ ನಾಗ್ ಜನುದಿನದ ನೆನಪು: ಸೆಲೆಬ್ರೆಟಿಗಳು ಹೇಳಿದ್ದೇನು?

80ರ ದಶಕದ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಶಂಕರ್ ನಾಗ್ ಅಂದ್ರೆ ಸಾಕು ಪ್ರತಿಯೊಬ್ಬ ಕನ್ನಡಿಗರಿಗೂ ಇಷ್ಟ. ಇಂದು ಅವರು ಬದುಕುಳಿಯುತ್ತಿದ್ದರೆ 65ನೇ ವಸಂತಕ್ಕೆ ಕಾಲಿಡುತ್ತಿದ್ದರು.ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ.

ಕಂಚಿನ ಕಂಠ, ವಿಭಿನ್ನವಾಗಿ ನಡೆಯುವ ಶೈಲಿ, ಆಕರ್ಷಕ ನೋಟಗಳಿಂದ ಗಮನ ಸೆಳೆದಿದ್ದ ಶಂಕರ್ ಹಲವಾರು ನಿರ್ಮಾಪಕರ ಹಾಟ್ ಫೇವರೇಟ್ ನಟನಾಗಿದ್ದರು. ಇವರು ನಿಜವಾಗಲೂ ಕರಾಟೆ ಕಲಿಯದಿದ್ದರೂ ಚಿತ್ರವೊಂದರ ಸಾಹಸ ದೃಶ್ಯಗಳಲ್ಲಿ ಕರಾಟೆ ಪಟ್ಟುಗಳನ್ನು ಪ್ರದರ್ಶಿಸಿದರಿಂದ ಇವರಿಗೆ `ಕರಾಟೆ ಕಿಂಗ್’ ಎಂಬ ಬಿರುದು ಬಂತು.

ಶಂಕರ್ ನಾಗ್ ಹುಟ್ಟು ಹಬ್ಬಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸ್ಟಾರ್ ನಟರು ತಮ್ಮ ಫೆವರೇಟ್ ನಟನ ಬಗ್ಗೆ ಟ್ವೀಟ್ ಮಾಡಿದ್ದಾರೆ

ಐತಿಹಾಸಿಕ ಅಯೋಧ್ಯೆ ತೀರ್ಪಿಗೆ ಸ್ಯಾಂಡಲ್ ವುಡ್ ತಾರೆಯರು ಫುಲ್ ಖುಷ್

#sandlalwood #shankarnag #shankarnagbirthday

Tags