ಸುದ್ದಿಗಳು

‘ಶರಭ’ ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಶಿವಣ್ಣ

‘ಸಂಕೀರ್ಣ', ‘ಆರ್ಪಿ’ ಹಾಗೂ ‘ಗರ್ನಲ್’ ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ಗಂಧರ್ವ ಗೌಡ ನಿರ್ದೇಶನದ ‘ಶರಭ’

ಬೆಂಗಳೂರು, ಡಿ.6: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಂದ ‘ಶರಭ’ ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈಗಾಗಲೇ ‘ಸಂಕೀರ್ಣ’ ‘ಅರ್ಪಿ’ ಹಾಗೂ ‘ಗರ್ನಲ್’ ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ಗಂಧರ್ವ ಗೌಡ ಈ ಕಿರುಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.ಗಮನ ಸೆಳೆದ ಫಸ್ಟ್ ಲುಕ್

ಈಗಾಗಲೇ ‘ಆರ್ಪಿ’, ‘ಗರ್ನಲ್’ ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಗಂಧರ್ವ ಗೌಡ, ಇದೀಗ ‘ಶರಭ’ ಶೀರ್ಷಿಕೆಯ ಕಿರುಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದರ ಫಸ್ಟ್ ಲುಕ್ ಪೋಸ್ಟರ್ ಅನ್ನು ಶಿವಣ‍್ಣ ಬಿಡುಗಡೆ ಮಾಡಿ ತಂಡಕ್ಕೆ ಹಾಗೂ ತಂಡದ ವಿಭಿನ್ನ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ.ಶರಭ…

ಈ ಕಿರುಚಿತ್ರದಲ್ಲಿ ರೋಶನ್ ಶೆಟ್ಟಿ, ಕೃತಿ ಗೌಡ, ಅನಿಲ್ ಗೌಡ, ಶ್ರೀನಿವಾಸ್, ರಥನ್ ಗೌಡ, ಚೇತನ್ ಪೂಜಾರಿ, ಮಹೇಂದ್ರ ಕುಮಾರ್, ದೇವರಾಜ್ ಸೇರಿದಂತೆ ಹಲವರ ಅಭಿನಯವಿದ್ದು, ಎ.ಆರ್ ಕೃಷ್ಣ ಸಂಕಲನ, ವಿಕಾಸ್ ವಸಿಷ್ಟ ಸಂಗೀತ, ರಾಜ್ ಕಾಂತ್ ಎಸ್ ಕೆ ಕ್ಯಾಮರಾ ವರ್ಕ್ ಇದೆ.ನಿರ್ದೇಶಕರ ಬಗ್ಗೆ

ಇನ್ನು ನಿರ್ದೇಶಕ ಗಂಧರ್ವ ಗೌಡರವರು ನಿರ್ದೇಶನದೊಂದಿಗೆ ‘ಆರ್ಪಿ’ ಹಾಗೂ ‘ಡಾಲರ್’ ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಸದ್ಯ ಕಿರುಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಅವರು ಆದಷ್ಟು ಬೇಗ ಫ್ಯೂಚರ್ ಚಿತ್ರವನ್ನು ನಿರ್ದೇಶನ ಮಾಡುವಂತಾಗಲಿ.

Tags