ಸುದ್ದಿಗಳು

ಶಾರುಖ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

ಬಹು ನಿರೀಕ್ಷಿತ ಸಿನಿಮಾ ’ಜೀರೋ’ ಟ್ರೈಲರ್

ಮುಂಬೈ,ನ.01: ಬಾಲಿವುಡ್​​​ ಬಾದ್​​ ಶಾ, ಶಾರೂಖ್​​​​ ಖಾನ್​​​​ ಹುಟ್ಟು ಹಬ್ಬ ನಾಳೆಯಾದ್ದರಿಂದ ಶಾರುಖ್ ಫ್ಯಾನ್ಸ್ ಗೆ  ಸಿಹಿ ಸುದ್ದಿ ಕಾದಿದೆ.. ಶಾರೂಖ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ’ಜೀರೋ’ ಟ್ರೈಲರ್​​​ ನಾಳೆ ಬಿಡುಗಡೆಯಾಗಲಿದೆ…. ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಕತ್ರೀನಾ ಕೈಫ್ ನಾಯಕಿಯರಾಗಿ ಕಾಣಿಸಿಲಿದ್ದಾರೆ.. ಇನ್ನು ಮುಂಬೈನ ವಡಾಲಾದ ಐಮಾಕ್ಸ್​​ ಥಿಯೇಟರ್​​​ನಲ್ಲಿ ಟ್ರೈಲರ್​​ ರಿಲೀಸ್​​​ ಆಗಲಿದೆಎಂದು ಬಾಲಿವುಡ್​​​​ ಸಿನಿಮಾ ವಿಮರ್ಶಕ ತರಣ್​ ಆದರ್ಶ್‌​ ಟ್ವೀಟ್​​ ಮಾಡಿದ್ದಾರೆ. ಶಾರೂಖ್​​​​ ಖಾನ್​​ ಹಾಗೂ ನಿರ್ದೇಶಕ ಆನಂದ್​​ ಎಲ್​​​ ರೈ ‘ಜೀರೋ’ ಸಿನಿಮಾದ ಟ್ರೈಲರ್​​ ಲಾಂಚ್​ ಮಾಡಲಿದ್ದಾರಂತೆ..

Image result for shahrukh khan zero

ಶಾರುಖ್ ಕುಬ್ಜನ ಪಾತ್ರ

ಶಾರುಖ್ ಖಾನ್ ಈ ಮೊದಲು ಎಂದೂ ಮಾಡಿರದ ಪಾತ್ರವನ್ನು ‘ಜೀರೋ’ ಚಿತ್ರದಲ್ಲಿ ಮಾಡಿದ್ದಾರೆ. ಚಿತ್ರದಲ್ಲಿ ಶಾರುಖ್ ಕುಬ್ಜನ ರೀತಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಪಾತ್ರ ನೋಡಿದ ಅಭಿಮಾನಿಗಳು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.  ಈ ಚಿತ್ರದಲ್ಲಿ ಶಾರೂಖ್​​​​ ಖಾನ್​​​ ಬಾವ್ವಾ ಸಿಂಗ್​​​​ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅನುಷ್ಕಾ ವಿಜ್ಞಾನಿ ಹಾಗೂ ಕತ್ರಿನಾ ಮದ್ಯವ್ಯಸನಿ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಚಿತ್ರ ಇದೇ ವರ್ಷ ಡಿಸೆಂಬರ್ 21ರಂದು ಚಿತ್ರ ಬಿಡುಗಡೆಯಾಗಲಿದೆ..

Tags

Related Articles