ಸುದ್ದಿಗಳು

ಗಾಯಕ ಶಶಾಂಕ್ ಶೇಷಗಿರಿ ಇದೀಗ ಸಂಗೀತ ನಿರ್ದೇಶಕ

ಸ್ಯಾಂಡಲ್ ವುಡ್ ನಲ್ಲಿ ಬಹುತೇಕ ‘ಟೈಟಲ್ ಸಾಂಗ್ ಗಾಯಕ’ ಎಂಬ ಖ್ಯಾತಿ ಪಡೆದಿರುವ ಗಾಯಕ ಶಶಾಂಕ್ ಶೇಷಗಿರಿ. ಇವರು ತಮ್ಮ ಕಂಚಿನ ಕಂಠದಿಂದ ಬಹುಬೇಡಿಕೆಯ ಗಾಯಕರಾಗಿದ್ದು, ವಿಶೇಷವೆಂದರೆ, ಇವರೀಗ ಸಂಗೀತ ನಿರ್ದೇಶಕರಾಗಿ ಪರಿಚಿತವಾಗುತ್ತಿದ್ದಾರೆ.

ಹೌದು, ಶಶಾಂಕ್ ಶೇಷಗಿರಿ ಇದೀಗ ‘ರಾಂಧವ’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಹಾಡು ಸಾಕಷ್ಟು ಹಿಟ್ ಆಗಿವೆ. ಈಗಾಗಲೇ ಚಿತ್ರದ ಜೂಕ್ ಬಾಕ್ಸ್ ಯುಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಕೇಳುಗರಿಂದ ಮೆಚ್ಚುಗೆ ಪಡೆಯುತ್ತಿದೆ.

‘ಈ ಸಿನಿಮಾ ನನಗೆ ತುಂಬಾ ಸ್ಪೆಷಲ್ ಸಿನಿಮಾ. ಈ ಚಿತ್ರಕ್ಕೆ ಹಾಡು ಹೇಳುವುದರೊಂದಿಗೆ ಸಂಗೀತ ಸಂಯೋಜನೆಯೂ ಮಾಡಿದ್ದೇನೆ. ಚಿತ್ರದಲ್ಲಿರುವ ಆರು ಹಾಡುಗಳೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಎಲ್ಲಾ ಹಾಡುಗಳಿಗೂ ಕನ್ನಡ ಗಾಯಕರೇ ಧ್ವನಿ ನೀಡಿದ್ದಾರೆ. ಈಗಾಗಲೇ ಹಾಡುಗಳ ಸಾಹಿತ್ಯ ಮತ್ತು ಸಂಗೀತ ಹಾಗೂ ಗಾಯಕರ ಕಂಠಸಿರಿಗೆ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಶಶಾಂಕ್ ಶೇಷಗಿರಿ.

ಇದಷ್ಟೇ ಅಲ್ಲದೇ ‘ನಾನು ಗಾಯಕನಾಗಿದ್ದು ಅಪ್ಪನ ಆಸೆ ಈಡೇರಿಸುವುದಕ್ಕೆ. ಹೀಗಾಗಿ ಗಾಯನದಿಂದ ಇದೀಗ ಸಂಗೀತ ನಿರ್ದೇಶಕನಾಗಿದ್ದೀನಿ. ಸಿನಿಮಾ ಆ. 23 ರಂದು ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಭುವನ್ ಪೊನ್ನಣ್ಣ ನಾಯಕನಟರಾಗಿ ನಟಿಸಿದ್ದಾರೆ’ ಎನ್ನುತ್ತಾರೆ ಅವರು.

“ಸೈರಾ” ಚಿತ್ರತಂಡದಿಂದ ಹೊರಬಿತ್ತು ಸಿಹಿ ಸುದ್ದಿ…!!!

#shashanksheshagiri #randhawamovie  #bhuvanaponnanna #kannadafilm, #kannadamovie,

Tags