ಸುದ್ದಿಗಳು

‘ಗಡಿಯಾರ’ದಲ್ಲಿ ಕಥೆ ಹೇಳುತ್ತಿರುವ ಶೀತಲ್ ಶೆಟ್ಟಿ

ಹೊಸಬರ ಚಿತ್ರದಲ್ಲಿ ನಟಿಸುತ್ತಿರುವ ನಟಿ

ಬೆಂಗಳೂರು.ಜ.12: ಹೊಸಬರಾದ ಪ್ರಬಿಕ್ ಮೊಗವೀರ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಗಡಿಯಾರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಶೇ. 50 ರಷ್ಟು ಶೂಟಿಂಗ್ ಮುಗಿಸಿರುವ ಚಿತ್ರತಂಡಕ್ಕೆ ಶೀತಲ್ ಶೆಟ್ಟಿಯ ಆಗಮನವಾಗಿದೆ.

ಚಿತ್ರದ ಬಗ್ಗೆ

ಸುಮಾರು ವರ್ಷಗಳ ಹಿಂದೆ ಕನಕಪುರದಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾವಾಗಿರುವ ‘ಗಡಿಯಾರ’ ಚಿತ್ರವು ಕನ್ನಡ ಸೇರಿದಂತೆ ತಮಿಳು , ತೆಲುಗು ,ಮಲಯಾಳಂ , ಹಿಂದಿ , ಮರಾಠಿ ಹಾಗೂ ಬೋಜಪುರಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

ಪ್ರಮುಖ ಪಾತ್ರದಲ್ಲಿ

‘ಗಡಿಯಾರ’ ಚಿತ್ರದ ಪ್ರಮುಖ ಪಾತ್ರದಲ್ಲಿ ಶೀತಲ್ ಶೆಟ್ಟಿ ಬಣ್ಣ ಹಚ್ಚಿದ್ದರೆ, ಮಲಯಾಳಂನ ಖ್ಯಾತ ನಟ ಎಂ.ಟಿ. ರಿಯಾಜ್ ಮತ್ತು ಮರಾಠಿ ನಟ ಗೌರಿ ಶಂಕರ್ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿರುವುದು ವಿಶೇಷವಾಗಿದೆ.

“ಚಿತ್ರದಲ್ಲಿ ಶೀತಲ್ ಶೆಟ್ಟಿಯವರದ್ದು ತನಿಖಾ ಪತ್ರಕರ್ತೆಯ ಪಾತ್ರ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಅವರು ಜರ್ನಲಿಸ್ಟ್ ಪಾತ್ರ ಮಾಡಿರುವುದರಿಂದ ಮತ್ತೆ ಅಂಥದ್ದೇ ಪಾತ್ರಕ್ಕೆ ಬಣ್ಣ ಹಚ್ಚುವುದು ಬೇಡ ಎಂದೇ ಅವರು ನಿರ್ಧರಿಸಿದ್ದರಂತೆ. ಆದರೆ, ಚಿತ್ರದ ಕಥೆ ಕೇಳಿದ ಬಳಿಕ ನಟಿಸಲು ಒಪ್ಪಿಕೊಂಡರು” ಎನ್ನುತ್ತಾರೆ ನಿರ್ದೇಶಕರು.

ಅಂದ ಹಾಗೆ ಇದೊಂದು ಭಿನ್ನವಾದ ಸಿನಿಮಾವಾಗಿದ್ದು, ‘ತ್ರಿ ಈಡಿಯಟ್ಸ್’ ,‘ಲೂಸಿಯಾ’, ‘ಗುಳ್ಟು’ ಸಿನಿಮಾಗಳ ಮಾದರಿಯಲ್ಲಿ ಮೂಡಿ ಬರುತ್ತಿದೆ. ಇದೊಂದು ಥ್ರಿಲ್ಲರ್, ಸಸ್ಪೆನ್ಸ್, ಸೈಕಲಾಜಿಕಲ್, ಆ್ಯಕ್ಷನ್, ಕಾಮಿಡಿ ಹೀಗೆ ಎಲ್ಲ ಅಂಶಗಳನ್ನು ಬೆರೆಸಿ ಈ ಸಿನಿಮಾ ಮಾಡಲಾಗುತ್ತಿದೆ.

#sheethalshetty, #balakninews #filmnews, #kannadasuddigalu, #gadiyaara

Tags