ಸುದ್ದಿಗಳು

ಟಾಲಿವುಡ್ ನಲ್ಲೊಂದು ಆಧುನಿಕ ಪ್ರೇಮಕತೆ ಶುರು!

ಹೈದರಾಬಾದ್, ಆ.09: ಸದಾ ಯುವ ಮನಸ್ಸುಗಳನ್ನು ಆಧಾರವಾಗಿಟ್ಟುಕೊಂಡು ಸ್ನೇಹ, ಪ್ರೀತಿ ಎನ್ನುವ ವಿಷಯದೊಂದಿಗೆ, ವಿಭಿನ್ನವಾದ ಭಾವನೆಗಳನ್ನು ಕೆದಕುತ್ತಾ, ಅವುಗಳನ್ನು ತೆರೆಯ ಮೇಲೆ ತರುವುದರ ಮೂಲಕ ದೊಡ್ಡ ಮಟ್ಟದ ಪ್ರೇಕ್ಷಕರನ್ನು ಗಳಿಸಿರುವ ನಿರ್ದೇಶಕರಲ್ಲಿ ಶೇಖರ್ ಕಮ್ಮಲ ಕೂಡಾ ಒಬ್ಬರು.

ಅಭಿಮಾನಿಗಳು ‘ಫಿದಾ’

ತೆಲುಗು ಚಿತ್ರರಂಗದಲ್ಲಿ, ಕಳೆದ ಹತ್ತು ವರ್ಷಗಳಿಂದ ಫೀಲ್ ಗುಡ್ ಸಿನೆಮಾಗಳನ್ನೇ ಕೊಡುತ್ತಾ ಬಂದಿರುವ ಇವರು, ಕಳೆದ ವರ್ಷ ಇಂತಹದ್ದೇ ‘ಫಿದಾ’ ಎನ್ನುವ ಚಿತ್ರವನ್ನು ಕೊಡುವುದರೊಂದಿಗೆ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಸದ್ಯ ಶೇಖರ್ ಮತ್ತೊಂದು ಆಧುನಿಕ ವಿನೂತನ ಪ್ರೇಮಕತೆಯನ್ನು ತೆರೆಯ ಮೇಲೆ ತರಲು ರಂಗಸಿದ್ಧತೆ ನಡೆಸುತ್ತಿದ್ದಾರೆ.

ಚಿಯಾನ್ ಪುತ್ರ ದೃವಾ

ಈ ನೂತನ ಚಿತ್ರದಲ್ಲಿ ಕಾಲಿವುಡ್ ಸ್ಟಾರ್ ಚಿಯಾನ್ ವಿಕ್ರಮ್ ಅವರ ಪುತ್ರ ದೃವಾ ನಾಯಕ ನಟನಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯಲಿದ್ದಾರೆ. ನಾಯಕಿ ಪಾತ್ರದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿರುವ ಮುದ್ದು ಮೊಗದ ಸುಂದರಿ ಸಾಯಿಪಲ್ಲವಿಯವರನ್ನು, ತೆರೆಗೆ ತರುವ ಪ್ರಯತ್ನದಲ್ಲಿ ನಿರ್ದೇಶಕ ಶೇಖರ್ ವಿಚಾರ ಮಾಡುತ್ತಿದ್ದಾರಂತೆ. ಈ ನಿಟ್ಟಿನಲ್ಲಿ ನಟಿ ಸಾಯಿಪಲ್ಲವಿ ಈಗಾಗಲೇ ಚಿತ್ರಕ್ಕೆ ಸಂಬಂಧಿಸಿದಂತೆ ಕತೆ ಕೇಳಿ, ಓಕೆ ಕೂಡಾ ಮಾಡಿದ್ದಾರೆಂದು ಟಾಲಿವುಡ್ ಮನೆಯಲ್ಲಿ ಗುಸುಗುಸು ಶರುವಾಗಿದೆ.

Tags

Related Articles