ಸುದ್ದಿಗಳು

‘ಷರ್ಲಾಕ್ ಹೋಮ್ಸ್ 3’ ನಲ್ಲಿ ನಟಿಸಲಿರುವ ಜೂಡ್ ಲಾ

"ನಾವು ಮುಂದೆ ಕಥೆಯನ್ನು ಮುಂದುವರೆಸಲು ಆಶಿಸುತ್ತೇವೆ": 'ಕ್ಯಾಪ್ಟನ್ ಮಾರ್ವೆಲ್'

 

“..ಷರ್ಲಾಕ್ ಕಥೆಗಳನ್ನು ನೋಡಿ ಹಲವು ವರ್ಷಗಳೇ ಸಂದಿವೆ. ಹಾಗಾಗಿ ದೀರ್ಘಕಾಲದವರೆಗೆ ಒಬ್ಬರನ್ನೊಬ್ಬರು ನೋಡಿಲ್ಲ ಎಂಬ ಕಾರಣಕ್ಕಾಗಿಯೂ ಮತ್ತೊಮ್ಮೆ ತೆರೆ ಮೇಲೆ ನಟಿಸಲು ಸಿದ್ಧರಾಗುತ್ತಿದ್ದೇವೆ”

ಮುಂಬರುವ ಚಿತ್ರ ‘ಷರ್ಲಾಕ್ ಹೋಮ್ಸ್ 3’ ನಲ್ಲಿ ಡಾ. ಜಾನ್ ವ್ಯಾಟ್ಸನ್ ಅವರ ಪಾತ್ರವನ್ನು ನಟ ಜೂಡ್ ಲಾ ಪುನರಾವರ್ತಿಸುತ್ತಿದ್ದಾರೆ ಎಂಬ ಸುಳಿವು ನೀಡಿದ್ದಾರೆ.

‘ಕ್ಯಾಪ್ಟನ್ ಮಾರ್ವೆಲ್’ ಸ್ಟಾರ್ ಎಂಟರ್ ಟೈನ್ಮೆಂಟ್ ವೀಕ್ಲಿ ಪತ್ರಿಕೆಗೆ ನೀಡಿದ ಹೇಳಿಕೆಯೊಂದರಲ್ಲಿ, “ನಾವು ಮುಂದೆ ಕಥೆಯನ್ನು ಮುಂದುವರೆಸಲು ಆಶಿಸುತ್ತೇವೆ. ಯಾವಾಗಲೂ ಕಥೆಯು ಕಥಾವಸ್ತುವನ್ನು ಸಹ ಅವಲಂಬನೆಯಾಗಿರುತ್ತದೆ. ನಾವು ಮತ್ತೊಮ್ಮೆ ಪರೀಕ್ಷೆಯನ್ನು ಎದುರಿಸಲಿದ್ದೇವೆ. ಷರ್ಲಾಕ್ ಕಥೆಗಳನ್ನು ನೋಡಿ ಹಲವು ವರ್ಷಗಳೇ ಸಂದಿವೆ. ಹಾಗಾಗಿ ದೀರ್ಘಕಾಲದವರೆಗೆ ಒಬ್ಬರನ್ನೊಬ್ಬರು ನೋಡಿಲ್ಲ ಎಂಬ ಕಾರಣಕ್ಕಾಗಿಯೂ ಮತ್ತೊಮ್ಮೆ ತೆರೆ ಮೇಲೆ ನಟಿಸಲು ಸಿದ್ಧರಾಗುತ್ತಿದ್ದೇವೆ” ತಿಳಿಸಿದ್ದಾರೆ.ಇತ್ತೀಚೆಗೆ, ರಾಬರ್ಟ್ ಡೌನಿ ಜೂನಿಯರ್ ಟ್ವೀಟ್ ಮಾಡಿ ಫ್ರ್ಯಾಂಚೈಸ್ ನಲ್ಲಿ ಮತ್ತೊಮ್ಮೆ ಆರಂಭ ಮಾಡುತ್ತಿರುವುದಾಗಿ ಅಣಕಿಸಿ, ಷರ್ಲಾಕ್ ಹೋಮ್ಸ್ ನಂತೆ ಆತನ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. “ನನ್ನ ಷರ್ಲಾಕ್ ಮುಖವನ್ನು ಅಭ್ಯಾಸ ಮಾಡುತ್ತಿರುವುದಾಗಿ ಶೀರ್ಷಿಕೆ ನೀಡಿದ್ದಾರೆ”.

ಫ್ರ್ಯಾಂಚೈಸ್ ನ ಶೀರ್ಷಿಕೆಯನ್ನು ಇನ್ನಷ್ಟೇ ಘೋಷಿಸಬೇಕಾಗಿದೆ. ಇದನ್ನು 2020ರ ಕ್ರಿಸ್ಮಸ್ ನಲ್ಲಿ ಪ್ರದರ್ಶಿಸಲು ಸಿದ್ಧಪಡಿಸಲಾಗುವುದು ಎನ್ನಲಾಗಿದೆ.

Tags