ಸುದ್ದಿಗಳು

ರೈತರ ಸಾಲಮನ್ನಾ ಪ್ರಣಾಳಿಕೆ ಕುರಿತು ಶಿಲ್ಪಾ ಗಣೇಶ್ ಟ್ವಿಟ್ ವಾರ್!

ರಾಜ್ಯದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್‌ ರಾಜ್ಯಾದ್ಯಕ್ಷ, ನಿಯೋಜಿತ ಸಿಎಂ ಹೆಚ್‌‌‌.ಡಿ ಕುಮಾರಸ್ವಾಮಿಯವರು ಚುನಾವಣೆಗೆ ಮುನ್ನ ಒಂದು ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ  ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಸ್ವತಂತ್ರ ಸರ್ಕಾರ ಕೊಟ್ಟಿದ್ರೆ 24 ಗಂಟೆಯಲ್ಲೇ ಸಾಲ ಮನ್ನಾ ಮಾಡುತ್ತಿದ್ದೆ. ಈಗ ಸಮ್ಮಿಶ್ರ ಸರ್ಕಾರ ರಚಿಸುತ್ತಿದ್ದೇವೆ. ಆ ಪಕ್ಷದವರನ್ನೂ ನಾನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎರಡೂ ಪಕ್ಷಗಳೂ ಒಟ್ಟಿಗೆ ಹೋಗಬೇಕು. ಜನತೆಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕು. ನಾನು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಜನ ಸ್ವಲ್ಪ ದಿನ ಕಾಯಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

ಈ ರೀತಿಯ ಹೇಳಿಕೆಗೆ ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ನಿರ್ಮಾಪಕಿ ಶಿಲ್ಪಾ ಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಯಾಗಿದೆ. ಟ್ವಿಟರ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ  ಅವರು,  ”ಕುಮಾರಸ್ವಾಮಿಯವರೇ, ಈ ಸಲ ಹೇಗೋ ಕರ್ನಾಟಕದ ಜನತೆಯನ್ನು ತಮ್ಮ ಪ್ರಣಾಳಿಕೆಗಳ ಮೂಲಕ ಮೂರ್ಖರನ್ನಾಗಿಸಿದ್ದೀರಿ. ಆದರೆ, ಇನ್ನು ಮುಂದೆ ಪ್ರಣಾಳಿಕೆಯ ಪ್ರತಿ ಅಂಶದ ಕೆಳಗೆ ಷರತ್ತುಗಳು ಅನ್ವಯಿಸುತ್ತದೆ ಎಂದು ಸೇರಿಸುವುದು ಉತ್ತಮ” ಎಂದು ಕಾಲೆಳೆದಿದ್ದಾರೆ ಎನ್ನಲಾಗಿದೆ.

Tags

Related Articles

Leave a Reply

Your email address will not be published. Required fields are marked *