ಸಂಬಂಧಗಳುಸುದ್ದಿಗಳು

ನಾವಿಬ್ಬರು ಡೇಟಿಂಗ್ ಮಾಡಿಲ್ಲವೆಂದು ಶಿಲ್ಪಾ ಶೆಟ್ಟಿ ಹೇಳಿದ್ದು ಯಾರಿಗೆ…!

ಹಾಗಿದ್ರೆ ಇತ್ತಲ್ವಾ..ಸಲ್ಲುಗೆ ಶಿಲ್ಪಾ ಶೆಟ್ಟಿ ಮೇಲೆ ಕ್ರಶ್ ... ? 

ಬೆಂಗಳೂರು,ಅ,11: ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಹಾಗೂ ಬ್ಯಾಡ್​ ಬಾಯ್​ ಸಲ್ಮಾನ್ ಖಾನ್ ವಯಸ್ಸು 50 ದಾಟಿದರೂ ಇನ್ನೂ ಮದುವೆಯಾಗದ ಈ ಬಾಕ್ಸಾಫಿಸ್ ಸುಲ್ತಾನನ ಪ್ರೇಮ ಪುರಾಣಕ್ಕೇನು ಕಮ್ಮಿಯಿಲ್ಲ. ಇಂತಹ ಸಲ್ಮಾನ್ ಒಂದು ಕಾಲಕ್ಕೆ ಶಿಲ್ಪಾ ಶೆಟ್ಟಿಅವರ ಮನೆಗೆ ಮಧ್ಯರಾತ್ರಿ ಹೋಗುತ್ತಿದ್ದರಂತೆ.ಸಲ್ಲುಗೆ 50 ದಾಟಿದರೇನಂತೆ ಅವರ ಪ್ರೇಮ ಪ್ರಕರಣಗಳಿಗೇನೂ ಕಡಿಮೆ ಇಲ್ಲ. ಇಂತಹ ಸಲ್ಮಾನ್ ಯಾವುದೇ ನಾಯಕಿಯ ಜೊತೆ ಅಭಿನಯಿಸಲಿ, ಅವರ ಜತೆ ಸಲ್ಮಾನ್‍ ಗೆ ಪ್ರೀತಿಯ ಸಂಬಂಧ ಇದೆ ಎಂಬ ಸುದ್ದಿ ಇಡೀ ಬಿಟೌನ್ ನಲ್ಲಿ ಹಬ್ಬಿಬಿಡುತ್ತದೆ. ಅದೇ ರೀತಿ ಕರಾವಳಿ ಬೆಡಗಿ ಶಿಲ್ಪಾಶೆಟ್ಟಿ ಜೊತೆಗೆ ಸಲ್ಮಾನ್ 5 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಜೋಡಿ ತೆರೆ ಮೇಲೆ ನಿಜ ಜೀವನದ ಪ್ರೇಮಿಗಳನ್ನು ಮೀರಿಸುವಂತೆ ಡ್ಯುಯೆಟ್ ಮಾಡಿದ್ದಾರೆ. ಹೀಗಾಗಿ ಐಶ್ವರ್ಯ ರೈ ನಡುವೆ ಲವ್ ಬ್ರೇಕಪ್ ಆದ ನಂತರ ಸಲ್ಲು ಶಿಲ್ಪಾ ತೆಕ್ಕೆಗೆ ಜಾರಿದ್ದರು. ಶಿಲ್ಪಾ ಜೊತೆ ಪ್ರೇಮದ ಗೀತೆ ಹಾಡಿದ್ದರು ಅನ್ನುವುದು ಹಳೇಯ ಗಾಸಿಪ್​. ಈಗ ಈ ವಿಷಯವಾಗಿ ಶಿಲ್ಪಾ ಮೌನ ಮುರಿದಿದ್ದಾರೆ. ಸಲ್ಲುಗೆ ಶಿಲ್ಪಾ ಶೆಟ್ಟಿ ಮೇಲೆ ಕ್ರಶ್ … ? 

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಹೇಳುವ ಹಾಗೆ ಸಲ್ಮಾನ್ ಹಾಗೂ ನಾನು ಇಬ್ಬರು ಆತ್ಮೀಯ ಸ್ನೇಹಿತರು. ಒಂದು ಕಾಲಕ್ಕೆ ಒಬ್ಬರನ್ನು ಒಬ್ಬರು ಬಿಟ್ಟು ಇರಲಾರದಷ್ಟು ಆತ್ಮೀಯವಾಗಿದ್ದೆವು. ಆಗೆಲ್ಲ ಸಲ್ಮಾನ್ ನಮ್ಮ ಮನೆಗೆ ಮಧ್ಯರಾತ್ರಿ ಸಮಯದಲ್ಲಿ ಬರುತ್ತಿದ್ದರು. ಅಂತಹ ಸಮಯದಲ್ಲೆಲ್ಲ ನಾನು ನಿದ್ದೆ ಮಾಡಿರುತ್ತಿದ್ದೆ. ಆಗ ಅವರು ನೇರವಾಗಿ ನಮ್ಮ ಮನೆಯ ಬಾರ್​ ರೂಮ್​ಗೆ ಹೋಗಿ, ಅಲ್ಲಿ ನನ್ನ ಅಪ್ಪನೊಂದಿಗೆ ಕೂತು ಆರಾಮಾಗಿ ಒಂದೆರಡು ಪೆಗ್ ಡ್ರಿಂಕ್ ಮಾಡಿ ಹೋಗುತ್ತಿದ್ದರು. ಅಷ್ಟರ ಮಟ್ಟಿಗೆ ನಮ್ಮ ನಡುವೆ ಅನೋನ್ಯ ಸ್ನೇಹವಿತ್ತು. ಆದರೆ ನಮ್ಮಿಬ್ಬರ ನಡುವೆ ಯಾವತ್ತೂ ಪ್ರೇಮ ಅನ್ನುವುದು ಹುಟ್ಟಲೇ ಇಲ್ಲ. ನಾವಿಬ್ಬರೂ ಡೇಟಿಂಗ್​ ಮಾಡಿಯೇ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ  ಕರಾವಳಿ ಬೆಡಗಿ.

Tags