ಸುದ್ದಿಗಳು

ಕುಟುಂಬ ಸಮೇತರಾಗಿ ಇಸ್ಕಾನ್ ಗೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ

ಮುಂಬೈ, ಏ.15:

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಸಾಂಪ್ರದಾಯಿಕ ಉಡುಗೆ ಸಾರಿಯಲ್ಲಿ  ಮಿರಿ ಮಿರಿ ಮಿಂಚುತ್ತಿದ್ದರು! ಹೌದು. ರಾಮನವಮಿ ಪ್ರಯುಕ್ತ ಮುಂಬೈಯ ಜುಹು ಪ್ರದೇಶದಲ್ಲಿರುವ ಇಸ್ಕಾನ್ ಮಂದಿರಕ್ಕೆ ಕುಟುಂಬ ಸಮೇತರಾಗಿ ಶಿಲ್ಪಾ ಶೆಟ್ಟಿ ಭೇಟಿ ಕೊಟ್ಟಿದ್ದರು.

ತಾಯಿ ಸುನಂದಾ ಶೆಟ್ಟಿ, ತಂಗಿ ಶಮಿತಾ ಶೆಟ್ಟಿ, ಮಗ ವಿಹಾನ್ ರಾಜ್ ಕುಂದ್ರಾ ಅವರ ಜೊತೆಗೆ ಇಸ್ಕಾನ್ ಮಂದಿರಕ್ಕೆ ಭೇಟಿ ಕೊಟ್ಟಿದ್ದ ಶಿಲ್ಪಾ ಅವರು ಕುಟುಂಬ ಸಮೇತರಾಗಿ ಶ್ರೀಕೃಷ್ಣನ ದರ್ಶನ ಪಡೆದು ಪುನೀತರಾದರು.

ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಉಡುಗೆಯಲ್ಲಿ, ನಾಮಧಾರಿಯಾಗಿ ಶಿಲ್ಪಾ ಶೆಟ್ಟಿ ಮಿಂಚುತ್ತಿದ್ದರು. ಬರೀಯ ರಾಮನವಮಿ ಮಾತ್ರವಲ್ಲ, ಹಬ್ಬ ಹರಿದಿನದ ಸಂಭ್ರಮದಲ್ಲಿ  ಶಿಲ್ಪಾ ಶೆಟ್ಟಿ ಈ ರೀತಿ ಸಂಭ್ರಮಿಸುತ್ತಾ ಬಂದಿದ್ದಾರೆ.

ಬಣ್ಣಬಣ್ಣದ ಕೊಡೆಗಳ ಮೇಲೆ ಮಳೆಹನಿಗಳ ಚಿತ್ತಾರ

#shilpashetty #bollywood #iskantemple

Tags