ಸುದ್ದಿಗಳು

ಸಿದ್ದು ವಿರುದ್ದ ಶಿಲ್ಪಾ ಗಣೇಶ್ ಟೀಕೆ!

ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ಬಾರೀ ಜಿದ್ದಾಜಿದ್ದಿನ ನಡುವೆ ಕೊನೆಗೂ ಜೆಡಿಎಸ್ ಹಾಘು ಕಾಂಗ್ರೆಸ್ ಮೈತ್ರಿಯಲ್ಲಿ ಸರ್ಕಾರ ರಚನೆಯಾಗಿ ಸಚಿವ ಸಂಪುಟ ರಚನೆಯೂ ಆಯ್ತು ಈ ಸಚಿವ ಸ್ಥಾನಗಳ ಹಂಚಿಕೆ ವಿಚಾರದಲ್ಲಿ ಈಗಲೂ ಸಾಕಷ್ಟು ಗೊಂದಲಗಳಿದ್ದು ಕೆಲ ನಾಯಕರು ಅತೃಪ್ತಿಯಾಗಿದ್ದಾರೆ ಎನ್ನುವುದು ತಿಳಿದ ವಿಷಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಮನ್ವಯ ಸಮಿತಿ ಅದ್ಯಕ್ಷ ಹಾಗು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಮಾಧ್ಯಮದವರು ಕೇಳಿದ ಪ್ರಶ್ನೆಗೆ ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ನನಗಂತೂ ಗೊತ್ತಿಲ್ಲ ಎನ್ನುವ ಹೇಳಿಕೆಗೆ ಸಂಭಂದಿಸಿದಂತೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪತ್ನಿ, ಬಿಜೆಪಿ ಮುಖಂಡೆ ಶಿಲ್ಪಾ ಗಣೇಶ್‌ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವುದು ಸುದ್ದಿಯಾಗಿದೆ.

ಮೊನ್ನೆಯಷ್ಟೆ ಹಾಲಿ ಸಿಎಂ ಕುಮಾರಸ್ವಾಮಿ, ವಿಧಾನಸೌಧದಲ್ಲಿಯೂ ಭ್ರಷ್ಟಾಚಾರ ಇದೆ. ಅದನ್ನು ನೆನೆಸಿಕೊಂಡ್ರೆ ಭಯವಾಗುತ್ತೆ ಎನ್ನುವ ಹೇಳಿಕೆ ನೀಡಿದ್ದರು. ಇದಕ್ಕೆ ಮಾರ್ಮಿಕವಾಗಿ ಉತ್ತರಿಸಿದ್ದ ಸಿದ್ದರಾಮಯ್ಯ,  ವಿಧಾನಸೌಧದಲ್ಲಿ ನಾನಂತೂ ಭ್ರಷ್ಟಾಚಾರ ನೋಡಿಲ್ಲ. ಒಂದು ವೇಳೆ ಅಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ ಅದನ್ನು ನಿಲ್ಲಿಸಲು ಹೇಳಿ ಎಂದಿದ್ದರು.

ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಟಾಂಗ್ ನೀಡಿರುವ ಪತ್ನಿ ಶಿಲ್ಪಾ, ‘ಹೇಗೆ ನೋಡೋಕೆ ಸಾಧ್ಯ ಹೇಳಿ…. ವಿಧಾನಸೌಧದಲ್ಲಿ ನೀವು ಎಚ್ಚರ ಇದ್ದಿದ್ದಕ್ಕಿಂತ ನಿದ್ದೆ ಮಾಡಿದ್ದೆ ಜಾಸ್ತಿ,  ಎನ್ನುವ ಹೇಳಿಕೆಯನ್ನು ಸಿದ್ದರಾಮಯ್ಯನವರ ವಿರುದ್ದ ಟ್ವಿಟ್ ಮಾಡುವುದರ ಮೂಲಕ ಟೀಕಿಸಿದ್ದಾರೆ ಎಂದು ಸುದ್ದಿಯಾಗಿದೆ.

Tags

Related Articles