ಸುದ್ದಿಗಳು

ಪ್ರಕಾಶ್ ರೈ ಗೆ ತಿರುಗೇಟು ನೀಡಿದ ಶಿಲ್ಪ ಗಣೇಶ್..

ಸದ್ಯ ಪ್ರಕಾಶ್ ರೈ ಸಿನಿಮಾ ದಿಂದ ಕೊಂಚ ದೂರ ಇದ್ದಾರೆ. ವಿವಾದಾತ್ಮಕ ಹೇಳಿಕೆಗಳನ್ನ ನೀಡುತ್ತಲೇ ಭರ್ಜರಿಯಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ ರೈ.

ಹೌದು, ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದ ರೀತಿ ನಟಿಸಬಲ್ಲ ಬಹುಭಾಷಾ ನಟ ಇದೀಗ ಚರ್ಚೆಗೆ ಗ್ರಾಸವಾಗಿದ್ದಾರೆ. ಕರ್ನಾಟಕವು ಕೊನೆಗೂ ಕೇಸರಿಮಯ ಆಗಲಿಲ್ಲ. ಅದು ವರ್ಣರಂಚಿತವಾಗಿ ಮುಂದುವರೆಯುತ್ತಿದೆ ಎಂದು ಚಿತ್ರನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

55 ಗಂಟೆಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದನ್ನು ಮರೆತುಬಿಡಿ 56ನೇ ಗಂಟೆಯಿಂದ ಹೊಸ ಮುಖ್ಯಮಂತ್ರಿ ಬರುತ್ತಿದ್ದಾರೆ ನೀವು ಚಿಂತಿಸಬೇಡಿ ಎಂದು ಜನರಿಗೆ ರೈ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಲ್ಪಾ ಗಣೇಶ್, ಕೊಂಕಣ ಸುತ್ತಿ ಮೈಲಾರಕ್ಕೆ ಯಾಕೆ ಬರುತ್ತೀರಿ, ನೇರವಾಗಿ ನಿಮ್ಮ ಗಂಜಿ ಕೇಂದ್ರದ ಬಾಗಿಲು ಮತ್ತೊಮ್ಮೆ ತೆರೆಯಿತು ಎಂದು ನೇರವಾಗಿ ಹೇಳಬಹುದಿತ್ತಲ್ಲ ಪ್ರಕಾಶ್ ರಾಜ್ ಅವರೇ ಎಂದಿದ್ದಾರೆ.

ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಪ್ರಕಾಶ್ ರೈ ಹಾಗೂ ಸ್ವಾತಂತ್ರ್ಯ ಹೋರಟಗಾರ ದೊರೆ ಸ್ವಾಮಿ ಅವರು ಭೇಟಿ ನೀಡಿದ್ದರು. ಈ ವೇಳೆ ಯಾವುದೇ ಕಾರಣಕ್ಕೂ ಕೋಮುವಾದಿಗಳ ಜೊತೆ ಕೈ ಜೋಡಿಸಬೇಡಿ ಎಂದು ಮನವಿ ಮಾಡಿದ್ದರು.

ಹೀಗೆ ಇಂದಲ್ಲ ಒಂದು ವಿಚಾರಕ್ಕೆ ರೈ ಸುದ್ದಿಯಾಗುತ್ತಲೇ ಇದ್ದಾರೆ. ಈ ನಿಟ್ಟಿನಲ್ಲೆ ನಿರ್ದೇಶಕರು ಇವರನ್ಬ ಕೊಂಚ ದೂರ ಇಟ್ಟಿದ್ದಾರೆ. ಅವಕಾಶಗಳು ಸಿಗೋದಿಲ್ಲ ಅಂತಾ ಈ ಹಿಂದೆ ಪ್ರಕಾಶ್ ರೈ ಹೇಳೀಕೊಂಡಿದ್ದರು

 

Tags

Related Articles