ಸುದ್ದಿಗಳು

ಟಿಕೆಟ್ ಸಿಗದ ಹಿನ್ನೆಲೆ ವಿದೇಶಕ್ಕೆ ಹಾರಿದ ಶಿಲ್ಪ ಗಣೇಶ್…

ಚುನಾವಣೆ ಬಂತಂದ್ರೆ ಸಾಕು ಟಿಕೆಟ್ ಪೈಪೋಟಿ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ನಟ ಗಣೇಶ್ ಹೆಂಡತಿ ಶಿಲ್ಪ ಗಣೇಶ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಅವರಿಗೆ ಟಿಕೆಟ್ ಮಾತ್ರ ಸಿಗಲಿಲ್ಲ.

ಕರ್ನಾಟಕದ ಚುನಾವಣಾ ಮತದಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ಜನನಾಯಕರು ಪ್ರಚಾರ ಕಾರ್ಯದಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಗೋಲ್ಡನ್‌ ಸ್ಟಾರ್‌ ಗಣೇಶ್ ಪತ್ನಿ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್‌ ಮಾತ್ರ ಎಲೆಕ್ಷನ್ ಕ್ಯಾಂಪೇನ್‌ನಿಂದ ದೂರ ಉಳಿದಿದ್ದಾರೆ.

ಇತ್ತ ಪಕ್ಷದ ಪ್ರಮುಖ ನಾಯಕ-ನಾಯಕಿಯರೆಲ್ಲಾ ಚುನಾವಣೆ ತರಾತುರಿಯಲ್ಲಿದ್ರೆ, ಅತ್ತ ಶಿಲ್ಪಾ ಗಣೇಶ್, ತನಗಿದ್ಯಾವುದರ ಸಂಬಂಧವೇ ಇಲ್ಲ ಅನ್ನೋ ಹಾಗೆ ವಿದೇಶ ಪ್ರವಾಸ ತೆರಳಿದ್ದಾರೆ.

ಶಿಲ್ಪಾ ಗಣೇಶ್ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗುತ್ತೆ ಅನ್ನೋ ಭರವಸೆಯಿಂದ ಆರ್‌.ಆರ್‌. ನಗರದಲ್ಲಿ ಓಡಾಡಿಕೊಂಡಿದ್ದರು. ಆದ್ರೆ ಶಿಲ್ಪಾರಿಗೆ ಟಿಕೆಟ್ ಘೋಷಣೆಯಾದಾಗ ಬೇಸರವಾಗಿದೆಯಂತೆ.. ಶಿಲ್ಪಾ ಬದಲಿಗೆ ಆರ್‌.ಆರ್‌. ನಗರದ ಬಿಜೆಪಿ ಟಿಕೆಟ್ ಪಿ.ಎಂ. ಮುನಿರಾಜು ಗೌಡರ ಪಾಲಾಗಿತ್ತು. ಹೀಗಾಗಿ ತಮಗೆ ಟಿಕೆಟ್ ಸಿಗಲಿಲ್ಲಾ ಅಂತಾ ಶಿಲ್ಪಾ ಗಣೇಶ್ ಬೇಸರಗೊಂಡಿದ್ದಾರೆ.

ಇನ್ನೂ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಶಿಲ್ಪಾ ಗಣೇಶ್ ಚುನಾವಣೆಯ ಸಂದರ್ಭದಲ್ಲಿ ಎಲೆಕ್ಷನ್ ಕ್ಯಾಂಪೇನ್‌ನಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರಂತೆ.  ಹೀಗಾಗಿ ತಮ್ಮ ಮಕ್ಕಳೊಟ್ಟಿಗೆ ರಜೆಯ ಮಜಾವನ್ನು ಸವಿಯಲು ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಯಾರ ಪರವೂ ಪ್ರಚಾರ ಮಾಡಲು ಆಸಕ್ತಿ ತೊರದ ಶಿಲ್ಪಾ ಗಣೇಶ್ ವಿದೇಶ ಪ್ರಯಾಣಕ್ಕೆ ತೆರಳಿದ್ದಾರೆ.

ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಿ ಚುನಾವಣೆಗೆ ಸ್ಪರ್ಧಿಸಲು ಶಿಲ್ಪಾ ಗಣೇಶ್‌ಗೆ ಅವಕಾಶ ಇಲ್ಲವಾಗಿದೆ. ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಮುನಿರತ್ನ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನೂ ಜೆಡಿಎಸ್‌ನಿಂದ ಸ್ಪರ್ಧಿಸಲು ಕೂಡ ಆಗುತ್ತಿಲ್ಲಾ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಟಿ ಅಮೂಲ್ಯ ಮಾವ ರಾಮಚಂದ್ರಪ್ಪ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. ರಾಮಚಂದ್ರಪ್ಪ ಅವರೇ ಆರ್‌. ಆರ್‌. ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಯಾವ ಪಕ್ಷದ ಸಹವಾಸವೂ ಬೇಡ ಅಂತಾ ಶಿಲ್ಪಾ ಗಣೇಶ್ ರಾಜಕೀಯದಿಂದಲೇ ದೂರ ಉಳಿದಿದ್ದು, ವಿದೇಶಕ್ಕೆ ತೆರಳಿದ್ದಾರೆ ಅಂತಾ ವರದಿಯಾಗಿದೆ.

 

Tags

Related Articles