ಸುದ್ದಿಗಳು

ಶಿಲ್ಪಾ ಮಂಜುನಾಥ್ ರಿಗೆ ಸಿಗುತ್ತಿವೆ ಒಂದರ ನಂತರ ಒಂದೊಂದು ಅವಕಾಶಗಳು

ಕನ್ನಡ ಮತ್ತು ತಮಿಳಿನಲ್ಲಿಯೂ ಮಿಂಚುತ್ತಿರುವ ಪ್ರತಿಭೆ

ಬೆಂಗಳೂರು.ಮಾ.13: ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ‘ಮುಂಗಾರು ಮಳೆ2’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶಿಲ್ಪಾ ಮಂಜುನಾಥ್. ಈಗಾಗಲೇ ಇವರು ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಇತ್ತಿಚೆಗಷ್ಟೇ ಶಿಲ್ಪಾ ತಮಿಳಿನಲ್ಲಿ ಕಾಲಿ ಚಿತ್ರದಲ್ಲಿ ನಾಯಕಿಯಾಗಿದ್ದರು. ಕನ್ನಡದಲ್ಲಿಯೂ ಸಹ ‘ನೀವು ಕರೆ ಮಾಡಿದ ಚಂದಾದಾರರು’ ಹಾಗೂ ‘ಸ್ಟ್ರೈಕರ್’ ಚಿತ್ರಗಳಲ್ಲೂ ಸಹ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಇವರ ‘ರಂಗ ಬಿ.ಇ.ಎಂ.ಟೆಕ್’ ಚಿತ್ರದಲ್ಲಿ ನಟಿಸುತ್ತಿದ್ದು, ಇದರ ಜೊತೆಗೆ ಮಲೆಯಾಳಂ ಭಾಷೆಯ ಚಿತ್ರವು ಇದೇ ತಿಂಗಳ 15 ರಂದು ಬಿಡುಗಡೆಯಾಗುತ್ತಿದೆ.

ಇನ್ನು ಕಳೆದ ತಿಂಗಳುಗಳ ಹಿಂದೆಯಷ್ಟೇ ಶಿಲ್ಪಾ ಸ್ಯಾಂಡಲ್ ವುಡ್ ಮೇಲೆ ಕೋಪಗೊಂಡಿದ್ದರು. ತೆಲುಗು, ತಮಿಳು ಚಿತ್ರರಂಗಕ್ಕೆ ಹೋಲಿಕೆ ಮಾಡಿದರೆ ಚಂದನವನದಲ್ಲಿ ಗ್ಲಾಮರ್ ಗೆ ಹೆಚ್ಚು ಮಹತ್ವ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಅವರು ಪರಭಾಷೆಗಿಂತ ಕನ್ನಡದಲ್ಲಿಯೇ ಹೆಚ್ಚು ಬ್ಯುಸಿಯಾಗಿದ್ದಾರೆ.

ಇನ್ನು, ಪಾತ್ರಗಳ ಆಯ್ಕೆ ಬಗ್ಗೆಯೂ ಶಿಲ್ಪಾ ತುಂಬ ಚ್ಯೂಸಿಯಾಗಿದ್ದು ‘ನನಗೆ ಸಂಬಂಧವಿಲ್ಲದ ಪಾತ್ರಗಳಿಗಾಗಿ ನಾನು ಹುಡುಕಾಡುತ್ತೇನೆ. ಅದೇ ನನಗೆ ಚಾಲೆಂಜಿಂಗ್. ಆದರೆ ಆ ರೀತಿಯ ಪಾತ್ರ ನಮ್ಮಂಥವರಿಗೆ ಸಿಗುವುದು ತೀರಾ ವಿರಳ. ನನ್ನದು ಚೂರು ಡಾರ್ಕ್ ಸ್ಕಿನ್. ಅದನ್ನೇ ಇಟ್ಟುಕೊಂಡು, ಇಲ್ಲಿನ ನೇಟಿವಿಟಿಗೆ ನಿಮ್ಮ ಮುಖ ಹೊಂದುವುದಿಲ್ಲ. ನಿಮ್ಮನ್ನು ನೋಡಿದರೆ, ಪಕ್ಕದ್ಮನೆ ಹುಡುಗಿ ಎಂಬ ಫೀಲ್ ಆಗಲ್ಲ ಎಂದು ಅದೆಷ್ಟೋ ಮಂದಿ ಹೇಳಿದ್ದಾರೆ. ಅವರಿಗೆ ಉತ್ತರ ಭಾರತದ ಹುಡುಗಿಯ ಲುಕ್ ಬೇಕು. ಆದರೆ ಅದೇ ಪಕ್ಕದ ತಮಿಳಿನಲ್ಲಿ ಈ ರೀತಿ ನಡೆಯುವುದಿಲ್ಲ.’ ಎನ್ನುತ್ತಾರೆ.

ನಾಳೆ ‘ಒಲೇಲೇ ಒಲೇಲೇ’ ಹಾಡು ರಿಲೀಸ್

#shilpamanjunath, #nextmovies, #balkaninews #kannadasuddigalu,

Tags