ಸುದ್ದಿಗಳು

ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಸೂಪರ್ ಹಿಟ್ ಸಿನಿಮಾಗಳಿವು

ಇಂದು ನಟ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ (ಜುಲೈ12) ಇಂದು 57 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರಿಗೆ ಅಭಿಮಾನಿಗಳು ಸೇರಿದಂತೆ ಸಿನಿಮಾರಂಗದವರು ಸಹ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

1986 ರಲ್ಲಿ ತೆರೆ ಕಂಡ ‘ಆನಂದ್’ ಚಿತ್ರದ ಮೂಲಕ ಬಣ‍್ಣದ ಜಗತ್ತಿಗೆ ಕಾಲಿಟ್ಟ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಈಗಾಗಲೇ 34 ವರ್ಷಗಳನ್ನು ಸಿನಿಮಾರಂಗದಲ್ಲಿ ಕಳೆದಿದ್ದಾರೆ. ಈಗಲೂ ಸಹ ಬೇಡಿಕೆಯಲ್ಲಿರುವ ಅವರು 120 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪ್ರಸಕ್ತ ‘ಭಜರಂಗಿ-2’, ‘ಆಯುಷ್ಮಾನ್ ಭವ’ ಹಾಗೂ ‘ದ್ರೋಣ’ ಚಿತ್ರಗಳಲ್ಲಿ ನಟಿಸುತ್ತಿರುವ ಶಿವಣ್ಣ ಮುಂದಿನ ಮೂರು ವರ್ಷಕ್ಕಾಗುವಷ್ಟು ಬ್ಯುಸಿಯಾಗಿದ್ದಾರೆ. ಈಗಾಗಲೇ ಅವರು ಯುವಪ್ರೇಮಿಯಾಗಿ, ರೌಡಿಯಾಗಿ, ಖಡಕ್ ಪೊಲೀಸ್ ಅಧಿಕಾರಿಯಾಗಿ, ಖಳನಾಯಕನಾಗಿ, ಸೈನಿಕನಾಗಿ, ಹುಚ್ಚನಾಗಿ, ಕ್ರಿಡಾಪಟುವಾಗಿ… ಹೀಗೆ ಹತ್ತು ಹಲವು ಪಾತ್ರಗಳನ್ನು ಮಾಡಿದ್ದಾರೆ.

ಇನ್ನು ಮನೋಜ್ಞ ಅಭಿನಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಹಾಗೆಯೇ ಗೌರವ ಡಾಕ್ಟರೇಟ್ ಪದವಿಯನ್ನೂ ಸಹ ಪಡೆದಿದ್ದಾರೆ. ಅಂದ ಹಾಗೆ ಶಿವರಾಜ್ ಕುಮಾರ್ ಸಿನಿಮಾ ಜೀವನದ ಟಾಪ್ 25 ಸಿನಿಮಾಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1 ಆನಂದ್ : 1986 ರಲ್ಲಿ ತೆರೆಕಂಡ ‘ಆನಂದ್’ ಚಿತ್ರದಿಂದ ಶಿವರಾಜಕುಮಾರ್ ಮತ್ತು ಸುದಾರಾಣಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.

2 ರಥಸಪ್ತಮಿ: 1986 ರಲ್ಲಿ ತೆರೆಕಂಡ ‘ರಥಸಪ್ತಮಿ’ ಚಿತ್ರವು ಸಹ ಅಮೋಘ 25 ವಾರಗಳನ್ನು ಪೂರೈಸಿತು

3 ಮನ ಮೆಚ್ಚಿದ ಹುಡುಗಿ: 1987 ರಲ್ಲಿ ತೆರೆ ಕಂಡ ಈ ಚಿತ್ರವೂ ಸಹ ಅಮೋಘ 25 ವಾರಗಳನ್ನು ಪೂರೈಸಿತು.

ಹೀಗೆ ನಟಿಸಿದ ಮೂರು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಾದವು. ಹೀಗಾಗಿ ಅವರಿಗೆ ಹ್ಯಾಟ್ರಿಕ್ ಹೀರೋ ಎಂಬ ಬಿರುದು ಬಂದಿತು.

ಈ ಚಿತ್ರಗಳ ಅವರು ನಟಿಸಿರುವ ‘ರಣರಂಗ’, ‘ಮೃತ್ಯುಂಜಯ’, ‘ಮುತ್ತಣ್ಣ’, ‘ಓಂ’, ‘ನಮ್ಮೂರ ಮಂದಾರ ಹೂವೇ’, ‘ಜನುಮದ ಜೋಡಿ’, ‘ಜೋಡಿಹಕ್ಕಿ’, ‘ಕುರುಬನ ರಾಣಿ’, ‘ಭೂಮಿ ತಾಯಿಯ ಚೊಚ್ಚಲ ಮಗ’, ‘ಎ ಕೆ 47’, ‘ಹೃದಯ ಹೃದಯ’, ‘ಪ್ರೀತ್ಸೆ’, ‘ಅಸುರ’, ‘ಭಾವ ಭಾಮೈದ’, ‘ತವರಿಗೆ ಬಾ ತಂಗಿ’, ‘ಚಿಗುರಿದ ಕನಸು’, ‘ಜೋಗಿ’, ಅಣ್ಣತಂಗಿ’, ‘ಮೈಲಾರಿ’, ‘ಭಜರಂಗಿ’, ‘ಶಿವಲಿಂಗ’, ‘ವಜ್ರಕಾಯ’, ‘ಮಫ್ತಿ’, ‘ಟಗರು’, ‘ರುಸ್ತುಂ’.. ಹೀಗೆ ಅನೇಕ ಸಿನಿಮಾಗಳು ಸೂಪರ್ ಹಿಟ್ ಗಳಾಗಿವೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಧನರಾಜ್

#shivarajkumar #topmovies #balkaninews #filmnews, #kannadasuddigalu

Tags