ಸುದ್ದಿಗಳು

ವರನಟ ಡಾ. ರಾಜ್ ಕುಮಾರ್ ರನ್ನು ಸ್ಮರಿಸಿದ ಶಿವಾಜಿ ಪ್ರಭು

ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ನಟ ಮತ್ತು ನಿರ್ಮಾಪಕ ಶಿವಾಜಿ ಪ್ರಭು ಅವರು ಅಣ್ಣಾವ್ರರ ಪುಣ್ಯಭೂಮಿಗೆ ಬಂದು ಪೂಜೆ ಸಲ್ಲಿಸಿದರು. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಹೌದು, ಇತ್ತೀಚೆಗೆ ಸಿನಿಮಾ ಒಂದರ ಶೂಟಿಂಗ್‌ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಶಿವಾಜಿ ಪ್ರಭು ಬಿಡುವು ಮಾಡಿಕೊಂಡು ಡಾ.ರಾಜ್‌ ಕುಮಾರ್‌ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಣ್ಣಾವ್ರ ಪೋಟೋಗೆ ಕೈಮಗಿದು, ಪೂಜೆ ಮಾಡಿ ಕೆಲಸ ಸಮಯ ಅಲ್ಲಿಯೇ ಕಳೆದಿದ್ದಾರೆ.

ಅಷ್ಟೇ ಅಲ್ಲದೇ ಅಲ್ಲಿ ನೆರೆದಿದ್ದ ರಾಜ್ ಅಭಿಮಾನಿಗಳೊಂದಿಗೆ ಮಾತನಾಡಿ, ತಮ್ಮ ನೆನಪುಗಳನ್ನು ಅಲ್ಲಿರುವವರೊಂದಿಗೆ ಹಂಚಿಕೊಂಡಿದ್ದಾರೆ.

‘ಪ್ರತಿಬಾರಿಯೂ ಬೆಂಗಳೂರಿಗೆ ಬಂದಾಗ ಎಷ್ಟೇ ಬ್ಯುಸಿಯಿದ್ದರೂ ಸಹ ಬಿಡುವು ಮಾಡಿಕೊಂಡು ರಾಜ್‌ ಸಮಾಧಿಯ ಬಳಿ ಬಂದು ಕೆಲವು ಸಮಯ ಕಳೆಯುತ್ತೇನೆ. ಇದು ಮನಸ್ಸಿಗೆ ಖುಷಿ ನೀಡುತ್ತದೆ. ನನಗೂ ಕನ್ನಡ ಚಿತ್ರರಂಗಕ್ಕೂ ಹಲವಾರು ವರ್ಷಗಳ ನಂಟು. ರಾಜ್‌ ರಿಂದಲೇ ಸ್ಯಾಂಡಲ್‌ ವುಡ್‌ ಇಷ್ಟರ ಮಟ್ಟಿಗೆ ಬೆಳೆದಿದೆ’ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಅತ್ಯದ್ಭುತ ನಿರೂಪಕಿ ಮಜಾ ಟಾಕೀಸ್ ನ ರಾಣಿ!

#rajkumar, #smaraka, #shivajiprabhu, #balkaninews #filmnews, #kannadasuddigalu

Tags