ಸುದ್ದಿಗಳು

ಇಂದು ಶಿವಣ್ಣ- ಗೀತಾ ದಂಪತಿಗಳ ದಂಪತಿಗಳ ವಿವಾಹ ವಾರ್ಷಿಕೋತ್ಸವ

33 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಶಿವರಾಜ್ ಕುಮಾರ್ ದಂಪತಿಗಳು

ಬೆಂಗಳೂರು.ಮೇ.19: ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಜೀವನದಲ್ಲಿ ಇಂದು (ಮೇ 19) ತುಂಬ ಪ್ರಮುಖವಾದ ದಿನ. ಶಿವಣ್ಣ ಬದುಕಿನ ಅನೇಕ ಮುಖ್ಯ ಘಟನೆಗಳು ನಡೆದಿರುವುದು ಇದೇ ದಿನ. ಅದರಲ್ಲಿ ಬಹು ಮುಖ್ಯವಾದದ್ದು ಶಿವಣ್ಣನ ವಿವಾಹ. ಇಂದು ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರ 33 ನೇ ವಿವಾಹ ವಾರ್ಷಿಕೋತ್ಸವ.ಶಿವಣ್ಣ ಮದುವೆಯಾಗಿದ್ದು ಅವರ 24 ವರ್ಷಕ್ಕೆ. ಮದುವೆ ಆಗುವ ಸಮಯದಲ್ಲಿ ಆಗ ತಾನೇ ಅವರ ಮೊದಲ ಸಿನಿಮಾ ‘ಆನಂದ್’ ಬಂದಿತ್ತು. ಈ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಸ್ಯಾಂಡಲ್ ವುಡ್ ಕಿಂಗ್, ಕರುನಾಡ ಚಕ್ರವರ್ತಿ ಶಿವಣ್ಣ ಎಂಟ್ರಿ ಕೊಟ್ಟಿದ್ದರು.ಡಾ.ರಾಜ್ ಕುಮಾರ್ ಕುಟುಂಬದ ಮೇಲೆ ಆಗಿನ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಪ್ರೀತಿ ಇತ್ತು. ಅಲ್ಲದೆ ರಾಜ್ ಕುಮಾರ್ ಅಂದ್ರೆ ಅಷ್ಟೆ ಅಪಾರ ಗೌರವ. ಅವರೇ ಮೊದಲು ತಮ್ಮ ಮಗಳನ್ನ ‘ನಿಮ್ಮ ಮನೆ ಸೊಸೆ ಮಾಡುವ ಆಸೆ ಇದೆ’ ಅಂತ ಡಾ.ರಾಜ್ ಬಳಿ ಹೇಳಿಕೊಂಡಿದ್ದರಂತೆ.

ಹೀಗಾಗಿ ಮೊದಲು ಇಬ್ಬರ ಮನೆಗಳಲ್ಲಿ ಮಾತುಕತೆ ಮಾಡಿದ ಬಳಿಕ ಶಿವಣ್ಣನಿಗೆ ಹುಡುಗಿ ನೋಡಿರುವ ವಿಷಯವನ್ನು ತಿಳಿಸಿದರಂತೆ.ಹೀಗಾಗಿ ಈ ಮದುವೆ ಪಕ್ಕಾ ಅರೆಂಜ್ ಮ್ಯಾರೆಜ್ ಆಗಿದೆ. ಇವರಿಗೀಗ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಇವತ್ತಿಗೂ ಬ್ಯುಸಿಯಿರುವ ನಟರಲ್ಲಿ ಶಿವರಾಜ್ ಕುಮಾರ್ ಕೂಡಾ ಒಬ್ಬರು. ಏನಿಲ್ಲವೆಂದರೂ ಈ ವರ್ಷ ಇವರು ನಟಿಸಿರುವ 4 ಸಿನಿಮಾಗಳು ತೆರೆಗೆ ಬರಲಿವೆ. ಅವುಗಳಲ್ಲಿ ‘ಕವಚ’ ತೆರೆ ಕಂಡಿದ್ದು, ‘ರುಸ್ತುಂ’ ಮುಂದಿನ ತಿಂಗಳು ತೆರೆಗೆ ಬರಲಿದೆ. ಇದಾದ ಬಳಿಕ ‘ದ್ರೋಣ’, ‘ಆನಂದ್’ ಚಿತ್ರಗಳು ರಿಲೀಸ್ ಆಗಲಿವೆ.

ಇನ್ನು ಮತ್ತೊಂದು ವಿಶೇಷತೆಯೆಂದರೆ, ಕನ್ನಡ ಸಿನಿಮಾರಂಗದಲ್ಲಿ ದಾಖಲೆಯನ್ನು ಸೃಷ್ಟಿ ಮಾಡಿರುವ ಚಿತ್ರ ‘ಓಂ’. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಬಿಡುಗಡೆ ಆಗಿ ಇಂದಿಗೆ 24 ವರ್ಷಗಳು ಕಳೆದು ಹೋಗಿವೆ. ಹೀಗಾಗಿ ಈ ದಂಪತಿಗಳಿಗಿಂದು ಎರೆಡೆರೆಡು ಸಂಭ್ರಮ.

1986, ಮೇ 19 ರಂದು ಸಪ್ತಪದಿ ತುಳಿದ ಈ ಜೋಡಿ, ಕಷ್ಟ-ಸುಖಗಳನ್ನ ಸಮನಾಗಿ ಎದುರಿಸಿ 30 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಗಾಸಿಪ್, ವಾದ-ವಿವಾದಗಳಿಂದ ದೂರವಿರುವ ಈ ಜೋಡಿ ಸೆಲೆಬ್ರಿಟಿ ದಂಪತಿಗಳಿಗೆ ಮಾದರಿಯೆನಿಸಿದ್ದಾರೆ. ಇವರ ಜೀವನ ಹೀಗೆಯೇ ಸುಖಮಯವಾಗಿರಲಿ.

ವಯಸ್ಸಿನ ಮೂಲಕ ನನ್ನನ್ನು ಅಳೆಯಬೇಡಿ – ಹ್ಯಾಲೆ ಬೆರ್ರಿ

#shivanna, #family, #balkaninews #flm ,#news, #kannadasuddigalu, #OM ,#kannada

Tags