ಸುದ್ದಿಗಳು

ಸರ್ಜರಿಯ ಬಳಿಕ ಮೊದಲ ಫೋಟೋ ಹಂಚಿಕೊಂಡ ಶಿವಣ್ಣ

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  ಭುಜದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ಲಂಡನ್ ಗೆ ಇತ್ತೀಚೆಗಷ್ಟೇ ತೆರಳಿದ್ದರು. ನಿನ್ನೆಯಷ್ಟೇ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಇದೀಗ ಯಶಸ್ವಿ ಸರ್ಜರಿಯ ಬಳಿಕ ಶಿವಣ್ಣ ತಮ್ಮ ಫೋಟೋವೊಂದನ್ನು ಸೋಶೀಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಹೌದು, “ಶಿವಣ್ಣ ಬೇಗ ಗುಣಮುಖರಾಗಲಿ.. ಅವರ ಆರೋಗ್ಯ ಸುಧಾರಿಸಲಿ”… ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು. ಅವರ ಪೂಜೆಗೆ ಫಲ ಸಿಕ್ಕಿದ್ದು, ಇದೀಗ ಶಿವಣ್ಣನಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದು ಸುಧಾರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಶಿವರಾಜ್ ಕುಮಾರ್ ರವರು ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ಚಿಕಿತ್ಸೆಗೆ ಲಂಡನ್ ಗೆ ತೆರೆಳಿದ್ದರು.  ನಿನ್ನೆ (ಬುಧವಾರ) ಅವರಿಗೆ ಸರ್ಜರಿ ನಡೆದಿದ್ದು, ಆಪರೇಷನ್ ಸಕ್ಸಸ್ ಆಗಿದೆ.

ಸರ್ಜರಿಯ ಬಳಿಕ ಕೈಗೆ ಸ್ಲಿಂಗ್ ಧರಿಸಿ, ಕಣ್ಣಿಗೆ ಗ್ಲಾಸ್ ಧರಿಸಿ ಫೋಟೋಗೆ ಫೋಸ್ ನೀಡಿದ್ದಾರೆ. ಅಭಿಮಾನಿಗಳೆಲ್ಲರೂ ಶಿವಣ್ಣನವರನ್ನು ಯಾವಾಗ ನೋಡುತ್ತೇವೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಅಂದ ಹಾಗೆ ಶಿವಣ್ಣನಿಗೆ ಯಶಸ್ವಿಯಾಗಿ ಆಫರೇಷನ್ ನಡೆದಿದೆ.

ಆದರೆ, ವೈದ್ಯರು ಅವರಿಗೆ ಮೂರು ತಿಂಗಳ ಕಾಲ ವಿಶ್ರಾಂತಿಯಲ್ಲಿರಲು ಹೇಳಿದ್ದಾರೆ. ಹೀಗಾಗಿ ಇನ್ನು 3 ತಿಂಗಳುಗಳ ಕಾಲ ಯಾವುದೇ ಚಿತ್ರದ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲವಂತೆ. ಇಷ್ಟೇ ಅಲ್ಲದೇ ಶಿವಣ್ಣ ಇಂದು ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಯನ್ನು ಓಪನ್ ಮಾಡಿದ್ದಾರೆ. ಈ ಮೂಲಕ ಶಿವಣ್ಣನವರ ಪ್ರತಿಯೊಂದು ಆಗು ಹೋಗುಗಳನ್ನು ಅಭಿಮಾನಿಗಳು ಸೋಶೀಯಲ್ ಮೀಡಿಯಾಗಳ ಮೂಲಕ ತಿಳಿಯಬಹುದಾಗಿದೆ.

ಸದ್ಯ ಶಿವಣ್ಣನ ಆರೋಗ್ಯ ವಿಚಾರಿಸಲು ಪತ್ನಿ ಗೀತಾ ಶಿವರಾಜ್ ಕುಮಾರ್, ಮಗಳು ನಿವೇದಿತಾ ಹಾಗೂ ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಆಪ್ತಗಳು ಸಹ ಲಂಡನ್ ನಲ್ಲಿ ಇದ್ದಾರೆ.

 

ಕ್ರಿಕೆಟರ್ ‘ಲಿಲ್ಲಿ’ ಹಿಂದಿದೆ 4 ತಿಂಗಳ ಪರಿಶ್ರಮ!!

#balkaninews #shivarajkumar #shivarajkumarmovies #shivanna #shivannainlondon

Tags