ಸುದ್ದಿಗಳು

ವಿಡಿಯೋ ಮೂಲಕ ಯೋಧರಿಗೆ ನಮನ ಸಲ್ಲಿಸಿದ ಶಿವಣ್ಣ

ಬೆಂಗಳೂರು, ಫೆ.17:

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಬಸ್ಸಿಗೆ ಆತ್ಮಾಹುತಿ ವ್ಯಕ್ತಿಯಿದ್ದ ಕಾರು ಡಿಕ್ಕಿಹೊಡೆದ ಸ್ಫೋಟದ ದೃಶ್ಯ ನೋಡಿದ್ರೆ ಎಂಥವರ ಮೈ ಕೂಡ ಜಲ್ಲೆನಿಸುವಂತಿದೆ‌. ಪಾಪಿ ಪಾಕಿಸ್ತಾನ ಹಿಂದೆಯಿಂದ ಬಂದು ಕಳ್ಳರಂತೆ ಮಾಡುವ ಹೇಡಿ ಕೆಲಸ ಮತ್ತೊಮ್ಮೆ ಸಾಬೀತಾಗಿದೆ‌. ಇದೀಗ ಈ ಯೋಧರ ಸಾವಿಗೆ ಇಡೀ ದೇಶ ಮರುಗುತ್ತಿದೆ. ನಟ ಶಿವರಾಜ್ ಕುಮಾರ್ ಕೂಡ ಯೋಧರ ಸಾವಿ ಸಂತಾಪ ಸೂಚಿಸಿದ್ದಾರೆ.

ಪುಲ್ವಾಮ ದುರಂತಕ್ಕೆ ಶಿವಣ್ಣ ಸಂತಾಪ

ಹೌದು, ಪುಲ್ವಾಮ ದುರಂತದಲ್ಲಿ ಯೋಧರು ವೀರ ಮರಣವನ್ನಪ್ಪಿದ್ದಾರೆ. ಪಾಪಿ ಪಾಕಿಸ್ತಾನದ ಕೃತ್ಯಕ್ಕೆ ಭಾರತಾಂಬೆಯ ಮಕ್ಕಳು ಜೀವತೆರುವಂತಾಗಿದೆ. ತಮ್ಮ ಪಾಡಿಗೆ ತಾವಿದ್ದರೂ ಕೂಡ ಪಾಕಿಸ್ತಾನದ ಅತಿರೇಕ ಹೆಚ್ಚಾಗಿರೋದು ಭಾರತೀಯರೆಲ್ಲರಲ್ಲೂ ಆಕ್ರೋಶ ಉಂಟು ಮಾಡುವಂತಾಗಿದೆ. ಇಡೀ ದೇಶವೇ ಈ ವೀರ ಯೋಧರಿಗೆ ಸಂತಾಪ ಸೂಚಿಸಿದ್ದಾರೆ.

ವಿಡಿಯೋದಲ್ಲಿ ಶಿವಣ್ಣ ನಮನ

ಇದೀಗ ನಟ ಶಿವರಾಜ್ ಕುಮಾರ್ ಕೂಡ ವಿಡಿಯೋ ಮೂಲಕ ಸಂತಾಪ ಸೂಚಿಸಿದ್ದಾರೆ. ಪುಲ್ವಾಮ ದಲ್ಲಿ ನಡೆದ ಘಟನೆ ನಿಜಕ್ಕೂ ದುರಂತ. ನೋವುಂಟು ಮಾಡಿದೆ. ಅದರಲ್ಲೂ ವೈಯಕ್ತಿಕವಾಗಿ ನನಗೆ ನೋವುಂಟು ಮಾಡಿದೆ. ಇಷ್ಟು ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಅವರ ಕುಟುಂಬಗಳಿಗೆ ಯಾವ ರೀತಿಯಲ್ಲಿ ಸಮಾಧಾನ ಹೇಳಬೇಕೋ ಗೊತ್ತಿಲ್ಲ. ಆ ಸಮಾಧಾನ ತಡೆದುಕೊಳ್ಳಲು ಆಗಲ್ಲ‌. ನಾವು ನಿಮ್ಮ ಜೊತೆಗಿದ್ದೇವೆ. ಇರುತ್ತೇವೆ. ಆ ಘಟನೆ ನಡೆಯಬಾರದಿತ್ತು. ಯಾರಿಗೂ ಪ್ರಾಣ ತೆಗೆಯುವ ಹಕ್ಕಿಲ್ಲ. ಇಂದು ನಾವೆಲ್ಲಾ ಸುರಕ್ಷಿತವಾಗಿದ್ದೇವೆ. ಸಂತೋಷವಾಗಿದ್ದೇವೆ ಎಂದರೆ ಅದಕ್ಕೆ ಈ ಯೋಧರೇ ಕಾರಣ. ಇಡೀ ಎಲ್ಲಾ ಯೋಧರ ಕುಟುಂಬಗಳಿಗೂ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.

ಪುಲ್ವಾಮ ದುರಂತ ಕಂಗಾನ ಆಕ್ರೋಶ…!!!

#sandalwood #kannadamovies #balkaninews #shivarajkumar #shivarajkumarmovies #shivarajkumarselfievideo

Tags

Related Articles