ಸುದ್ದಿಗಳು

ಜನ್ಮ ಕೊಟ್ಟ ಅಮ್ಮನ ಜನುಮದಿನಕ್ಕೆ ಶಿವಣ್ಣ ವಿಶ್!

ರಾಜ್ ಕುಮಾರ್ ಅವರ ಪತ್ನಿಯಾಗಿ, ಚಿತ್ರರಂಗದ ಶಕ್ತಿಯಾಗಿ ಬೆಳೆದವರು ಪಾರ್ವತಮ್ಮರಾಜ್ ಕುಮಾರ್. ಕನ್ನಡ ಚಿತ್ರರಂಗದ ಶಕ್ತಿದೇವತೆಯೆಂದೇ ಪರಿಗಣಿಸಲ್ಪಡುತ್ತಿದ್ದ ಡಾ. ಪಾರ್ವತಮ್ಮ ರಾಜಕುಮಾರ್ ಕನ್ನಡದ ಪ್ರಮುಖ ಚಿತ್ರ ನಿರ್ಮಾಪಕಿ ಮತ್ತು ವಿತರಕಿ `ಪೂರ್ಣಿಮಾ ಎಂಟರ್ಪ್ರೈಸ್’ ಹುಟ್ಟು ಹಾಕಿ, ಹಲವಾರು ಕನ್ನಡ ಚಿತ್ರಗಳನ್ನು ನಿರ್ಮಿಸಿ ಕನ್ನಡಕ್ಕೆ ಅನೇಕ ನಟಿಮಣಿಯರ ಪರಿಚಯ ಮಾಡಿಸಿದ್ದಾರೆ.

ಇದೀಗ ಪಾವರ್ತಮ್ಮ ಇದ್ದಿದ್ದರೆ ಇಂದಿಗೆ ಅವರಿಗೆ 80ನೇ ವರ್ಷದ ಹುಟ್ಟುಹಬ್ಬ. ಈ ಸಲುವಾಗಿ ಶಿವರಾಜ್ ಕುಮಾರ್ ತಮ್ಮ ತಾಯಿಯ ಸವಿನೆನಪಿನಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ

“ಜನ್ಮ ಕೊಟ್ಟ ಅಮ್ಮನ ಜನುಮದಿನ ಈ ಜನ್ಮದಲ್ಲಿ ಈ ಪಾರ್ವತಿಪುತ್ರನಾಗಲು ಪುಣ್ಯ ಮಾಡಿದ್ದೆ … miss you ಅಮ್ಮ” ಎಂದು ಬರೆದುಕೊಂಡಿದ್ದಾರೆ

ಶಿವಣ್ಣ ದಂಪತಿಗಳ ಫೋಟೋಗೆ ಮೆಚ್ಚುಗೆಯ ಸುರಿಮಳೆ

#sandalwood #shivarajkumar #parvathamma

Tags