ಸುದ್ದಿಗಳು

ಶಿವಣ್ಣ ಹಾಗೂ ಗಣೇಶ್ ಅಭಿಮಾನಿಗಳಿಂದ ಹುಟ್ಟುಹಬ್ಬದ ಸಂಭ್ರಮ

ಅಜಾತ ಶತೃ ನಟ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬ ಜುಲೈ 12 ಕ್ಕೆ ಇದೆ. ಅದರಂತೆ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬವೂ ಸಹ ಜುಲೈ 2 ರಂದು ಇದೆ. ಈ ಇಬ್ಬರೂ ಸ್ಟಾರ್ ನಟರ ಹುಟ್ಟುಹಬ್ಬ ಜುಲೈ ತಿಂಗಳ ಒಂದೇ ವಾರದ ಅಂತರದಲ್ಲಿ ಬರುವುದರಿಂದ ಸಹಜವಾಗಿ ಅಭಿಮಾನಿಗಳು ಖುಷಿಯಾಗಿದ್ದು, ಬರ್ತಡೇಗೆ ಇನ್ನು ಕೆಲವೇ ದಿನಗಳು ಇರುವಾಗಲೇ ಸಂಭ್ರಮ ಶುರುವಾಗಿದೆ.

ಈ ವರ್ಷ ಕರುನಾಡ ಚಕ್ರವರ್ತಿ 56ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅಭಿಮಾನಿಗಳು ‘ಶಿವಣ್ಣನ ಅಭಿಮಾನೋತ್ಸವ’ ಎನ್ನುವ ಹೆಸರಿನಲ್ಲಿ ಪೋಸ್ಟರ್ ಡಿಸೈನ್ ಮಾಡಿ ಬಿಡುಗಡೆಯನ್ನು ಮಾಡಿದ್ದಾರೆ.

ಈಗಾಗಲೇ ಹ್ಯಾಟ್ರಿಕ್ ಹೀರೋ ಅಕೌಂಟ್ ನಲ್ಲಿ ಮೂರ್ನಾಲ್ಕು ಚಿತ್ರಗಳಿದ್ದು ಹುಟ್ಟುಹಬ್ಬಕ್ಕೆ ಕನಿಷ್ಠ ಎಂದರೂ ಮೂರು ಹೊಸ ಸಿನಿಮಾಗಳು ಅನೌನ್ಸ್ ಆಗಲಿದೆ.ಹಾಗೂ ಚಂದ್ರಶೇಖರ್ ಬಂಡಿಯಪ್ಪ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದ ಟೈಟಲ್ ಸಹ ಅನೌನ್ಸ್ ಆಗಲಿದ್ದು, ಅವರ ಹಿಂದಿನ ಬ್ಲಾಕ್ ಬ್ಲಸ್ಟರ್ ಹಿಟ್ ಚಿತ್ರ ‘ಸಿಂಹದ ಮರಿ’ ರೀ-ರೀಲಿಸ್ ಆಗುತ್ತಿರುವುದರಿಂದ ಅಭಿಮಾನಿಗಳ ಸಂಭ್ರಮ ಜೋರಾಗಿ ಮನೆ ಮಾಡಲಿದೆ.

ನಟ ಗಣೇಶ್ ಅವರ ಹುಟ್ಟುಹಬ್ಬದ ಸಂಭ್ರಮ ಜುಲೈ 2 ರಂದು ಜೋರಾಗಿ ನಡೆಯಲಿದ್ದು, ನಟ ಗಣೇಶ್ ಅವರ ಆರ್, ಆರ್ ನಗರದ ಅವರ ಮನೆಯಲ್ಲಿ “ಅಭಿಮಾನಿಗಳ ಅಭಿಮಾನದ ಉತ್ಸವ” ನಡೆಯಲಿದ್ದು, ರಾಜ್ಯದ ಮೂಲೆ ಮೂಲೆಯಿಂದ ಅವರ ಅಭಿಮಾನಿಗಳು ಸೇರುವರಿದ್ದಾರೆ. ಅಂದು ಗಣೇಶ್ ಅವರ ಹೊಸ ಚಿತ್ರವಾದ “ಗೀತಾ’ ಚಿತ್ರದ ವಿಶೇಷ ಮಾಹಿತಿಗಳು ಹೊರ ಬರಲಿವೆ.

ಈ ಇಬ್ಬರು ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಿಂದಲೇ ಬರುತ್ತಾರೆ. ಈ ವರ್ಷ ಚಿತ್ರರಂಗಕ್ಕೆ ಶಿವರಾಜ್ ಕುಮಾರ್ ಹಿಟ್ ಸಿನಿಮಾವನ್ನು ಕೊಟ್ಟಿರುವ ಖುಷಿಯಲ್ಲಿರುವ ಫ್ಯಾನ್ಸ್ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿ ಮಾಡಲು ಸಿದ್ದರಾಗುತ್ತಿದ್ದಾರೆ. ಹಾಗೂ ಗಣೇಶ್ ಅವರ ‘ಆರೆಂಜ್’ ಚಿತ್ರವು ಶೂಟಿಂಗ್ ಮುಗಿಸಿಕೊಂಡು ಆದಷ್ಟು ಬೇಗನೇ ತೆರೆಯ ಮೇಲೆ ಬರಲಿದೆ.

Tags

One Comment