ಸುದ್ದಿಗಳು

ಹ್ಯಾಟ್ರಿಕ್ ಹೀರೋ ಎಂಟ್ರಿ!! ಆರ್ಸಿಬಿಗೆ ಹ್ಯಾಟ್ರಿಕ್ ಗೆಲುವು!!!

ಬೆಂಗಳೂರು,ಏ.25:  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಸತತ ಸೋಲುಗಳ ಬಳಿಕ ಇದೀಗ ಪಂಜಾಬ್ ವಿರುದ್ಧ ಗೆಲುವಿನ ಲಯ ಕಂಡುಕೊಂಡಿದ್ದು ನಿನ್ನೆ ಆರ್ಸಿಬಿ ಗೆ ನಟ ಶಿವರಾಜ್ ಕುಮಾರ್ ಸಪೋರ್ಟ್ ಮಾಡಿದ್ದಾರೆ..

ಆರ್ಸಿಬಿ ಗೆ ಸಪೋರ್ಟ್ ಮಾಡಿದ ಶಿವಣ್ಣ

ಶಿವರಾಜ್ ಕುಮಾರ್ ಮೊದಲಿನಿಂದಲೂ ಕ್ರಿಕೆಟ್ ಅಭಿಮಾನಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯವನ್ನು ವೀಕ್ಷಿಸುತ್ತಾ ಸಖತ್ ಎಂಜಾಯ್ ಮಾಡಿದ್ದಾರೆಮಾಡುತ್ತಿದ್ದಾರೆ. ಇವರಿಗೆ ನಿರ್ಮಾಪಕ ಶ್ರೀಕಾಂತ್ ಸಾತ್ ನೀಡಿದ್ದಾರೆ. ಆರ್ಸಿಬಿ ಎಬಿ ಡಿವಿಲಿಯರ್ಸ್  ಬಿರುಸಿನ ಆಟದಿಂದಾಗಿ 202 ರನ್ ಕಲೆಹಾಕಿದ್ದು ಪಂಜಾಬ್ ತಂಡಕ್ಕೆ 203 ರನ್ಗಳ ಗುರಿ ನೀಡಿತ್ತು.. ಬಳಿಕ ಆರ್ ಸಿಬಿ ನೀಡಿದ್ದ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 185 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಪಂದ್ಯದ ಅಂತಿಮ ಓವರ್ ನಲ್ಲಿ 26 ರನ್ ಗಳು  ಬೇಕಿತ್ತು.

ಲೋಕಸಭಾ ಚುನಾವಣೆ ಬೆನ್ನಲ್ಲೇ ಕಮಲವನ್ನು ಎತ್ತಿ ಹಿಡಿದ ಬಾಲಿವುಡ್ ಜನಪ್ರಿಯ ನಟ ಸನ್ನಿ ಡಿಯೋಲ್

#sandalwood #kannadamovies #rcb #shivarajkumar

Tags