ಸುದ್ದಿಗಳು

ಅಭಿಮಾನಿಯ ಮದುವೆ ಆಮಂತ್ರಣ ಸ್ವೀಕರಿಸಿ ವಧು – ವರರಿಗೆ ಶುಭಕೋರಿದ ಶಿವಣ್ಣ …!

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

ಬೆಂಗಳೂರು, ನ.22: ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್. ‘ಆನಂದ್’, ‘ರಥ ಸಪ್ತಮಿ’ ಮತ್ತು ‘ಮನ ಮೆಚ್ಚಿದ ಹುಡುಗಿ’ ಎಂಬ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ಸು ಗಳಿಸಿದ ನಂತರ ಅವರನ್ನು ಹ್ಯಾಟ್ರಿಕ್ ಹೀರೊ ಎಂದು ಕರೆಯಲಾಯಿತು. 100 ಸಿನಿಮಾಗಳನ್ನು ಪೂರೈಸಿ, ಮುನ್ನುಗ್ಗುತ್ತಿರುವ ಶಿವಣ್ಣನ ಚಾರ್ಮ್ ಇಂದಿಗೂ ಕೂಡ ಒಂದಿಷ್ಟು ಕಡಿಮೆಯಾಗಿಲ್ಲ.

ಹೆಚ್ಚು ಅಪಾರ ಅಭಿಮಾನಿಗಳ ಬಳಗ ಹೊಂದಿರೋ ಶಿವಣ್ಣ …!

ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ವಯಸ್ಸಾದ ಮುದುಕರಿಂದ  ಹಿಡಿದು ಚಿಕ್ಕ ಪುಟಾಣಿ ಮಕ್ಕಳವರೆಗೂ ಅಪಾರ ಅಭಿಮಾನಿಗಳಿದ್ದಾರೆ. ಅದರಲ್ಲೂ ಕರುನಾಡಲ್ಲಿ ಅತಿ ಹೆಚು ಅಭಿಮಾನಿಗಳ ಬಳಗ ಹೊಂದಿದ್ದಾರೆ. ಹೌದು, ಯಾರೇ ಇರಲಿ, ಯಾರೇ ಬರಲಿ, ಇವರ ರೇಂಜಿಗೆ ಯಾರಿಲ್ಲ. ಹೌದು ಶಿವಣ್ಣನ ಮೊದಲ ಸಿನಿಮಾದಿಂದ ಹಿಡಿದು ಈಗೀನ ಟಗರು ಹಾಗೂ ದಿ ವಿಲನ್ ಸಿನಿಮಾದವರೆಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಎಲ್ಲೇ ಆಗಲಿ ತಮ್ಮ ಅಭಿಮಾನಿಗಳಿಗೆ ಎಂದು ಯಾವತ್ತೂ ನೋವಿನಿಂದ ಮಾತಾನಾಡಿಲ್ಲ. ಆಗಿನಿಂದ ಈಗಿನವರೆಗೂ ಶಿವಣ್ಣನ ರೇಂಜ್ ಒಂಚೂರು ಬದಲಾಗಿಲ್ಲ. ಕಿರುತೆರೆ , ಕ್ರಿಕೆಟ್, ಸಿನಿಮಾ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳಿಂದಲೂ ಶಿವಣ್ಣ ಹೆಸರುವಾಸಿ.

ಮದುವೆಯ ಆಮಂತ್ರಣ ಸ್ವೀಕರಿಸಿದ ಶಿವಣ್ಣ …!

ಇದೀಗ ಹೊಸ ವಿಷಯವೇನೆಂದರೆ, ಇತ್ತೀಚೆಗೆ ಶಿವಣ್ಣ ಅಭಿಮಾನಿಯೊಬ್ಬರು ಮದುವೆ ಸಮಾರಂಭಕ್ಕೆ ಆಹ್ವಾನಿಸುವ ಸಲುವಾಗಿ ಶಿವಣ್ಣನ ಬಳಿ ತೆರಳಿ ಮದುವೆಯ ಆಮಂತ್ರಣವನ್ನು ನೀಡಿ ಕರೆದಿದ್ದಾರೆ. ವಿಶೇಷವೆಂದರೆ, ಈ ಆಮಂತ್ರಣ ಪತ್ರಿಕೆಯಲ್ಲಿ ಶಿವಣ್ಣ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಪೋಟೋವನ್ನು ಹಾಕಲಾಗಿದೆ. ಈ ನಡುವೆ ಶಿವಣ್ಣ ಮದುವೆಗೆ ಆಗಮಿಸಲು ಸಾಧ್ಯವಾಗದಿದ್ದರೆ, ಕ್ಷಮಿಸಿ ಪ್ರಯತ್ನಿಸುತ್ತೇನೆಂದು ಹೇಳುತ್ತಾ ವಧು ವರರಿಗೆ ಶುಭವನ್ನು ಕೋರಿದ್ದಾರೆ.

Tags