ಸುದ್ದಿಗಳು

‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ದರ್ಶನ್ ಗೆ ಸಿಗದ ಭಾಗ್ಯ..

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ನಂ 1 ಯಾರಿ ವಿತ್ ಶಿವಣ್ಣ’ ಎಲ್ಲರಿಗೂ  ಇಷ್ಟವಾದ ಕಾರ್ಯಕ್ರಮ. ಹಾಗೂ ಅದು ಕೊನೆಯ ಹಂತಕ್ಕೆ ಬಂದಿದೆ. ಕಾರ್ಯಕ್ರಮದ ಒಂದೇ ಒಂದು ಸಂಚಿಕೆ ಈಗ ಬಾಕಿ ಇದೆ. ಗೆಳೆತನದ ಪರಿಕಲ್ಪನೆ ಮೇಲೆ ಬಿಂಬಿತವಾಗಿರುವ ಈ ಕಾರ್ಯಕ್ರಮ ಸಿನಿ ರಂಗದ ಅಪರೂಪದ ಗೆಳಯರು ತಮ್ಮ ಸ್ನೇಹದ ಬಗ್ಗೆ ಶಿವಣ್ಣ ಜೊತೆ ಮನಬಿಚ್ಚಿ ಮಾತನಾಡುತ್ತಾರೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಹಲವಾರು ಸೆಲೆಬ್ರೆಟಿಗಳು ಬಂದು    ಹೋಗಾಗಿದೆ. ನಟರಾದ ಉಪೇಂದ್ರ, ರಮೇಶ್, ಧನಂಜಯ್, ಯೋಗಿ, ಶರಣ್ ಸೇರಿದಂತೆ ಅನೇಕರು ಬಂದಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರ ಸಂಚಿಕೆ ಈ ಶನಿವಾರ ಪ್ರಸಾರ ಆಗಲಿದೆ. ಆದರೆ ದರ್ಶನ್ ಕಾರ್ಯಕ್ರಮದ ಅತಿಥಿ ಆಗುತ್ತಾರೆ ಎಂಬ ಅಭಿಮಾನಿಗಳ ಆಸೆ ನಿರಾಸೆ ಆಗಿದೆ. ಕಾರ್ಯಕ್ರಮ ಈ ವಾರ ಅಂತ್ಯ ಆಗಲಿದ್ದು, ಸುದೀಪ್ ಮತ್ತು ಜೋಗಿ ಪ್ರೇಮ್ ಅವರ ಸಂಚಿಕೆಯ ಮೂಲಕ ಕಾರ್ಯಕ್ರಮಕ್ಕೆ ದಿ ಎಂಡ್ ಆಗಲಿದೆ.

ಈ ಹಿಂದೆ ‘ಫಿಲ್ಮಿಬೀಟ್ ಕನ್ನಡ’ ಸಹ ಈ ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಯಾವ ನಟರನ್ನು ನೋಡಲು ಬಯಸುತ್ತಿರಾ ಎಂಬ ಪ್ರಶ್ನೆಯ ಪೋಲ್ ಏರ್ಪಡಿಸಿತ್ತು. ಆಗ ಅಧಿಕ ಸಂಖ್ಯೆಯ ಓದುಗರು ದರ್ಶನ್ ಅವರ ಹೆಸರನ್ನು ಹೇಳಿದ್ದರು ಇನ್ನು ಸ್ಟಾರ್ ಸುವರ್ಣ ವಾಹಿನಿಯ ಫೇಸ್ ಬುಕ್ ಫೇಜ್ ನಲ್ಲಿ ಕೂಡ ಸಾಕಷ್ಟು ಅಭಿಮಾನಿಗಳ ದರ್ಶನ್ ಅವರನ್ನು ಕರೆ ತರುವಂತೆ ಮನವಿ ಮಾಡಿದ್ದರು. ಆದರೆ ಅಭಿಮಾನಿಗಳ ಕೂಗು ಕೇಳಿಸಲಿಲ್ಲವೋ ಗೊತ್ತಿಲ್ಲ. ಅಭಿಮಾನಿಗಳು ದರ್ಶನ್ ಅವರನ್ನು ಕಾರ್ಯಕ್ರಮದಲ್ಲಿ ನೋಡಲು ಸಾಧ್ಯ ಆಗಲಿಲ್ಲ. ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ 13 ಸಂಚಿಕೆಗಳನ್ನು ಪ್ಲಾನ್ ಮಾಡಿದ್ದು, ಸುದೀಪ್ ಅವರದ್ದೆ ಕೊನೆಯ ಸಂಚಿಕೆ ಆಗಿದೆ. ಈ ಸಂಚಿಕೆ ಇದೇ ಶನಿವಾರ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ಅಷ್ಟೇ ಅಲ್ಲದೆ ತೆಲುಗಿನಲ್ಲಿ ರಾಣ ದಗ್ಗುಬಾಟಿ ಈ ಕಾರ್ಯಕ್ರಮವನ್ನು ನಡೆಸಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *