ಸುದ್ದಿಗಳು

ವಿಭಾ ಸಂಸ್ಥೆಗೆ ಶಿವಣ್ಣ ದೇಣಿಗೆ

ಮತ್ತೊಂದು ಸಾಮಾಜಿಕ ಕಾರ್ಯದಲ್ಲಿ ಶಿವಣ್ಣ

ಬೆಂಗಳೂರು, ಅ.11: ನಟ ವಿಷ್ಣುವರ್ಧನ್ ಅವರ ಟ್ರಸ್ಟ್ ಗೆ ಇದೀಗ ಶಿವರಾಜ್‌ ಕುಮಾರ್ ಒಂದು ಲಕ್ಷ ಹಣ ದೇಣಿಗೆ ನೀಡಿದ್ದಾರೆ.

ನಟ ಶಿವರಾಜ್‌ ಕುಮಾರ್ ಸಿನಿಮಾ ಅಷ್ಟೇ ಅಲ್ಲದೆ ಅನೇಕ ಸಾಮಾಜಿಕ ಕಾರ್ಯದಲ್ಲೂ ನಿಂತವರು, ಕಾವೇರಿ ವಿಚಾರ ಡಬ್ಬಿಂಗ್ ವಿಚಾರ, ಅಸಹಾಯಕರಿಗೆ ಸಹಾಯ ಹೀಗೆ ಶಿವರಾಜ್‌ ಕುಮಾರ್ ಬಗ್ಗೆ ಹೇಳುತ್ತಾ ಹೋದರೆ ಸಮಯ ಸಾಕಾಗುವುದಿಲ್ಲ. ಈಗಾಗಲೇ ಅನೇಕ ಸಾಮಾಜಿಕ ಕಾರ್ಯದಲ್ಲಿ ಮುಳುಗಿರುವ ಶಿವರಾಜ್‌ ಕುಮಾರ್ ಇದೀಗ ಮತ್ತೊಂದು ಸಾಮಾಜಿಕ ಕಾರ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ.

 

View this post on Instagram

 

Meet anirudh

A post shared by Dr.Shivarajkumar (@dr.shivarajkumar) on

ಒಂದು ಲಕ್ಷ ಚೆಕ್ ಹಸ್ತಾಂತರ

ಹೌದು, ವಿಷ್ಣುವರ್ಧನ್ ಸ್ಮರಣಾರ್ಥ ವಿಭಾ ಎನ್ನುವ ಟ್ರಸ್ಟ್ ಒಂದನ್ನು ತೆರೆಯಲಾಗಿದೆ. ಈ ಟ್ರಸ್ಟ್ ನಿಂದ ಬಹಳಷ್ಟು ಮಕ್ಕಳಿಗೆ, ಅಸಹಾಯಕರಿಗೆ ಸೌಲಭ್ಯ, ಸಹಾಯ ಮಾಡಲಾಗಿದೆ. ಇನ್ನು ಈ ಟ್ರಸ್ಟ್‌ ಗೆ ಇದೀಗ ಶಿವರಾಜ್‌ ಕುಮಾರ್ ದೇಣಿಗೆ ಹಣವನ್ನು ನೀಡಿದ್ದಾರೆ. ಸುಮಾರು ಒಂದು ಲಕ್ಷ ಹಣದ ಚೆಕ್‌ ಅನ್ನು ಅನಿರುದ್ದ್ ಗೆ ಹಸ್ತಾಂತರಿಸಿದ್ದಾರೆ.

ಈ ಹಿಂದೆ ಮಾತು ಕೊಟ್ಟಿದ್ದ ಶಿವಣ್ಣ

ಈ ಹಿಂದೆ ಅಂದರೆ ವಿಷ್ಣು ವರ್ಧನ್ ಹುಟ್ಟುಹಬ್ಬದ ದಿನದಂದು ವಿಷ್ಣು ಉತ್ಸವಕ್ಕೆ ಹಾಜರಾಗಿದ್ದ ಶಿವರಾಜ್‌ಕುಮಾರ್,  ದೇಣಿಗೆ ಕೊಡುವುದಾಗಿ ಹೇಳಿದ್ದರು. ಇದೀಗ ಅದರಂತೆ ಹಣ ನೀಡಿದ್ದಾರೆ. ಇನ್ನು ಈ ಹಣವನ್ನು ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಬಳಸಲಾಗುತ್ತಿದೆ.

Tags