ಸುದ್ದಿಗಳು

‘ಆನಂದ್’ ಸಿನಿಮಾ ಶೂಟಿಂಗ್, ಆಡಳಿತ ಮಂಡಳಿ ಸ್ಪಷ್ಟನೆ

‘ಆನಂದ್’ ಸಿನಿಮಾ ವೇಳೆ ದೇವಸ್ಥಾನದಲ್ಲಿ ಪ್ರಮಾದ ನಡೆದಿದೆ ಎನ್ನುವ ಆರೋಪ ‘ಆನಂದ್’ ಸಿನಿಮಾ ಚಿತ್ರ ತಂಡದ ಮೇಲೆ ಬಂದಿತ್ತು. ಕೆಲವೊಂದು ವಿಡಿಯೋಗಳು ಕೂಡ ಹರಿದಾಡಿದ್ದವು. ಪೊಳಲಿ ರಾಜ ರಾಜೇಶ್ವರಿ ದೇವಸ್ಥಾನದಲ್ಲಿ ಈ ಘಟನೆ ನಡೆದಿತ್ತು ಎಂದು ಹೇಳಲಾಗಿತ್ತು. ಬಹಳಷ್ಟು ಮಂದಿ ಒತ್ತೆ ಕೋಲಾ ಆಚರಣೆ ವೇಳೆ ದೇವರಿಗೆ ಅಪಮಾನ ಮಾಡಲಾಗಿದೆ. ಆಚಾರ ವಿಚಾರ ಗೊತ್ತಿಲ್ಲದೆ ಶೂಟಿಂಗ್ ಮಾಡಲಾಗಿದೆ ಎಂದು ಆರೋಪಿಸಿದ್ದರು. ಆದರೆ ಈ ವಿಚಾರವಾಗಿ ಆಡಳಿತ ಮಂಡಳಿ ಸ್ಪಷ್ಟನೆ ನೀಡಿರುವುದು ವರದಿಗಳಾಗಿವೆ.

ಕೇರಳದಿಂದ ಬಂದಿದ್ದ ಒತ್ತೆಕೋಲ ತಂಡ

ಸಿನಿಮಾಗಾಗಿಯೇ ಒತ್ತೆ ಕೋಲಾ ತಂಡ ಕೇರಳದಿಂದ ಬಂದಿದ್ದರಂತೆ. ದೇವಸ್ಥಾನವಲ್ಲದ ಜಾಗದಲ್ಲಿ ಈ ಕಾರ್ಯಕ್ರಮ ಮಾಡಿ ಶೂಟಿಂಗ್ ಮಾಡಲಾಗಿದೆಯಂತೆ. ಜೊತೆಗೆ ಈ ಹಿಂದೆ ಬಹಳಷ್ಟು ಸಿನಿಮಾಗಳಲ್ಲಿ ಈ ತಂಡವೇ ಒತ್ತೆ ಕೋಲ ನಡೆಸಿದೆಯಂತೆ. ಹಾಗಾಗಿ ದೇವಸ್ಥಾನದಲ್ಲಿ ಯಾವುದೇ ಪ್ರಮಾದ ನಡೆದಿಲ್ಲ ಎನ್ನುವುದು ದೇವಸ್ಥಾನ ಆಡಳಿತ ಮಂಡಳಿಯ ಮಾತಾಗಿದೆ.

ದೇವಸ್ಥಾನದಲ್ಲಿ ಯಾವುದೇ ಪ್ರಮಾದ ನಡೆದಿಲ್ಲ

ಇನ್ನೂ ಈ ಕಾರ್ಯಕ್ರಮಕ್ಕೂ ಸಿನಿಮಾ ಶೂಟಿಂಗ್ ಬೇರೊಂದು ಸ್ಥಳದಲ್ಲಿ ಆಗಿರುವುದರಿಂದ ದೇವಸ್ಥಾನದಲ್ಲಿ ಯಾವುದೇ ಪ್ರಮಾದ ನಡೆದಿಲ್ಲ ಎನ್ನಲಾಗುತ್ತಿದೆ. ಆದರೆ ಸ್ಥಳೀಯರೇ ಹೇಳಿದಂತೆ ಹಾಗೂ ವಿಡಿಯೋಗಳನ್ನು ದೇವಸ್ಥಾನ ಇದೆ ಎನ್ನುವುದು ಹಲವರ ಮಾತು.

ಕ್ರಿಕೆಟಿಗ ಬೂಮ್ರಾ ಹಾಗೂ ನಟಿ ಅನುಪಮ ಪರಮೇಶ್ವರನ್ ನಡುವೆ ಲವ್ವಿಡವ್ವಿ..?.

#balkaninews #anandmovie #anandmovieshooting #shooting #shivarajkumarmovies #shivarajkumar

Tags