ಸುದ್ದಿಗಳು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ಇಂದಿಗೆ 33 ವರ್ಷಗಳು

‘ಆನಂದ್’ ಚಿತ್ರದಿಂದ ಹಿಡಿದು ‘ಕವಚ’ ಚಿತ್ರದ ವರೆಗೂ ಸದ್ಯದ ಪಯಣ

ಬೆಂಗಳೂರು.ಫೆ.19

ಚಂದನವನದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕನ್ನಡ ಸಿನಿರಂಗದ ಧೃವತಾರೆ. ಇಂದಿಗೂ ಯಂಗ್ ಅಂಡ್ ಎನರ್ಜಿಟಿಕ್ ಹೀರೋ ಆಗಿದ್ದು, ತಮ್ಮ ವಿಭಿನ್ನ ನಟನೆ ಹಾಗೂ ನೋಟದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಕಲಾವಿದ.

33 ವರ್ಷಗಳು

1986 ಫೆ.19 ರಂದು ಶಿವರಾಜ್ ಕುಮಾರ್ ನಟಿಸಿರುವ ಮೊದಲನೇ ಸಿನಿಮಾ ‘ಆನಂದ್’ ಚಿತ್ರಕ್ಕೆ ಮುಹೂರ್ತವಾದ ದಿನ. ಅಂದಿಗೆ ಈ ಚಿತ್ರ ರಿಲೀಸ್ ಆಗಿ 25 ವಾರಗಳನ್ನು ಪೂರೈಸಿತ್ತು. ಹೀಗಾಗಿ ಇಂದಿಗೆ ಶಿವಣ್ಣ ಸಿನಿಮಾರಂಗಕ್ಕೆ ಕಾಲಿರಿಸಿ 33 ವರ್ಷ ಉರುಳಿದೆ.

ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ, ನಾಟ್ಯ ಸಾರ್ವಭೌಮ

‘ಆನಂದ್’ ಚಿತ್ರದ ಬೆಳ್ಳಿತೆರೆ ಪ್ರವೇಶಿಸಿದ ಶಿವಣ್ಣ, ನಂತರ ‘ರಥಸಪ್ತಮಿ’, ‘ಮನಮೆಚ್ಚಿದ ಹುಡುಗಿ’, ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ಹ್ಯಾಟ್ರಿಕ್ ಹೀರೋ ಹಾಗೂ ನಾಟ್ಯ ಸಾರ್ವಭೌಮ ಎಂದು ಕರೆಸಿಕೊಂಡರು. ನಂತರ ಒಂದೊಂದೇ ಬಿಗ್ ಸಿನಿಮಾಗಳಲ್ಲಿ ಎಲ್ಲಾ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಂಡು, ಈಗಲೂ ಅದೇ ಎನರ್ಜಿಯನ್ನು ಹಾಗೇ ಕಾಯ್ದುಕೊಂಡಿದ್ದಾರೆ ಈ ನಮ್ಮ ಕರುನಾಡ ಚಕ್ರವರ್ತಿ.

ಈಗಾಗಲೇ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಿವಣ್ಣ ಸದ್ಯ ‘ರುಸ್ತುಂ’, ‘ದ್ರೋಣಾ’, ‘ಎಸ್ ಆರ್ ಕೆ’, ‘ಆನಂದ್’ ಸೇರಿದಂತೆ ಏಳೆಂಟು ಸಿನಿಮಾಗಳಲ್ಲಿ ನಟಿಸುತ್ತಿದ್ದು, ‘ಕವಚ’ ಬಿಡುಗಡೆಗೆ ಸಿದ್ದವಾಗಿದೆ.

ಶಿವಸೈನ್ಯ ತಂಡ

ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 33 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಶಿವಣ್ಣನ ಅಭಿಮಾನಿ ಬಳಗ ‘ಶಿವಸೈನ್ಯ’ ತಂಡದಿಂದ ಇಂದು ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ, ಜಮ್ಮುಕಾಶ್ಮೀರದ ಉಗ್ರರ ದಾಳಿಗೆ ಯೋಧರು ಹುತಾತ್ಮರಾಗಿರುವುದರಿಂದ ಸಂಭ್ರಮಿಸುವುದು ಬೇಡ ಅಂತಾ ಶಿವಣ್ಣ ಮನವಿ ಮಾಡಿದ್ದಾರೆ.

ಹೀಗಾಗಿ, ಶಿವಸೈನ್ಯ ಅಭಿಮಾನಿ ಬಳಗದವರು ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ನಿರ್ಧರಿಸಿ, ಸಂಭ್ರಮಾಚರಣೆ ಬದಲು ದೇಣಿಗೆ ಸಂಗ್ರಹಿಸಲು ಮುಂದಾಗಿದೆ.

ಈ ಮೂಲಕ ಕೇವಲ ಸಾಂತ್ವಾನವಷ್ಟೇ ಸಾಲದು. ವೀರ ಸೈನಿಕರಿಗೆ ಇಡೀ ದೇಶವೇ ಕುಟುಂಬವಂತೆ, ನಮ್ಮ ಸ್ವಂತ ಕುಟುಂಬದ ನೋವಿದು. ಬನ್ನಿ ಜೊತೆಯಾಗೋಣ. ಎಂಬ ಉದ್ದೇಶದೊಂದಿಗೆ ಶಿವಸೈನ್ಯ ತಂಡದ ಸರ್ವ ಸದಸ್ಯರು ತೀರ್ಮಾನ ಮಾಡಿದ್ದಾರೆ.

ಶಿವಣ್ಣನ ‘ಶಿವ ಸೈನ್ಯ’ ಅಭಿಮಾನಿ ಸಂಘದಿಂದ ಯೋಧರಿಗಾಗಿ ವಿಶೇಷ ಕಾರ್ಯಕ್ರಮ

#shivarajkumar- #balkaninews #shivasainya, #filmnews, #kannadasuddigalu, #anand, #kavacha

Tags

Related Articles