ಸುದ್ದಿಗಳು

ಶಿವಣ್ಣನ ಅಭಿಮಾನೋತ್ಸವಕ್ಕೆ 150 ದಿನಗಳು ಬಾಕಿ

ಜುಲೈ 12 ರಂದು ಅಭಿಮಾನಿಗಳಿಂದ ಭರ್ಜರಿ ಕಾರ್ಯಕ್ರಮಗಳು

ಬೆಂಗಳೂರು.ಫೆ.12

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.. ಕನ್ನಡ ಚಿತ್ರರಂಗ ಕಂಡ ಶ್ರೇಷ್ಟ ನಟರಲ್ಲಿ ಒಬ್ಬರು. ವರ ನಟ ಡಾ. ರಾಜ್ ಕುಮಾರ್ ಅವರ ಪ್ರಥಮ ಪುತ್ರ. ‘ಆನಂದ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಅಂದಿಗೂ ಇಂದಿಗೂ ಹಾಗೂ ಮುಂದಕ್ಕೂ ಎವರ್ ಗ್ರೀನ್.. ಕಳೆದ ವರ್ಷ ಅವರು ನಟಿಸಿರುವ ‘ಟಗರು’ ಹಾಗೂ ‘ದಿ ವಿಲನ್’ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಈಗ ಏನಿಲ್ಲವೆಂದರೂ ಹೆಚ್ಚು ಕಡಿಮೆ 10 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಶಿವಣ್ಣನ ಅಭಿಮಾನೋತ್ಸವ

ಜುಲೈ 12 1961 ರಂದು ಜನಿಸಿದ ಶಿವಣ್ಣನ 57 ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವರ ಅಭಿಮಾನಿಗಳು ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅದುವೇ ‘ಶಿವಣ್ಣನ ಅಭಿಮಾನೋತ್ಸವ’..
ಹೌದು , ಶಿವಣ್ಣನ ಹುಟ್ಟುಹಬ್ಬದ ದಿನಕ್ಕೆ ಇಂದಿನಿಂದ 150 ದಿನಗಳು ಬಾಕಿ ಉಳಿದಿವೆ. ಹೀಗಾಗಿ ಅವರ ಅಭಿಮಾನಿ ಬಳಗದವರು ಶಿವಣ್ಣನ ಹುಟ್ಟುಹಬ್ಬಕ್ಕೆ 150 ದಿನಗಳು ಬಾಕಿ ಇವೆ. ಹಾಗೆಯೇ ಪ್ರತಿ 50 ದಿನಕ್ಕೆ ಶಿವಸೈನ್ಯ’ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳನ್ನು ಘೋಷಿಸಲಾಗುವುದು ಎಂದಿದ್ದಾರೆ.

ಸಿನಿಮಾಗಳು

ಈ ವರ್ಷ ಏನಿಲ್ಲವೆಂದರೂ ಶಿವರಾಜ್ ಕುಮಾರ್ ನಟಿಸಿರುವ ಮೂರು ಚಿತ್ರಗಳು ಬಿಡುಗಡೆಯಾಗುತ್ತವೆ. ಇದೇ ತಿಂಗಳ 28 ರಂದು ‘ಕವಚ’ ರಿಲೀಸ್ ಆಗುತ್ತಿದ್ದು, ಆನಂತರ ‘ರುಸ್ತುಂ’ ಹಾಗೂ ‘ದ್ರೋಣ’ ಚಿತ್ರಗಳು ಇದೇ ವರ್ಷ ತೆರೆ ಕಾಣಲಿವೆ. ಇವುಗಳೊಂದಿಗೆ ‘ಆನಂದ್’, ‘ವೈರಮುಡಿ’, ‘ಈಸೂರ ದಂಗೆ’, ಸೇರಿದಂತೆ ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿಯೂ ನಟಿಸಲಿದ್ದಾರೆ.

ಮನೆಯಲ್ಲಿ ವಿಲನ್ ಆಗಿದ್ದಾರಂತೆ ಮಹೇಶ್ ಪತ್ನಿ ನಮ್ರತಾ

#shivarajkumar, #balkaninews #filmnews, #birthday150days, #kannadasuddigalu

Tags