ಸುದ್ದಿಗಳು

ಫೇಸ್ ಬುಕ್ ಲೈವ್ ನಲ್ಲಿ ಬಂದು ಮಾತಾಡಿದ ಶಿವಣ್ಣ !!

ಸೆಂಚುರಿ ಸ್ಟಾರ್ ಶಿವಣ್ಣ ಹುಟ್ಟು ಹಬ್ಬ ಈ ಸಂದರ್ಭದಲ್ಲಿ ಶಿವಣ್ಣ ನಿನ್ನೆ ಲಂಡನ್ ನಿಂದ ಮಧ್ಯರಾತ್ರಿ ಫೇಸ್ ಬುಕ್ ಲೈವ್ ಬಂದಿದ್ದರು..

“ಎಲ್ಲರೂ ಅಪೇಕ್ಷೆ ಪಟ್ಟ ಹಾಗೆ ನಾನು ಫೇಸ್ ಬುಕ್ ಗೆ ಬಂದಿದ್ದೇನೆ.. ಇವತ್ತು ನನ್ನ ಹುಟ್ಟು ಹಬ್ಬಕ್ಕೆ ನಿಮ್ಮ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ ತುಂಬಾ ತುಂಬಾ ಥ್ಯಾಂಕ್ಸ್.. ಇನ್ನು ಮುಂದೆ ನನ್ನ ಸಿನಿಮಾದ ಎಲ್ಲಾ ಅಪ್ಡೇಟ್ಸ್ ಕೊಡುತ್ತಾ ಹೋಗುತ್ತೇನೆ.. ನಾನು ಲಂಡನ್ ನಲ್ಲಿದ್ದೇನೆ ಹಾಗೂ ನನಗೆ ಭುಜದ ಶಸ್ತ್ರ ಚಿಕಿತ್ಸೆ ಇದೆ ಎಂದು ತಿಳಿದಿದಕ್ಕೆ ನೀವೆಲ್ಲಾ ಪೂಜೆ ಮಾಡಿದ್ದೀರಾ ಆ ಋಣವನ್ನು ಹೇಗೆ ತೀರಿಸೋದು ನನಗೆ ಗೊತ್ತಿಲ್ಲ.

ನಿಮ್ಮಂತಹ ಅಭಿಮಾನಿಗಳನ್ನು ಪಡೆಯಲು ನಾನು ತುಂಬಾ ಪುಣ್ಯ ಮಾಡಿರಬೇಕು, ಸರ್ಜರಿ ತುಂಬಾ ಚೆನ್ನಾಗಿ ಆಯ್ತು.. ನಾನು ಇನ್ನೂ ಚೆನ್ನಾಗಿ ಫೈಟ್ ಹಾಗೂ ಡಾನ್ಸ್ ಮಾಡಬಹುದು.. ನೀವು ನನ್ನ ಹುಟ್ಟುಹಬ್ಬಕ್ಕೆ ಎಷ್ಟು ಮಿಸ್ ಮಾಡಿಕೊಂಡಿದ್ದೀರೋ ನಾನೂ ನಿಮ್ಮೆಲ್ಲರನ್ನು ನನ್ನ ಹುಟ್ಟುಹಬ್ಬಕ್ಕೆ ತುಂಬಾ ಮಿಸ್ ಮಾಡ್ತೇನೆ.. ನಮ್ಮ ಮನೆಯ ಹತ್ತಿರ ನಾನು ಬಂದ ಮೇಲೆ ಎಲ್ಲರಿಗೂ ಒಂದು ಗೆಟ್ ಟು ಗೆದರ್ ಮಾಡೋಣ .. ಹೀಗೆ ನಿಮ್ಮ ಆಶೀರ್ವಾದ ನನ್ನ ಮೇಲೆ ಸದಾ ಇರಲಿ”ಎಂದು ಶಿವಣ್ಣ ಫೇಸ್ ಬುಕ್ ಲೈವ್ ನಲ್ಲಿ ಬಂದು ಮಾತಾಡಿದ್ದಾರೆ..

ಮಗು ಆಗಮನದ ಸಮಯದಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ ನಟಿ!

#shivarajkumar #shivarajkumarmovie #shivannafblive

Tags