ಸುದ್ದಿಗಳು

ಕುಟುಂಬ ಸಮೇತವಾಗಿ ಅಮೇರಿಕಾಗೆ ಪಯಣ ಬೆಳಸಿದ ಶಿವಣ್ಣ

ಬೆಂಗಳೂರು, ಜ.18: ಶಿವರಾಜ್‌ಕುಮಾರ್ ಅಂದ್ರೆನೇ ಎಂಗ್ ಅಂಡ್ ಎನೆರ್ಜೆಟಿಕ್ ಅನ್ನೋದು ಗೊತ್ತಿರುವ ವಿಚಾರ. ಯಾಕಂದ್ರೆ ಯಾವಾಗಲೂ ಸಿನಿಮಾದಲ್ಲಿಯೇ ಬ್ಯುಸಿ ಇರುತ್ತಾರೆ. ಅಷ್ಟೆ ಅಲ್ಲ ಒಂದು ಸ್ವಲ್ಪನೂ ಸುಸ್ತಾಗದ ರೀತಿಯಲ್ಲಿಯೇ ಕೆಲಸ ಮಾಡುತ್ತಾರೆ. ಈ ಎಲ್ಲಾ ಬ್ಯುಸಿ ನಡುವೆಯೂ ಈ ನಟ ಫ್ಯಾಮಿಲಿಗೆ ಟೈಂ ಕೊಡೋದು ಮಾತ್ರ ಕಡಿಮೆಯಾಗಿಲ್ಲ. ಕುಟುಂಬದ ಜೊತೆ ಜೊತೆಗೆ ಸುತ್ತುತ್ತಾನೆ ಇರ್ತಾರೆ.

ಬೆಳಗಿನ ಜಾವ ವಿಮಾನ ಹತ್ತಿದ ಕುಟುಂಬ

ಇದೀಗ ಶಿವರಾಜ್‌ಕುಮಾರ್ ಹಾಗೂ ಅವರ ಕುಟುಂಬ ಅಮೇರಿಕಾ ಕಡೆ ಹೊರಟಿದೆ. ನಿನ್ನೆ ಬೆಳಗಿನ ಜಾವದಲ್ಲಿ ಕುಟುಂಬ ಸಮೇತರಾಗಿ ಶಿವರಾಜ್‌ಕುಮಾರ್ ಪ್ರವಾಸ ಹೊರಟಿದೆ. ಯಾವುದೋ ಖಾಸಗೀ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಈ ನಟ ಹಾಗೂ ಇವರ ಕುಟುಂಬ ವಿದೇಶಕ್ಕೆ ತೆರಳಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಬಿಡುಗಡೆಗೆ ರೆಡಿಯಾಗಿರುವ ಸಿನಿಮಾಗಳು

ಇನ್ನು ಫ್ರೀ ಸಮಯದಲ್ಲಿ ಶಿವರಾಜ್‌ಕುಮಾರ್ ಫ್ಯಾಮಿಲಿ ಟ್ರಿಪ್ ಮಾಡ್ತಾನೇ ಇರ್ತಾರೆ. ಇದೀಗ ಅಮೇರಿಕಾ ಪ್ರವಾಸ ಕೂಡ ಒಂದು ಟ್ರಿಪ್ ತರಹದ್ದೇ. ಇನ್ನು ಸದ್ಯ ಶಿವಣ್ಣ ಅಭಿನಯದ ಕವಚ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇನ್ನು ರುಸ್ತುಂ ಸಿನಿಮಾ ಕೂಡ ಮುಗಿಯುವ ಹಂತಕ್ಕೆ ಬಂದಿದೆ.

#shivarajkumarfamilytrip #balkaninews #shivanna

Tags