ಸುದ್ದಿಗಳು

ನಾವು ವೋಟ್ ಚಲಾಯಿಸಿದ್ರೆ ಒಳ್ಳೆ ಸರ್ಕಾರವನ್ನು ಆಯ್ಕೆ ಮಾಡಬಹುದು: ಶಿವರಾಜ್ ಕುಮಾರ್

ಇಂದು ಮೊದಲ ಹಂತದ ಲೋಕಸಭಾ ಚುನಾವಣೆ

ಬೆಂಗಳೂರು.ಏ.18: ಇಂದು ನಡೆಯುತ್ತಿರುವ ಮೊದಲ ಹಂತದ ಲೋಕಸಭಾ ಚುನಾವಣೆ ರಂಗೇರುತ್ತಿದ್ದು, ನಟ ಶಿವರಾಜ್ ಕುಮಾರ್ ಹಾಗೂ ದಂಪತಿಗಳು ರಾಚೇನಹಳ್ಳಿ ಸರ್ಕಾರಿ ಶಾಲೆ ಮತಗಟ್ಟೆ 346 ನಲ್ಲಿ ಮತದಾನ ಮಾಡಿದ್ದಾರೆ.
ಉತ್ತರ ಲೋಕಸಭಾ ಕ್ಷೇತ್ರ ,ಬ್ಯಾಟರಾಯನಪುರದ ರಾಚೇನಹಳ್ಳಿ ಯಲ್ಲಿ ಮತದಾನ ಮಾಡಿದ ಮಾಡಿದ ಶಿವಣ್ಣ, ಪತ್ನಿ ಗೀತಾ ಹಾಗೂ ಮಗಳು ಮಾತನಾಡಿದ್ದಾರೆ.

‘ಪ್ರತಿಯೊಬ್ಬರು ವೋಟ್ ಮಾಡಬೇಕು. ಒಂದು ವೋಟ್ ನಿಂದ ಒಬ್ಬ ಒಳ್ಳೆ ಅಭ್ಯರ್ಥಿ ಸೋಲುವ ಪರಿಸ್ಥಿತಿ ಇರುತ್ತದೆ. ನಾವು ವೋಟ್ ಚಲಾಯಿಸಿದ್ರೆ ಒಳ್ಳೆ ಸರ್ಕಾರವನ್ನು ಆಯ್ಕೆ ಮಾಡಬಹುದು. ಎಲ್ಲರೂ ಬಂದು ವೋಟ್ ಮಾಡಬೇಕು. ಅವರು ಏನು ಮಾಡಿದ್ರು ಅನ್ನೋದಕ್ಕಿಂದ ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎಂಬುದು ಮುಖ್ಯ. ಎಲ್ಲರೂ ಹಕ್ಕು ಎನ್ನುತ್ತಿರಾ, ಅವರು ಬಂದು ನಮ್ಮ ಹಕ್ಕು ಚಲಾಯಿಸಿದ್ರೆ ಮಾತ್ರ ಕೇಳುವ ಅಧಿಕಾರವಿರುತ್ತದೆ. ಆದ್ರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ’ ಎಂದು ಶಿವಣ್ಣ ಹೇಳಿದ್ದಾರೆ.

ಮತ ಚಲಾಯಿಸಿದ ನಟಿ ಪ್ರಣಿತಾ

#shivarajukar #voting #balkaninews #kannadasuddigalu .# lokasabhaelection2019,

Tags