ಸುದ್ದಿಗಳು

ಚುನಾವಣಾಧಿಕಾರಿಗಳಿಗೆ ಸಹಕರಿಸಿದ ಶಿವಣ್ಣ

ಬೆಂಗಳೂರು, ಮಾ.29:

ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಚುನಾವಣಾ ಆಯೋಗ ಕೂಡ ಈಗಾಗಲೇ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಇನ್ನೂ ಸಾಮಾನ್ಯವಾಗಿ ಚುನಾವಣಾ ಸಮಯದಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಏನಾದ್ರೂ ಆಮಿಷ ಒಡ್ಡುತ್ತಾರೆ. ಹಣ, ಚಿನ್ನ, ಮದ್ಯ ಹೀಗೆ ಏನಾದರೂ ಸಾಗಿಸಬಹುದು ಅಂತಾ ವಾಹನಗಳನ್ನು ಚೆಕ್ ಮಾಡೋದು ಕಾಮನ್. ಹೀಗೆ ಎಲ್ಲರ ವಾಹನ ಚೆಕ್ ಮಾಡುವ ವೇಳೆ ಶಿವಣ್ಣ ಕಾರ್ ಕೂಡ ಚೆಕ್ ಮಾಡಿದ್ದಾರೆ.

ಶಿವಣ್ಣನ ವಾಹನ ತಪಾಸಣೆ

ಹೌದು, ಸದ್ಯ ರಾಜ್ಯದೆಲ್ಲೆಡೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಬರುವ ವಾಹನಗಳನ್ನು ಚೆಕ್ ಮಾಡಲಾಗುತ್ತಿದೆ. ಹೀಗೆ  ಗೌರಿಬಿದನೂರು ರಾಜ್ಯ ಹೆದ್ದಾರಿ ಸಂಖ್ಯೆ-9ರಲ್ಲಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿತ್ತು. ಈ ವೇಳೆ ದಾರಿಯಲ್ಲಿ ಶಿವರಾಜ್ ಕುಮಾರ್ ವಾಹನ ಕೂಡ ಬಂದಿದೆ. ಈ ವೇಳೆ ಶಿವರಾಜ್ ಕುಮಾರ್ ವಾಹನವನ್ನೂ ಚುನಾವಣಾಧಿಕಾರಿಗಳು ಅಡಗಟ್ಟಿದ್ದಾರೆ. ಈ ವೇಳೆ ಶಿವಣ್ಣನನ್ನು ನೋಡಿದ ಅಧಿಕಾರಿಗಳು ಫುಲ್ ಶಾಕ್ ಆಗಿದ್ದಾರೆ.

ಫೋಟೋ ತೆಗೆಸಿಕೊಂಡ ಅಧಿಕಾರಿಗಳು

‘ಆನಂದ್’ ಶೂಟಿಂಗ್ ಹೋಗುವ ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆದಿದ್ದು ಶಿವಣ್ಣನನ್ನು ನೋಡಿದ ಚುನಾವಣಾಧಿಕಾರಿಗಳು ಫುಲ್ ಖುಷಿಯಾಗಿದ್ದಾರೆ. ಇನ್ನೂ ಈ ವೇಳೆ ಅಧಿಕಾರಿಗಳಿಗೆ ಸಮಾಧಾನ ಹಾಗೂ ಸಾಮಾನ್ಯ ವ್ಯಕ್ತಿಗಳಂತೆ ಸಹಕಾರ ನೀಡಿದ್ದಾರೆ ಶಿವರಾಜ್ ಕುಮಾರ್. ಇನ್ನೂ ತಪಾಸಣೆ ನಡೆದ ನಂತರ ಅಧಿಕಾರಿಗಳು ಶಿವರಾಜ್ ಕುಮಾರ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸದ್ಯ ವೈರಲ್ ಆಗಿದೆ.

 

View this post on Instagram

 

Work Is Worship. Collaborate with Election Officers.!

A post shared by Dr.Shivarajkumar (@dr.shivarajkumar) on

ಗೋಕಾಕ್ ನಲ್ಲಿ ‘ನಾಥೂರಾಮ್’..!!!

#sandalwood #kannadamovies #shivarajkumar #shivarajkumarinstagram #electioncommittee

Tags

Related Articles