ಸುದ್ದಿಗಳು

ಐಟಿ ರೇಡ್ ದಾಳಿ ಬಗ್ಗೆ ಶಿವಣ್ಣ ಹೇಳಿದ್ದೇನು…?

ಬೆಂಗಳೂರು, ಜ.05: ನಟ ಶಿವರಾಜ್ ಕುಮಾರ್ ಮನೆಯಲ್ಲಿ ಬಹುತೇಕವಾಗಿ ಐಟಿ ಪರಿಶೀಲನೆ ಮುಗಿದಿದೆ. ಈಗಾಗಲೇ ಐಟಿ ಅಧಿಕಾರಿಗಳು ಒಂದಿಷ್ಟು ದಾಖಲೆಗಳನ್ನು ಪಡೆದಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಶಿವರಾಜ್ ಕುಮಾರ್, ಐಟಿ ದಾಳಿ ಬಗ್ಗೆ ಕಾರಣ ನನಗೆ ಗೊತ್ತಿಲ್ಲ, ಮೊದಲ ಬಾರಿ ನನ್ನ ಮನೆ ಮೇಲೆ ರೇಡ್ ಆಗಿರೋದು. 1984 – 85ರಲ್ಲಿ ಚೆನ್ನೈನಲ್ಲಿ ಇದ್ದಾಗ ಒಮ್ಮೆ ರೈಡ್ ಆಗಿತ್ತು ಅಲ್ಲಿ ಇನ್ಸ್ಟಿಟ್ಯೂಟ್ ನಲ್ಲಿ ಓದುತ್ತಿದ್ದೆ.

ರೇಡ್ ಆಗ್ತಿರುವಾಗ ಸ್ವಲ್ಪ ಬೇಜಾರ್ ಆಗ್ತಿತ್ತು, ಇರಿಟೇಟ್ ಆದ್ರೂ ಸಹಕಾರ ನೀಡ್ಬೇಕಿತ್ತು. ಹೈ ಬಜೆಟ್ ಚಿತ್ರಗಳ ವಿಚಾರವಾಗಿ ಮಾತನಾಡಿದ ಶಿವಣ್ಣ, ಐಟಿ ಪೇಪರ್ ಎಲ್ಲಾ ಸರಿ ಇರುತ್ತೆ, ಲೇಟ್ ಆದ್ರೂ ಎಸ್ಟ್ರಾ ಕಟ್ಟಿರ್ತೀವಿ. ಪ್ರೊಡಕ್ಷನ್ ಖರ್ಚುಗಳೂ ಇರುತ್ತೆ. ಹೊರದೇಶಗಳಿಗೆ ಹೋದ ಖರ್ಚುಗಳೂ ಇರುತ್ತದೆ.

ಹೈಬಜೆಟ್ ಚಿತ್ರ ಅಂದ್ರೆ ಸಂಭಾವನೆ ಇಷ್ಟು ಅಂತ ಇರತ್ತೆ. ‘ಟಗರು’, ‘ದಿ ವಿಲನ್’, ‘ಕವಚ’ ಬರ್ತಿದೆ ಎಂದರು. ಇನ್ನು, ಮೂರು ದಿನಗಳ ಪರಿಶೀಲನೆ ಕುರಿತಂತೆ ಮಾತನಾಡಿದ ಶಿವರಾಜ್ ಕುಮಾರ್, ಮನೆ ತುಂಬಾ ದೊಡ್ಡದು ಇದ್ದಿದ್ರಿಂದ ಹುಡುಕಲು ಸಮಯ ಹಿಡಿದಿರಬಹುದು. ಮನೆಯೊಳಗೆ ಏನಾಗ್ತಿತ್ತು ಎಂಬುದು ಗೊತ್ತಿಲ್ಲ. ಸ್ವಲ್ಪ ಡಾಕ್ಯುಮೆಂಟ್ ತಗೊಂಡು ಹೋಗಿದ್ದಾರೆ. ಮತ್ತೆ ವಿಚಾರಣೆಗೆ ಕರೆದ್ರೆ ಹೋಗ್ತೀನಿ‌. ಎಲೆಕ್ಷನ್ ಗೆ ನಿಂತಿದ್ರಿಂದ ಗೀತಾ ಅವರನ್ನು ಕೂಡ ವಿಚಾರಣೆ ಮಾಡಿದ್ದರು.  ಅಭಿಮಾನಿಗಳಿಗೆ ಆತಂಕ ಇರತ್ತೆ, ಬೆಳಗ್ಗೆ ಮಲಗಿದಾಗ ಐದು ಗಂಟೆ ಆಗಿತ್ತು ಯಾರ ಬಳಿಯೂ ಮಾತಾಡಿಲ್ಲ ಎಂದು ಹೇಳಿದ್ದಾರೆ.

 

Tags

Related Articles