ಸುದ್ದಿಗಳು

ಶಿರಡಿಯಲ್ಲಿ ಶಿವಣ್ಣನ ಫ್ಯಾಮಿಲಿ

ಕುಟುಂಬ ಸಮೇತರಾಗಿ ಶಿರಡಿಗೆ ತೆರಳಿದ ಶಿವರಾಜ್ ಕುಮಾರ್

ಬೆಂಗಳೂರು, ಡಿ.07: ನಟ ಶಿವರಾಜ್‌ಕುಮಾರ್ ಕೊಂಚ ರಿಲೀಫ್ ಆಗಿದ್ದಾರೆ. ಸದಾ ಕಾಲ ಚಿತ್ರೀಕರಣದಲ್ಲಿ ನಿರತರಾಗಿರುವ ಶಿವಣ್ಣ ಇದೀಗ ಸಿನಿಮಾದಿಂದ ಸ್ವಲ್ಪ ದಿನಗಳ ಕಾಲ ಬಿಡುವು ಮಾಡಿಕೊಂಡು ದೇವಸ್ಥಾನಗಳಿಗೆ ತೆರಳಿದ್ದಾರೆ.

ನಟ ಶಿವರಾಜ್‌ ಕುಮಾರ್ ಯಾವಾಗ ನೋಡಿದ್ರು ಸಿನಿಮಾ ಬ್ಯುಸಿಯಲ್ಲಿಯೇ ಇರುತ್ತಾರೆ. ವರ್ಷಕ್ಕೆ ಏನಿಲ್ಲ ಅಂದರೂ ಎರಡು ಸಿನಿಮಾಗಳನ್ನು ಅಭಿಮಾನಿಗಳಿಗೆ ನೀಡುವ ಶಿವಣ್ಣ ಸದ್ಯ ‘ಕವಚ’, ‘ರುಸ್ತುಂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಇದೀಗ ಇವೆಲ್ಲದರ ನಡುವೆ ಶಿವಣ್ಣ ಅಂಡ್ ಫ್ಯಾಮಿಲಿ ಶಿರಡಿಗೆ ಭೇಟಿ ನೀಡಿದ್ದಾರೆ.ಶಿವರಾಜ್‌ಕುಮಾರ್ ರಿಂದ ಬಾಬ ದರ್ಶನ

ಹೌದು, ಇತ್ತೀಚೆಗೆ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಶಿರಡಿ ಸಾಯಿಬಾಬ ಸನ್ನಿಧಿಗೆ ಹೋಗಿ ಬಾಬನ ದರ್ಶನ ಮಾಡಿದ್ದಾರೆ. ದೇವರ ಮೇಲೂ ಅಪಾರ ಗೌರವ ಹೊಂದಿರುವ ಈ ನಟ ಇದೀಗ ಶಿರಡಿ ಬಾಬನಿಗೆ ನಮಸ್ಕಾರ ಹಾಕಿದ್ದಾರೆ.  ಶಿವಣ್ಣನ ಜೊತೆಗೆ ಪತ್ನಿ ಗೀತಾ ಹಾಗೂ ಮಗಳು ನಿವೇದಿತಾ ಕೂಡ ಶಿರಡಿಗೆ ತೆರಳಿ ಬಾಬನ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಇನ್ನು, ನಿರ್ದೇಶಕ ರಘುರಾಮ್ ಕೂಡ ಈ ವೇಳೆ ಜೊತೆಗಿದ್ದರು. ಈ ವೇಳೆ ಬಾಬನಿಗೆ ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ.

 

Tags