ಸುದ್ದಿಗಳು

ಯುಗಾದಿ ಹಬ್ಬಕ್ಕೆ ಬಿಡುಗಡೆಯಾಗಲಿದೆ ಶಿವಣ್ಣನ ‘ಕವಚ’ ಚಿತ್ರ

ಬೆಂಗಳೂರು, ಮಾ.03:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ‘ಕವಚ ಸಿನಿಮಾ ಈಗಾಗಲೇ ಬಿಡುಗಡೆಯಾಗಿರಬೇಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ತೆರೆ ಕಾಣಲು ಆಗಿರಲಿಲ್ಲ. ಆದರೆ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಶೆಯಾಗಬಾರದೆಂಬ ಕಾರಣಕ್ಕೆ ಈಗ ರಿಲೀಸ್ ಡೇಟ್ ಪಕ್ಕಾ ಆಗಿದೆ.

ಏಪ್ರಿಲ್ 6ಕ್ಕೆ

ಈಗಾಗಲೇ ಸುದ್ದಿಯಾಗಿರುವಂತೆ ಕಳೆದ ಡಿ.7 ರಂದು ‘ಕವಚ’ ಬಿಡುಗಡೆಯಾಗಿರಬೇಕಿತ್ತು. ಅದಾದ ನಂತರ ಇದೇ ಜ.18 ರಂದು ತೆರೆಗೆ ಬರಬೇಕಿತ್ತು. ಆಗಲೂ ಮಿಸ್ ಆಗಿ, ಮತ್ತೆ ಮುಂದಕ್ಕೆ ಹೋಯಿತು. ಆನಂತರ ಫೆ.28 ರಂದು ಫಿಕ್ಸ್ ಎಂದು ಹೇಳಲಾಗಿತ್ತು. ಆದರೆ ತೆರೆ ಕಾಣಲಿಲ್ಲ. ಈ ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.

ಮುಂದಿನ ತಿಂಗಳು ಏಪ್ರಿಲ್ 6 ಯುಗಾದಿ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಈ ವಿಷಯವನ್ನು ಸ್ವತಃ ಶಿವರಾಜ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು, ಯುಗಾದಿ ಹಬ್ಬದ ಪ್ರಯುಕ್ತ ‘ಕವಚ’ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿರುವುದು ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ಉಂಟು ಮಾಡಿದೆ.

 

View this post on Instagram

 

#kavacha on ugadi 👍

A post shared by Dr.Shivarajkumar (@dr.shivarajkumar) on

ಚಿತ್ರದ ಬಗ್ಗೆ

ಅಂದ ಹಾಗೆ ‘ಕವಚ’ ಸಿನಿಮಾ ಮಲೆಯಾಳಂ ‘ಒಪ್ಪಂ’ ಚಿತ್ರದ ರಿಮೇಕ್ ಆಗಿದ್ದು, ಶಿವಣ್ಣ ಇಲ್ಲಿ ಅಂದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಅಪ್ಪ – ಮಗಳ ಸಂಬಂಧದ ಕಥೆಯನ್ನು ಒಳಗೊಂಡಿದ್ದು, ಚಿತ್ರದಲ್ಲಿ ಇಶಾ ಕೊಪ್ಪಿಕರ್, ತಬಲಾನಾಣಿ, ವಸಿಷ್ಠ ಸಿಂಹ, ಕೃತಿಕಾ ಜಯರಾಮ್, ರವಿಕಾಳೆ, ಲಯೇಂದ್ರ ಸೇರಿದಂತೆ ಹಲವಾರು ಮಂದಿ ಕಾಣಿಸಿಕೊಳ್ಳಲಿದ್ದಾರೆ.

ಮಂಗಳೂರಿಗೆ ಭೇಟಿ ನೀಡಿದ ನಟಿ ಪೂಜಾ ಗಾಂಧಿ

#sandalwood #kannadamovies #balkaninews #kavachamovie #kavachakannadamovie #shivarajkumar

Tags

Related Articles