ಸುದ್ದಿಗಳು

ಸೆಂಚುರಿ ಸ್ಟಾರ್ ಮನೆಗೆ ಬಂದ ಹೊಸ ಅತಿಥಿ!!

ಬೆಂಗಳೂರು,ಫೆ13:

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.. ಹೌದು, ಶಿವರಾಜ್ ಕುಮಾರ್ ಮನೆಗೆ ಈಗ ಹೊಸ ಕಾರೊಂದು ಬಂದು ನಿಂತಿದೆ.. ಕಪ್ಪು ಬಣ್ಣದ ಕಾರು ನೋಡಲು ಸಖತ್ ಆಗಿದ್ದು, ಇದು ವೋಲ್ವೋ ಎಸ್ 90 ಕಾರು ಎಂದು ತೋರುತ್ತದೆ.. ಇದರ ಬೆಲೆ ಸರಿ ಸುಮಾರು 53 ಲಕ್ಷ ಇದೆ..

ಕೆಎ 04 ಟಿಸಿ 149 ಕಾರು ನಂಬರ್

ಕೆಎ 04 ಟಿಸಿ 149 ಕಾರು ನಂಬರ್ ಆಗಿದ್ದು ಇದನ್ನು ಶಿವಣ್ಣ ಸಾಮಾಜಿಕ ಜಾಲತಾಣದಲ್ಲಿ “ನನ್ನ ಮನೆಗೆ ಬಂದ ಹೊಸ ಅತಿಥಿ” ಎಂದು ಹಂಚಿಕೊಂಡಿದ್ದಾರೆ.. ಸ್ಟಾರ್ ನಟನರಿಗೆ ವಾಹನಗಳ ಮೇಲೆ ಹೆಚ್ಚು ಒಲವು ಹಾಗೂ ಕ್ರೇಜ್ ಇರುತ್ತದೆ, ಅದರಲ್ಲಿ ದಚ್ಚು, ಯಶ್, ಪುನೀತ್ , ಹೀಗೆ ಅನೇಕ ನಟರ ಸಾಲಿನಲ್ಲಿ ಶಿವರಾಜ್ ಕುಮಾರ್ ಕೂಡ ಒಬ್ಬರು..

ಇನ್ಸ್ಟಾಗ್ರಾಂ ನಲ್ಲಿ ಇದನ್ನು ಹಾಕಿದ್ದೇ ತಡ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಶುಭಾಶಯ ತಿಳಿಸಿದ್ದಾರೆ.. ಇನ್ನು ರುಸ್ತುಂ ಚಿತ್ರದಲ್ಲಿ ಬ್ಯುಸಿಯಿರುವ ಶಿವರಾಜ್ಕುಮಾರ್ ಇದೇ ತಿಂಗಳು 28ರಂದು ಕವಚ ಚಿತ್ರದ ಬಿಡುಗಡೆ ಕಾಯುತ್ತಿದ್ದಾರೆ..

 

View this post on Instagram

 

New guest

A post shared by Dr.Shivarajkumar (@dr.shivarajkumar) on

ಜೀರ್ಣಶಕ್ತಿ ಮತ್ತು ನಿದ್ರೆಗೆ ಅತ್ಯುಪಯೋಗಿ ‘ಸೌತೆಕಾಯಿ’…!!!

#balkaninews #shivarajkumar #sandalwood #volvos90newcar

Tags

Related Articles