ಸುದ್ದಿಗಳು

ಶಿವಣ್ಣನ ಮನೆಗೆ ಬಂತು ಹೊಸ ಅತಿಥಿ

ಬೆಂಗಳೂರು, ಮಾ.18:

ಚಿತ್ರರಂಗದ ಕರುನಾಡ ಚಕ್ರವರ್ತಿ ನಮ್ಮೆಲ್ಲರ ಶಿವರಾಜ್ ಕುಮಾರ್. ಚಿತ್ರರಂಗದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳನ್ನೂ ಮಾಡಿ ಇಂದು ಅದೇ ಚಾರ್ಮಿಂಗ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ನಟ ಶಿವಣ್ಣ. ವಯಸ್ಸು 56 ಆದರೂ ಸಹ ಇನ್ನೂ ಚಿರಯುವಕನಂತೆ ನಟಿಸುವ ಶಿವಣ್ಣ ನ ಮನೆಗೆ ಇಂದು ಒಬ್ಬರು ಹೊಸ ಅತಿಥಿಯ ಆಗಮನವಾಗಿದೆ. ಯಾರು ಎಂದುಕೊಂಡಿರೀ. ಅದುವೇ ಹೊಸ ಕಾರು.

ಹೌದು, ಶಿವಣ್ಣ ನಿನ್ನೆಯಷ್ಟೇ ಕಪ್ಪು ಬಣ್ಣದ ವೋಲ್ವ್ ಕಾರನ್ನು ಖರೀದಿಸಿದ್ದು, ಈ ವಿಷಯವನ್ನು ಸ್ವತಃ ಶಿವಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಹೊಸ ಕಾರು, ಪೂಜೆಯ ಸಮಯವೆಂದು ಬರೆದುಕೊಂಡಿದ್ದಾರೆ.ಈ ಪೋಟೋಗಳಲ್ಲಿ ಶಿವಣ್ಣನ ತಮ್ಮ ಮನೆಯ ಹೊಸ ಅತಿಥಿಯನ್ನು ಪೂಜೆ ಮಾಡುವ ಮೂಲಕ ಬರಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮಹಿಳಾ ದಿನಾಚರಣೇಯ ಪ್ರಯುಕ್ತ ಪುನೀತ್ ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ನೀಲಿ ಬಣ್ಣದ ಕಾರನನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಶಿವಣ್ಣನ ಮನೆಗೆ ಹೊಸ ಕಾರು ಬಂದಿರುವ ಸಂತಸದಲ್ಲಿದ್ದಾರೆ.

ಶಿವಣ್ಣನ ಸಿನಿಮಾಗಳ ಬಗ್ಗೆ

ಶಿವಣ್ಣ ಸದ್ಯ ಪಿ.ವಾಸು ನಿರ್ದೇಶನದ ‘ಆನಂದ್’ ಹಾಗೂ ‘ರುಸ್ತುಂ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಮುಂದಿನ ತಿಂಗಳು ಯುಗಾದಿ ಹಬ್ಬದ ಪ್ರಯುಕ್ತ ಕವಚ ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಇಷ್ಟೇ ಅಲ್ಲದೇ ಎಸ್ ಆರ್ ಕೆ ಚಿತ್ರವೂ ಕೂಡ ಸದ್ಯದಲ್ಲೇ ಚಿತ್ರೀಕರಣ ನಡೆಯಲಿದೆ.

 

View this post on Instagram

 

New Car Pooja Time 🚗 #volvo

A post shared by Dr.Shivarajkumar (@dr.shivarajkumar) on

ಶಿವಣ್ಣನೊಂದಿಗೆ ಡ್ಯುಯೆಟ್ ಹಾಡಿದ ಯು-ಟರ್ನ್ ಬೆಡಗಿ!!

#shivarajkumar #sandalwood #kannadamovies #balkaninews #shivarajkumarmovies

Tags