ಸುದ್ದಿಗಳು

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ

ಬೆಂಗಳೂರು, ಫೆ.11:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತುಮಕೂರಿನ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದರು. ಶ್ರೀಗಳ ಗದ್ದುಗೆಗೆ ನಮಸ್ಕರಿಸಿದ ಬಳಿಕ ಶಿವರಾಜ್ ಕುಮಾರ್, ಸಿದ್ದಲಿಂಗ ಶ್ರೀಗಳ ಜೊತೆಗೆ ಮಾತುಕತೆ ನಡೆಸಿದರು.

ಶಿವೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, ಶ್ರೀಗಳು ದೂರ ‌ಆದಾಗ ನಾನು ವಿದೇಶದಲ್ಲಿ ಇದ್ದೆ. ಅವರ ಮೇಲಿನ ಪ್ರೀತಿ, ನಂಟು ನನಗೂ ಇತ್ತು. ಹೀಗಾಗಿ ಇವತ್ತು ಬಂದು ಗದ್ದುಗೆ ದರ್ಶನ ಪಡೆದಿದ್ದೇನೆ. ಶಿವಕುಮಾರ ಶ್ರೀಗಳು ಇನ್ನೂ ನಮ್ಮ ನಡುವೆಯೇ ಇದ್ದಾರೆ ಎಂಬಂತಹ ವಾತಾವರಣ ಇದೆ. ಅವರು ಇಲ್ಲ ಅಂತಾ ಉಹಿಸಿಕೊಳ್ಳಲೂ ಸಾಧ್ಯವಿಲ್ಲ. ಸಿದ್ದಗಂಗಾ ಮಠದ ಸೇವೆ ಎಂದಿನಂತೆ ನಡೆದುಕೊಂಡು ಹೋಗಲಿ ಎಂದು ಗದ್ದುಗೆ ಬಳಿ ಪ್ರಾರ್ಥಿಸಿದ್ದೇನೆ ಎಂದರು.

 

View this post on Instagram

 

Today @ Shri Dr.Shivakumara Maha Swami Gadduge 🙏

A post shared by Dr.Shivarajkumar (@dr.shivarajkumar) on

#shivarajkumar #sandalwood #kannadamovies #balkaninews #shivarajkumarvisitsiddagangamata

Tags