ಸುದ್ದಿಗಳು

‘ಶಿವಾರ್ಜುನ’ನಿಗೆ ‘ಮಳೆ’ ನಿರ್ದೇಶಕರು ಸಾಥ್

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ‘ಸಿಂಗ’ ಚಿತ್ರದ ಬಳಿಕ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದು, ಏಳೆಂಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಅವರೀಗ ನಿರ್ದೇಶಕ ಶಿವತೇಜಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ಮಳೆ’ ನಿರ್ದೇಶಕರ ಖಡಕ್ ಸಿನಿಮಾ

ಹೌದು, ‘ಮಳೆ’, ‘ಧೈರ್ಯಂ’ ಹಾಗೂ ‘ಲೌಡ್ ಸ್ಪೀಕರ್’ ಚಿತ್ರಗಳ ಖ್ಯಾತಿಯ ನಿರ್ದೇಶಕ ಶಿವತೇಜಸ್ ಇದೀಗ ಚಿರು ಸರ್ಜಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಖಡಕ್ ಕಥೆಯನ್ನು ಒಳಗೊಂಡಿದ್ದು, ಈಗಾಗಲೇ ಚಿತ್ರವು ಮುಹೂರ್ತ ಆಚರಿಸಿಕೊಂಡಿದೆ.

ಟೈಟಲ್ ಫಿಕ್ಸ್

ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿರಲಿಲ್ಲ. ಇದೀಗ ‘ಶಿವಾರ್ಜುನ’ ಎಂಬ ಹೆಸರು ಫಿಕ್ಸ್ ಆಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ರಿಲೀಸ್ ಆಗಿವೆ.

ಭರ್ಜರಿ ಆ್ಯಕ್ಷನ್ ಜೊತೆಗೆ ಸೆಂಟಿಮೆಂಟ್

‘ಇದು ಪಕ್ಕಾ ಸ್ವಮೇಕ್ ಚಿತ್ರ. ಇಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಫ್ಯಾಮಿಲಿ ಸ್ಟೋರಿ ಹೈಲೈಟ್ ಆಗಿರಲಿದೆ. ಜೊತೆಗೆ ಪ್ರೀತಿ, ಸೆಂಟಿಮೆಂಟ್, ಹಾಸ್ಯ ಕೂಡ ಹೆಚ್ಚಾಗಿಯೇ ಇರಲಿದೆ. ಎಲ್ಲಾ ವರ್ಗಕ್ಕೂ ಒಂದು ಮಜವೆನಿಸುವ ಚಿತ್ರ ಕೊಡುವ ಉದ್ದೇಶದಿಂದ ಈ ಬಾರಿ ಪಕ್ಕಾ ತಯಾರಿಯೊಂದಿಗೆ ಬರುತ್ತಿದ್ದೇನೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಈ ಚಿತ್ರವನ್ನು ಎಂ ಬಿ ಮಂಜುಳಾ ಶಿವಾರ್ಜುನ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಹೆಚ್.ಸಿ.ವೇಣು ಛಾಯಾಗ್ರಹಣ, ಸುರಾಗ್ ಸಂಗೀತ,,ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ.

ವರಮಹಾಲಕ್ಷ್ಮಮಿ ಹಬ್ಬಕ್ಕೆ ತುಪ್ಪದ ಬೆಡಗಿ ವಿಶ್!!

#shivarajunmovie #shivarajunmoviechirusarja  #kannadafilm, #kannadamovie, #kannadanews, #kannadanewmovie, #kannadacine, #latestkannadamovie

Tags