ಸುದ್ದಿಗಳು

ಶೂಟಿಂಗ್ ಸೆಟ್ ನಲ್ಲಿ ಕ್ರಿಕೆಟ್ ಆಡಿದ ಶಿವಣ್ಣ

ಬಿಡುವಿನ ವೇಳೆಯಲ್ಲಿ ಕವಚ ತಂಡದ ಹುಡುಗರೊಂದಿಗೆ ನಟ ಶಿವಣ್ಣ, ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸದ್ಯಕವಚ’ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಿದ್ದಾರೆ. ಬಿಡುವಿನ ವೇಳೆಯಲ್ಲಿ ಚಿತ್ರದ ಸೆಟ್ ನಲ್ಲಿ ಅವರ ಅಲ್ಲಿನ ಹುಡುಗರೊಂದಿಗೆ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ.

ಬೆಂಗಳೂರು, ಜು. 23: ಸಿನಿಮಾ ಕಲಾವಿದರು ಬರೀ ನಟನೆಯಲ್ಲಿ ತೊಡಗಿಕೊಳ್ಳದೇ ಅನೇಕ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಳ್ಳುತ್ತಾರೆ. ಅದರಂತೆ ಅನೇಕ ಕಲಾವಿದರು ತಮ್ಮ ಬಿಡುವಿನ ವೇಳೆಯಲ್ಲಿ ತಮಗೆ ಇಷ್ಟಬಂದ ಆಸಕ್ತಿಯತ್ತ ಗಮನ ಹರಿಸುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೇ ನಟಿ ಹರಿಪ್ರಿಯಾ, ಚಿಕ್ಕಬಳ್ಳಾಪುರದಲ್ಲಿ ರಂಗೋಲಿ ಬಿಡಿಸಿದ್ದರು. ಜೊತೆಗೆ ಮಲ್ಲಿಗೆ ಹೂವಿನ ಮಾಲೆಯನ್ನು ಸಹ ಕಟ್ಟಿ ಸುದ್ದಿಯಾಗಿದ್ದರು. ನಟ ನಿಖಿಲ್ ಕುಮಾರ್ ಸ್ವಾಮಿ ಅವರು ‘ಸೀತಾರಾಮ ಕಲ್ಯಾಣ’ ಶೂಟಿಂಗ್ ವೇಳೆ ಕ್ರಿಕೆಟ್ ಆಡಿದ್ದರು.

ಕ್ರಿಕೆಟ್ ಆಡಿದ ಶಿವಣ‍್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಧ್ಯ ‘ಕವಚ’ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಿದ್ದಾರೆ. ಬಿಡುವಿನ ವೇಳೆಯಲ್ಲಿ ಚಿತ್ರದ ಸೆಟ್ ನಲ್ಲಿ ಅವರ ಅಲ್ಲಿನ ಹುಡುಗರೊಂದಿಗೆ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ. ಅವರಿಗೆ ಸಾಥ್ ನೀಡುವುದಕ್ಕೆ ಲಯಕೋಕಿಲ ಅವರೂ ಆಟದಲ್ಲಿ ಭಾಗವಹಿಸಿದ್ದಾರೆ. ಶಿವಣ್ಣ ಕ್ರಿಕೆಟ್ ಆಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಿನಿಮಾಗಳಲ್ಲಿ ಬ್ಯೂಸಿ

ಸಧ್ಯ ಕವಚ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರವು ಮಲೆಯಾಳಂನ ಒಪ್ಪಂ ಚಿತ್ರದ ರಿಮೇಕ್ ಆಗಿದ್ದು, ಇಲ್ಲಿ ಶಿವಣ್ಣ ಅಂದನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು 15 ವರ್ಷಗಳ ನಂತರ ಶಿವಣ್ಣ ರಿಮೇಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತಾರಾಬಳಗ

ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಮಾಡಿದ ಪಾತ್ರವನ್ನು ಇಲ್ಲಿ ಶಿವಣ್ಣ ಮಾಡುತ್ತಿದ್ದು, ಚಿತ್ರದಲ್ಲಿ ಇಶಾ ಕೊಪ್ಪಿಕರ್, ಬಾಲ ಕಲಾವಿದೆ ಮೀನಾಕ್ಷಿ, ತಬಲಾ ನಾಣಿ. ಕೃತಿಕಾ ಜಯರಾಮ್, ವಶಿಷ್ಟ ಸಿಂಹ, ರವಿ ಕಾಳೆ ಮೊದಲಾದವರು ನಟಿಸುತ್ತಿದ್ದಾರೆ. ಹಯಗ್ರೀವ ಮೂವಿ ಅದಿಷ್ಟಾನ, ಎಂವಿ ಸತ್ಯನಾರಾಯಣ ಮತ್ತು ಎ. ಸಂಪತ್ ಒಟ್ಟಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿದೆ.

 

 

@ sunil Javali

Tags

Related Articles

Leave a Reply

Your email address will not be published. Required fields are marked *