ಸುದ್ದಿಗಳು

ಹುತಾತ್ಮ ಯೋಧನ ಕುಟುಂಬಕ್ಕೆ ನೆರವು ನೀಡಿದ ಶಿವಣ್ಣ ಫ್ಯಾನ್ಸ್

ಶಿವಸೈನ್ಯ ತಂಡದಿಂದ ಅಲ್ಪ ಸಹಾಯ

ಬೆಂಗಳೂರು.ಫೆ.20 

ಆರು ದಿನಗಳ ಹಿಂದೆಯಷ್ಟೇ ಜಮ್ಮು-ಕಾಶ್ಮೀರದಲ್ಲಿ ನಡೆದ ಉಂಟಾದ ಯೋಧರ ದುರ್ಮರಣ ಇಡೀ ದೇಶಾದ್ಯಂತ ತಲ್ಲಣ ಗೊಳಿಸಿದೆ. ಹಾಗೆಯೇ ಕನ್ನಡ ಚಿತ್ರರಂಗ ಕೂಡ ಘಟನೆಗೆ ದೊಡ್ಡ ಮಟ್ಟದಲ್ಲಿ ಸ್ಪಂದಿಸಿದೆ. ಕನ್ನಡದ ಖ್ಯಾತ ನಟ ಡಾ. ಶಿವರಾಜ್ ಕುಮಾರ್ ಅವರ ಅಭಿಮಾನಿ ಬಳಗ ಕೂಡ ಈ ನಿಟ್ಟಿನಲ್ಲಿ ಪ್ರಮುಖ ಕೆಲಸವೊಂದನ್ನು ಮಾಡಿದೆ.

ಶಿವಸೈನ್ಯ ಅಭಿಮಾನಿ ಬಳಗ

ನಿನ್ನೆ, ಅಂದರೆ, ಫೆ. 19 ರಂದು ಡಾ. ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಕಾಲಿರಿಸಿ 33 ವರ್ಷಗಳಾದವರು. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗ ಶಿವಸೈನ್ಯ ತಂಡದವರು ಅದ್ದೂರಿಯಾಗಿ ಸಂಭ್ರಮಾಚರಣೆಯನ್ನು ಇಟ್ಟುಕೊಂಡಿದ್ದರು. ಆದರೆ ಯೋಧರ ವೀರ ಮರಣದಿಂದಾಗಿ ಈ ಕಾರ್ಯಕ್ರಮವನ್ನು ರದ್ದು ಪಡಿಸಿ, ಆ ಹಣವನ್ನು ಯೋಧರ ಕುಟುಂಬಕ್ಕೆ ನೀಡಿದ್ದಾರೆ.

ಮಂಡ್ಯದ ವೀರ ಯೋಧ

ಅಂದು ನಡೆದ ಆ ದುರ್ಘಟನೆಯಲ್ಲಿ ಮಂಡ್ಯದ ವೀರ ಯೋಧ ಗುರು ಅವರು ಸಹ ಸಾವನ್ನಪ್ಪಿದರು. ಇವರ ಸಾವಿನಿಂದಾಗಿ ಆ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಹುತಾತ್ಮ ಯೋಧನ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

ವೀರ ಯೋಧನ ಕುಟುಂಬಕ್ಕೆ ತೆರಳಿದ ಶಿವಣ್ಣನ ಅಭಿಮಾನಿಗಳು ತಾವು ಸಂಭ್ರಮಕ್ಕೆಂದು ಸಂಗ್ರಹಿಸಿದ ಹಣಕ್ಕೆ ಇನ್ನಷ್ಟು ಸೇರಿಸಿ ಅದನ್ನು 63 ಸಾವಿರದಷ್ಟು ಮಾಡಿ,ಅದನ್ನು ನೀಡಿದ್ದಾರೆ. ಈ ಮೂಲಕ ಅವರೊಂದಿಗೆ ಸದಾ ಬೆಂಬಲವಾಗಿ ನಿಲ್ಲುವ ಭರವಸೆಯನ್ನು ನೀಡಿದ್ದಾರೆ. ಹಾಗೆಯೇ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಇನ್ನಷ್ಟು ಆಗಲಿ ಎಂದು ಎಲ್ಲರೂ ಹರಸಿದ್ದಾರೆ.

 

ಮಲ್ಪೆ ಬೀಚ್ ದಡದಲ್ಲಿ ಪುನೀತ್ ರಾಜ್ ಕುಮಾರ್!!

#shivasainya- #balkaninews #filmnews, #kannadasuddigalu, #shivarajkumar, #veeraguru

Tags