ಸುದ್ದಿಗಳು

ಟ್ರೆಂಡ್ ಆಯ್ತು ನಾಯಕಿಯರ ಶಾರ್ಟ್ ಹೇರ್ ಕಟ್

ಬೆಂಗಳೂರು, ಮೇ.23:

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಮ್ಮ ಕೂದಲು ಎಂದರೇ ಎಲ್ಲಿಲ್ಲದ ಪ್ರೀತಿ ಅಚ್ಚುಮೆಚ್ಚು. ಅದಕ್ಕಾಗಿಯೇ ಬಹಳಷ್ಟು ಹೆಣ್ಣು ಮಕ್ಕಳು ತಮ್ಮ ಕೂದಲನ್ನು ಹಾರೈಕೆ ಮಾಡಿ ಜೋಪಾನವಾಗಿ ಕಾಪಾಡಿಕೊಳ್ಳುತ್ತಾರೆ. ಇಷ್ಟೇ ಅಲ್ಲದೇ ಬಗೆ ಬಗೆಯ ಶ್ಯಾಂಪುಗಳನ್ನು ಉಪಯೋಗಿಸುತ್ತಿರುತ್ತಾರೆ. ಲೂಸ್ ಹೇರ್, ಶಾರ್ಟ್ ಹೇರ್ ಹೀಗೆ ಬಗೆ ಬಗೆಯ ಹೇರ್ ಸ್ಟೆಲ್ ಮಾಡಿಕೊಳ್ಳುವುದೇಂದರೆ ಅವರಿಗೆ ಎಲ್ಲಿಲ್ಲದ ಸಂತಸ. ಅದರ ಸಲುವಾಗಿಯೇ  ಹೆಣ್ಣು ಮಕ್ಕಳು ಸಾಮಾನ್ಯವಾಗಿ ತನ್ನ ಕೂದಲಿನ ಬಗ್ಗೆ ಹೆಚ್ಚು ಕಾಳಜಿವಹಿಸಿರುತ್ತಾರೆ. ಅದರಂತೆ ನಮ್ಮ ಸೆಲೆಬ್ರಿಟಿಗಳಿಗೂ ಕೂಡ ಬಗೆ ಬಗೆಯ ಹೇರ್ ಸ್ಟೈಲ್ ಗಳನ್ನು ಮಾಡಿಸಿಕೊಳ್ಳುವ ತಮ್ಮ ಅಂದವನ್ನು ದ್ವಿಗುಣಗೊಳಿಸಿಕೊಳ್ಳುತ್ತಾರೆ.

ಹೌದು, ಇತ್ತೀಚೆಗೆ ನಮ್ಮ ಕೆಲ ಸೆಲೆಬ್ರಿಟಿಗಳು ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ. ಅದರಲ್ಲೂ ಈಗಿನ ಕಾಲದಲ್ಲಿ ಬಹಳಷ್ಟು ಜನಪ್ರಿಯವಾಗಿರುವ ನಟಿಯರು ತಮ್ಮ ಉದ್ದದ ಚಂದದ ಕೂದಲಿಗೆ ಕತ್ತರಿ ಹಾಕುವ ಮೂಲಕ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಅವರು ಯಾರೇಂದರೆ, ರಶ್ಮಿಕಾ ಮಂದಣ್ಣ, ಹರಿಪ್ರಿಯಾ, ಶೃತಿ ಹರಿಹರನ್, ಸಮಂತಾ ಅಕ್ಕಿನೇನಿ, ಯಾಮಿ ಗೌತಮ್ ಹೀಗೆ ಬಹಳಷ್ಟು ಕಲಾವಿದರು ತಮ್ಮ ಚೆಂದದ ಕೂದಲಿಗೆ ಕತ್ತರಿ ಹಾಕುವ ಮೂಲಕ ಹೊಸ ಬಗೆಯ ರೀತಿಯಲ್ಲಿ ತಮ್ಮ ಅಭಿಮಾನಿಗಳಿಗೆ ಇಷ್ಟವಾಗುತ್ತಿದ್ದಾರೆ. ಕೆಲ ನಟಿಯರು ಸಿನಿಮಾಗಳಿಗಾಗಿ ಹೇರ್ ಕಟ್ ಮಾಡಿದರೆ, ಇನ್ನೂ ಕೆಲವರು ತಮ್ಮ ವೈಯ್ತಕ್ತಿಕವಾಗಿ ಚಂದ ಕಾಣಲು ಮಾಡಿಸಿಕೊಳ್ಳುತ್ತಾರೆ. ಆದರೆ ಯಾವುದೇ ರೀತಿಯ ಬದಲಾವಣೆಗಳಾದರೂ  ಸಹ ಅವರ ಅಭಿಮಾನಿಗಳು ಅದನ್ನು ಅಳವಡಿಸಿಕೊಳ್ಳುವ ಮೂಲಕ ಈಗೀನ ಟ್ರೆಂಡ್ ಹೇರ್ ಕಟ್ ಆಗಿ ಬದಲಾವಣೆಗೊಂಡಿದೆ.

Image may contain: 2 people, people standing

Image may contain: 1 person, smiling, selfie and closeup

Related imageImage result for rashmika mandanna short hair cutRelated image

ಚಂದನವನದ ಬಹುಬೇಡಿಕೆಯ ಟಾಪ್ ನಟಿ ‘ಮಾಧವಿ’ ಈಗ ಹೀಗಿದ್ದಾರೆ ನೋಡಿ!!

#shorthaircuts #bollywood #yamigautamhaircut #rashmikamandannaharicut #samanthahaircut

 

Tags