ಉದಯೋನ್ಮುಖರುಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಬನ್ನಿ ಕಿರುಚಿತ್ರ ನಿರ್ಮಿಸಿ, ರೂ. 3 ಲಕ್ಷ ಬಹುಮಾನ ಗೆಲ್ಲಿ!!!!!!

ನೀವೂ ಚಲನಚಿತ್ರ ನಿರ್ಮಾಪಕ-ನಿರ್ದೇಶಕ-ನಟ-ನಟಿ-ಸಿನಿಮಾಟೋಗ್ರಾಫರ್-ತಂತ್ರಜ್ಞರು-ಸಂಗೀತ ನಿರ್ದೇಶಕರಾಗ ಬೇಕೆ…???!!??!!

 

2ನೇ ಬಹುಮಾನ 1.5 ಲಕ್ಷ ರೂ. ಹಾಗೂ ರೂ.25,000/- ದ 8 ಇತರ ಬಹುಮಾನಗಳು…!

ಬೆಂಗಳೂರು, ಡಿ.1: ಹೌದು..!! ..ಇದೊಂದು ಸುವರ್ಣಾವಕಾಶ! ನಿಮ್ಮಲ್ಲಿ ಯಾರು ಬೇಕಾದರೂ  ಚಲನಚಿತ್ರ ನಿರ್ಮಾಪಕ-ನಿರ್ದೇಶಕ-ನಟ-ನಟಿ-ಸಿನಿಮಾಟೋಗ್ರಾಫರ್-ತಂತ್ರಜ್ಞರು-ಸಂಗೀತ ನಿರ್ದೇಶಕರಾಗಬಹುದು…!!!

ಬಾಲ್ಕನಿ “ಲ್ಯೂಮಿಯೆರ್–ಫಾಲ್ಕೆ” ಕನ್ನಡ ಕಿರು ಚಲನಚಿತ್ರ ಸ್ಪರ್ಧೆ-2018, ಈ ಜಾಗತಿಕ  ಮಟ್ಟದ  ಸ್ಪರ್ಧೆಯನ್ನು  ಬಾಲ್ಕನಿ  ಕನ್ನಡ ನ್ಯೂಸ್ ಡಾಟ್ ಕಾಂ ಹಾಗೂ  ಬಾಲ್ಕನಿ  ಇನ್ಫೋಟೈನ್ ಮೆಂಟ್ ವತಿಯಿಂದ ಏರ್ಪಡಿಸಲಾಗಿದೆ. ಈಗಾಗಲೇ ಈ ಸ್ಪರ್ಧೆಯ ರಿಜಿಸ್ಟ್ರೇಶನ್ ಡಿಸೆಂಬರ್ 1ನೇ ತಾರೀಖಿನಿಂದ  ಪ್ರಾರಂಭವಾಗಿದ್ದು ಡಿ.31 ರವರೆಗೆ ಆಸಕ್ತರು ನಮ್ಮ ಬಾಲ್ಕನಿ ನ್ಯೂಸ್.ಕಾಂ ವೆಬ್ಸೈಟ್ ನಲ್ಲಿ ನೋಂದಾಯಿಸಬಹುದು.

ಆನ್ಲೈನ್ ನಲ್ಲಿ ನಿಮ್ಮ ಹೆಸರು, ವಿಳಾಸ  ಇತ್ಯಾದಿಗಳ ನೋಂದಣಿ ಮಾಡಿ ಆನಂತರ ನಿಮ್ಮ ಕಿರುಚಿತ್ರವನ್ನು “ವಿ ಟ್ರಾನ್ಸ್ಫರ್ “ ಮೂಲಕವೂ, ಅಥವಾ  ರಿಜಿಸ್ಟರ್ಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕವೂ ಕಳುಹಿಸಬಹುದು. ಡಿವಿಡಿ, ಸಿಡಿ ಅಥವಾ ಪೆನ್ ಡ್ರೈವ್ ಮೂಲಕವೂ ಕಳುಹಿಸಿ ಕೊಡಬಹುದು.

ನಿಮ್ಮ ಕಿರುಚಿತ್ರದ  ಅವಧಿ 3 ನಿಮಿಷದಿಂದ 15 ನಿಮಿಷದೊಳಗೆ ಇರಬೇಕು. ಅಲ್ಲದೇ ಕಿರುಚಿತ್ರದ ಭಾಷೆ  ಕನ್ನಡದಲ್ಲಿದ್ದು, ಇಂಗ್ಲೀಷ್ ಸಬ್-ಟೈಟಲ್ಸ್ ಬಹಳ ಮುಖ್ಯ. ನಮಗೆ ಕಳುಹಿಸಿ ಕೊಡುವಾಗ ನಿಮ್ಮ ಕಿರು ಚಿತ್ರದ 2 ಪ್ರತಿಗಳು ಇರಲಿ. ಒಂದು ಇಂಗ್ಲೀಷ್ ಸಬ್ ಟೈಟಲ್ಸ್ ನೊಂದಿಗೆ ಇದ್ದು ಮತ್ತೊಂದು ಇಂಗ್ಲೀಷ್ ಸಬ್ ಟೈಟಲ್ಸ್ ಇಲ್ಲದೆ ಇದ್ದುದನ್ನೂ ಕಳುಹಿಸಿ.

ಬನ್ನಿ ಕಿರುಚಿತ್ರ  ನಿರ್ಮಿಸಿ, 3 ಲಕ್ಷ ಬಹುಮಾನ ಗೆಲ್ಲಿ!!!!!!

2ನೇ ಬಹುಮಾನ 1.5 ಲಕ್ಷ ರೂ. ಹಾಗೂ ರೂ.25,000/- ದ 8 ಇತರ ಬಹುಮಾನಗಳು.

ಇನ್ನು, ನಿಮ್ಮ ಕಿರು ಚಿತ್ರ ಯಾವುದೇ  ಸಾಮಾಜಿಕ ಮಾಧ್ಯಮದಲ್ಲೂ ಈ ಹಿಂದೆ ಪ್ರಸಾರವಾಗಿರಬಾರದು.  ಹೆಚ್ಚಿನ ಮಾಹಿತಿಗಾಗಿ ಬಾಲ್ಕನಿ ನ್ಯೂಸ್.ಕಾಂ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ 8884444254 ಸಂಖ್ಯೆ ಗೆ ಕರೆ ಮಾಡಿ..

 • ಈ ಸ್ಪರ್ಧೆಯ ಪ್ರಮುಖ ಉದ್ದೇಶ: ಯುವಕರಲ್ಲಿ ಚಲನಚಿತ್ರ ನಿರ್ಮಾಣ ಕುರಿತಾದ ಜ್ಞಾನ-ಸಾಧ್ಯತೆಗಳು-ಇತಿ-ಮಿತಿ ಮೊದಲ್ಗೊಂಡು ಸಮ್ಯಕ್ ಪರಿಜ್ಞಾನವನ್ನುಪುನಶ್ಚೇತನಗೊಳಿಸುವ  ಒಂದು  ಸಮಯೋಚಿತ  ಪ್ರಯತ್ನವಾಗಿದೆ.
 • ಜಗತ್ತಿನಾದ್ಯಂತ ಕನ್ನಡ ಬಲ್ಲ ಅಬಾಲವೃದ್ಧ- ಸೃಜನಶೀಲ ಮಂದಿಯ  ನವನವೀನ  ವಿಚಾರಗಳನ್ನು ಚಿತ್ರೀಕರಿಸಿ  ಸೂಕ್ತ ರೂಪದಲ್ಲಿ ಕನ್ನಡ ಚಲನಚಿತ್ರ ವೀಕ್ಷಕರಿಗೆಪ್ರಸ್ತುತಪಡಿಸುವುದು
 • ಜಾಗತಿಕ ಮಟ್ಟದ ಕಿರು ಚಲನಚಿತ್ರ ಸ್ಪರ್ಧೆಯನ್ನು ಆಯೋಜಿಸಿ, ವರ್ಷಾನುವರ್ಷ ಇದರ ಮುಂದುವರೆದ ಭಾಗ ಪ್ರಸ್ತುತಪಡಿಸಲು  ಬಾಲ್ಕನಿ ನಿರ್ಧರಿಸಿದೆ.
 • ಕನ್ನಡ ಚಲನಚಿತ್ರೋದ್ಯಮದ ಹೆಸರಾಂತ ನಟ–ನಟಿ-ನಿರ್ದೇಶಕರು-ತಂತ್ರಜ್ಞರು ತೀರ್ಪುಗಾರರಾಗಿ  ನಮ್ಮೊಡನೆ ಕೈಜೋಡಿಸಿದ್ದಾರೆ. ಅಷ್ಟೇ ಅಲ್ಲದೆ,  ಎಲ್ಲಾ ಸಾಮಾಜಿಕ  ಅಂತರ್ಜಾಲ ಮಾಧ್ಯಮ, ಟಿವಿ –ರೇಡಿಯೋ  ವಾಹಿನಿಗಳಲ್ಲಿ ಮತ್ತು ಮುದ್ರಣ  ಮಾಧ್ಯಮಗಳಲ್ಲಿ ಕಿರು ಚಿತ್ರಗಳ ಪ್ರಸಾರ, ಅವುಗಳ ಕುರಿತು ಲೇಖನ, ವಿಮರ್ಶೆಗಳನ್ನು ಪ್ರಸಾರಪಡಿಸಲಾಗುವುದು.
 • Image result for balkan lumiere phalke short movie

ಉದ್ದೇಶಗಳು ಮತ್ತು ಅವಕಾಶಗಳು..

ಬಾಲ್ಕನಿ ಸಂಸ್ಥೆ 2018 ರ ನವೆಂಬರ್ ತಿಂಗಳಿನಿಂದ  ಈ ಕಿರು ಚಲನಚಿತ್ರ ಸ್ಪರ್ಧೆಯನ್ನು ಪ್ರಾರಂಭಿಸಿದೆ.

 • ಜನವರಿ – 2019 ರ ವೇಳೆಗೆ ಅಂತಿಮವಾಗಿ ಇದನ್ನು ಸಾರ್ವಜನಿಕವಾಗಿ ಪ್ರಕಟಿಸುವ ಭರವಸೆ ಹುಟ್ಟಿದೆ.
 • ಯಾವುದೇ ಶುಲ್ಕವಿಲ್ಲದೆ, ಯಾವುದೇ ವಯೋಮಿತಿಯೂ ಇಲ್ಲದಿರುವ  ಈ  ಸ್ಪರ್ಧೆಗೆ  ಸೃಜನಶೀಲ   ಸಿನಿಮಾಕರ್ತರ,  ವ್ಯಾಪಕ   ಪ್ರೇಕ್ಷಕರನ್ನುಆಮಂತ್ರಿಸುತ್ತಿದೆ.
 • ಇಂಗ್ಲೀಷ್ ಉಪ-ಶೀರ್ಷಿಕೆಗಳೊಂದಿಗೆ ತಯಾರಾದ ಕಿರು ಚಲನಚಿತ್ರವು ಕನ್ನಡ ಭಾಷೆಯಲ್ಲಿರಬೇಕು. ಸಿನೆಮಾದ ಅವಧಿ 3- 15 ನಿಮಿಷಗಳು ಮಾತ್ರ. ಇದು ಅನೇಕ ಜಾಹೀರಾತು ಅವಕಾಶಗಳಿಗೆ ಆಸ್ಪದ ನೀಡಿ ಕರ್ನಾಟಕ ಮೊದಲ್ಗೊಂಡು ವಿಶ್ವಾದ್ಯಂತ ವ್ಯಾಪಿಸುವ ಶಕ್ತಿ ಹೊಂದಿದೆ.
 • ಎಲ್ಲಾ ಕಿರು- ಚಲನಚಿತ್ರಗಳನ್ನು ಆನ್ –ಲೈನ್ ನಲ್ಲಿಯೂ , ಬಾಲ್ಕನಿ ಅಂತರ್ಜಾಲದಲ್ಲಿಯೂ, ಯೂ-ಟ್ಯೂಬ್ ವಾಹಿನಿಯಲ್ಲಿಯೂ  ಭಿತ್ತರಿಸಲಾಗುವುದು. ವಿಶೇಷವಾಗಿ ಲಕ್ಷಾಂತರ ಪ್ರೇಕ್ಷಕರು,  ಗ್ರಾಹಕರು  ಹಾಗೂ  ಭರವಸೆಯುಕ್ತ ಯುವಜನತೆಯೊಂದಿಗೆ   ಸಂಪರ್ಕ ಸಾಧಿಸುವ  ಸಾಮರ್ಥ್ಯ  ಪಡೆದಿದೆ.
 • ಅಂತಿಮ ಹಂತದಲ್ಲಿ, ತೀರ್ಪುಗಾರರ ಸಮೀಕ್ಷೆ, ಸಿನೆಮಾ ರಂಗದ ಗಣ್ಯ ವ್ಯಕ್ತಿಗಳ ನಡುವಿನ ವಿಶೇಷಸಂವಾದಗಳನ್ನು  ಕಿರುಚಿತ್ರ   ತಯಾರಕರೊಂದಿಗೆ  ಆಯೋಜಿಸಲಾಗುತ್ತದೆ.
 • ಈ ಜಾಗತಿಕ ಮಟ್ಟದ ಸ್ಫರ್ಧೆಯಲ್ಲಿ ಅನೇಕ ವಿಜೇತರುಗಳು ಹೊಮ್ಮುವ ಕಾರಣ ,ಬ್ರಾಂಡಿಂಗ್ ಗಾಗಿ   ಹೆಚ್ಚು ಅವಕಾಶಗಳನ್ನು  ತೆರೆಯುತ್ತದೆ.
 • ವಿಶೇಷವಾಗಿ ನಮ್ಮ ಬಾಲ್ಕನಿ ಯ್ಯೂಟ್ಯೂಬ್ ವಾಹಿನಿಯಲ್ಲಿ ಎಲ್ಲಾ ಕಿರು ಚಲನಚಿತ್ರಗಳ ಸುದೀರ್ಘ ಪ್ರಸರಣ ಮಾಡಲಾಗುತ್ತದೆ.
 • ಇಡೀ ಸ್ಪರ್ಧೆಯು ಮೂರು ತಿಂಗಳ ಕಾಲಾವಧಿಯನ್ನು ಹೊಂದಿದ್ದು, ಅಂತಿಮ ಸ್ಪ ರ್ಧೆ (ಗ್ರ್ಯಾಂಡ್ ಫಿನಾಲೆ) ಯನ್ನು ವಿವಿಧ ಟಿವಿ ಮಾಧ್ಯಮವಾಹಿನಿಗಳ ಮೂಲಕ ಸಮಗ್ರವಾಗಿ ಪ್ರಚಾರ ಮಾಡಲಾಗುತ್ತದೆ…

ಕನ್ನಡ ಸಿನೆಮಾರಂಗ-ಚಂದನವನದ ಸುವಿಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಈ ನಮ್ಮ ಗ್ಲೋಬಲ್ ಸ್ಫರ್ಧೆಯ ಬ್ರಾಂಡ್ ಅಂಬಾಸೆಡರ್ ಆಗಿದ್ದಾರೆ. ಹೆಸರಾಂತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಎ.ವಿ.ಚಿಂತನ್, ಕನ್ನಡ ಚಿತ್ರ ನಿರ್ದೇಶಕರ ಸಂಘದ ಉಪಾಧ್ಯಕ್ಷೆ ರೂಪಾ ಅಯ್ಯರ್, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ. ಬಸವಲಿಂಗಯ್ಯ ಪ್ರಶಸ್ತಿ ವಿಜೇತ ಸಿನಿಮಾಟೋಗ್ರಾಫರ್ ಸಂತೋಷ್ ರೈ ಪಾತಾಜೆ, ಮಹಾ ಸಂಕಲನಕಾರ ಕೆ.ಎಮ್.ಪ್ರಕಾಶ್, ವಿಖ್ಯಾತ ನಟಿ ಸುಮನ್ ನಗರ್ ಕರ್, ಸಂದೀಪ್ ಮಲಾನಿ.. ಈ ಅಂತಾರಾಷ್ಟ್ರೀಯ ಮಟ್ಟದ ಕಿರು ಸಿನೆಮಾ ಸ್ಫರ್ಧೆಯ ತೀರ್ಪುಗಾರರಾಗಿರುವುದು ಅಭೂತಪೂರ್ವ ಘಟನೆಗೆ ಸಂದ ಗರಿಯಾಗಿದೆ.    

ಹೆಚ್ಚಿನ ಮಾಹಿತಿಗಾಗಿ ಬಾಲ್ಕನಿ ನ್ಯೂಸ್.ಕಾಂ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ದೂರವಾಣಿ

8884444254  ಸಂಖ್ಯೆ ಗೆ ಕರೆ ಮಾಡಿ..

-Editor & Content Head – Balkani News Kannada

 

 

Tags

Related Articles