ಸುದ್ದಿಗಳು

ಸ.ಹಿ.ಪ್ರಾ.ಶಾಲೆ 125 ದಿನ ಪೂರೈಸಿದ ಹಿನ್ನೆಲೆಯಲ್ಲಿ ತಾರೆಯರ ಮಹಾಸಂಗಮ!!

ಇದೇ 13 ಜನವರಿ 2019 ಭಾನುವಾರ ಸಂಜೆ 5:30ಕ್ಕೆ ಮಂಗಳೂರಿನ ಅಡ್ಯಾರ್ ಗಾರ್ಡನ್

 ಮಂಗಳೂರು,ಜ.12: ರಾಜ್ಯಾದ್ಯಂತ ಎಲ್ಲರ ಜನಮೆಚ್ಚುಗೆ  ಗಳಿಸಿ ಯಶಸ್ವಿಯಾಗಿ  125 ದಿನಗಳನ್ನು ಪೂರೈಸಿರುವ “ಸರಕಾರಿ.ಹಿ.ಪ್ರಾ.ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ”  ಸೂಪರ್ ಹಿಟ್ ಚಿತ್ರ

ಕನ್ನಡ ಶಾಲೆಯಲ್ಲೇ ಕಲಿಯುತ್ತೇನೆ..

ಸರಕಾರಿ.ಹಿ.ಪ್ರಾ.ಶಾಲೆ ಪ್ರವೀಣ, ಮಹೇಂದ್ರ, ಮಮ್ಮುಟ್ಟಿ, ಬಾಲಕೃಷ್ಟ ಪಣಿಕ್ಕರ್, ನಂಬಿಯರ್ ಉಪಾಧ್ಯಾಯರು, ಬುಜಂಗ, ರಾಮಣ್ಣ ರೈ, ಪಲ್ಲವಿ, ಅನಂತ ಪದ್ಮನಾಭ ಪಿ. ಮುಂತಾದ ಪಾತ್ರಗಳು ಈ ಚಿತ್ರದಲ್ಲಿ  ಉತ್ತಮವಾಗಿದೆ. “ನಾನು ಫೈಲ್ ಆದ್ರೂ ಪರವಾಗಿಲ್ಲ, ಕನ್ನಡ ಶಾಲೆಯಲ್ಲೇ ಕಲಿಯುತ್ತೇನೆ.” ಕನ್ನಡಾಭಿಮಾನ ಭರಿಸುವ ಸಂಭಾಷಣೆಗಳು ಈ ಸಿನಿಮಾಕ್ಕೆ ಜೀವಾಳ..

ತಾರೆಗಳ ಮಹಾಸಂಗಮ

ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟರಾದ ಅನಂತ್ ನಾಗ್ , ರಮೇಶ್ ಭಟ್ ಅಭಿನಯಿಸಿದ್ದಾರೆ.. ಇನ್ನು ಈ ಚಿತ್ರ 125 ದಿನಗಳು  ಪೂರೈಸಿದ್ದಕ್ಕೆ  ಮಂಗಳೂರಿನಲ್ಲಿ ತಾರೆಗಳ ಮಹಾ ಸಂಗಮವಾಗಲಿದೆ.. ಹೌದು, “ಇದೇ 13 ಜನವರಿ 2019 ಭಾನುವಾರ ಸಂಜೆ 5:30ಕ್ಕೆ ಮಂಗಳೂರಿನ ಅಡ್ಯಾರ್ ಗಾರ್ಡನ್” ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಪ್ರವೇಶ ಕೂಡ ಉಚಿತ..

Image may contain: 6 people, people smiling, text

ಈ ಕಾರ್ಯಕ್ರಮಕ್ಕೆ  ಅತಿಥಿಗಳಾಗಿ  ಹಿರಿಯ ನಟ ಅನಂತ್ ನಾಗ್ , ಪ್ರಜ್ವಲ್ ದೇವರಾಜ್, ರಾಗಿಣಿ ದ್ವಿವೇದಿ, ಶಾನ್ವಿ ಶ್ರೀವಾತ್ಸವ್, ರಿಷಭ್ ಶೆಟ್ಟಿ, ಪರಿಣಿತ ಶುಭಾಷ್, ಮಾನ್ವಿತಾ ಹರೀಶ್, ಶೈನ್ ಶೆಟ್ಟಿ ಆಗಮಿಸಲಿದ್ದಾರೆ.

Image may contain: 9 people, people smiling, text.

#shpskkannadamovie #rishabshetty #balkaninews

Tags