ಸುದ್ದಿಗಳು

ಇಂಡಿಯನ್ ಡೈರೆಕ್ಟರ್ಸ್ ಗಳಿಗೆ ಕ್ರಿಟಿಸೈಸ್ ಮಾಡಿರುವ ಶ್ರೀ ರೆಡ್ಡಿ!

ಭಾರತೀಯ ಚಿತ್ರರಂಗದಲ್ಲಿನಡೆಯುತ್ತಿರುವ ಕಾಸ್ಟಿಂಗ್‌ ಕೌಚ್‌ ವಿರುದ್ಧ ಹೋರಾಟ ನಡೆಸಿರುವ ವಿವಾದಾಸ್ಪದ ನಟಿ ಶ್ರೀರೆಡ್ಡಿ, ಈಗ ನಿರ್ದೇಶಕರ ಮೇಲೂ ಹರಿಹಾಯ್ದಿದ್ದಾರೆ ಎನ್ನುವುದು ಬಿಸಿ ಬಿಸಿಯಾಗಿ ಸುದ್ದಿಯಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಚಿತ್ರರಂಗದಲ್ಲಿ ನಡೆಯುತ್ತಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅರೆಬೆತ್ತಲೆಯಾಗಿ ಬೀದಿಗಿಳಿದು ಕಾಸ್ಟಿಂಗ್‌ ಕೌಚ್‌ ವಿರುದ್ಧ ಧ್ವನಿ ಎತ್ತಿದ್ದ ಶ್ರೀ ರೆಡ್ಡಿ. ಕೆಲವರು ಇವರ ಹೋರಾಟಕ್ಕೆ ಕೈಜೋಡಿಸಿದ್ದರೆ, ಇನ್ನ ಕೆಲವರು ಶ್ರೀ ರಡ್ಡಿ ವಿರುದ್ಧವೇ ಕಿಡಿಕಾರಿದ್ದರು ಎನ್ನಲಾಗಿದೆ.

ಪ್ರಸ್ತುತ ಭಾರತೀಯ ಚಿತ್ರ ನಿರ್ದೇಶಕರ ವಿರುದ್ಧ ನಟಿ ಶ್ರೀರೆಡ್ಡಿ ಸೆನ್ಷೇಶನಲ್‌ ಕಮೆಂಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಡೈರೆಕ್ಟರ್‌ಗಳನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ಅವರು, ಭಾರತೀಯ ನಿರ್ದೇಶಕರು ಕ್ರಿಕೆಟಿಗರ ಹಾಗೂ ಸಿನಿಮಾ ತಾರೆಯರ ಬಯೋಪಿಕ್ ತೆಗೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಹೊರ ದೇಶದ ನಿರ್ದೇಶಕರಗಳು ಭಾರತೀಯ ವಿಜ್ಞಾನಿಗಳ ಮೇಲೆ ಚಿತ್ರ ಮಾಡುತ್ತಿದ್ದಾರೆ. ನಮ್ಮವರು ಕೇವಲ ದುಡ್ಡಿಗಾಗಿ ಸಿನಿಮಾ ಮಾಡುತ್ತಿದ್ದಾರೆ ಎಂದು ಇಂಡಿಯನ್ ಫಿಲ್ಮ್ ಡೈರಕ್ಟರ್ ಗಳನ್ನು ಕ್ರಿಟಿಸೈಸ್ ಮಾಡಿದ್ದಾರೆ ಎನ್ನಲಾಗಿದೆ.

ಯುಕೆ ಮೂಲಕ ನಿರ್ದೇಶಕನೋರ್ವ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್‌ ಕುರಿತು ಸಿನಿಮಾ ಮಾಡಿದ್ದರು. ಈ ಮೂಲಕ ಭಾರತೀಯರಿಗೆ ಗೌರವ ನೀಡಿದ್ದರು. ಆದರೆ, ನಾವು ನಮ್ಮತನವನ್ನು ಮರೆಯುತ್ತಿದ್ದೇವೆ, ನಮಗೆ ನಾಚಿಕೆಯಾಗುತ್ತಿದೆ  ಎಂದಿರುವ ಶ್ರೀ, ರಿಪ್‌ ಇಂಡಿಯನ್‌ ಡೈರೆಕ್ಟರ್ಸ್‌‌ ಎಂದಿದ್ದಾರೆ ಎಂದು ಸುದ್ದಿಯಾಗಿದೆ. ಪಾರ್ ದಿ ಫಸ್ಟ್ ಟೈಮ್ ನಟಿ ಶ್ರೀರಡ್ಡಿ ಕ್ಯಾಸ್ಟಿಂಗ್ ಕೌಚ್ ಹೊರತಾಗಿ ಸಿನಿಮಾದಲ್ಲಿನ ಗುಣಾತ್ಮಕ ಅಂಶಗಳ ಕುರಿತು ಮಾತನಾಡಿರುವುದು ಗಮನಾರ್ಹ.

Tags