ಸುದ್ದಿಗಳು

ನಾನಿ ಜೊತೆ ಬೆಡ್‌‌ ರೂಂ ವಿಷಯನ್ನು ಬಹಿರಂಗಪಡಿಸಿದ ಶ್ರೀರೆಡ್ಡಿ!

ಇತ್ತೀಚಿಗೆ ಕ್ಯಾಸ್ಟಿಂಗ್ ಕೌಚ್ ವಿಚಾರವಾಗಿ ಟಾಲಿವುಡ್ ವಿವಾದಾಸ್ಮಕ ನಟಿ ಶ್ರೀರೆಡ್ಡಿ ಕಾಂಟ್ರವರ್ಸಿ ಕಮೆಂಟ್‌, ಸ್ಟೇಟ್‌ಮೆಂಟ್‌ಗಳ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ ಎನ್ನುವುದು ತಿಳಿದ ವಿಷಯ.

ಶ್ರೀರೆಡ್ಡಿ ಮೊನ್ನಯಷ್ಟೆ ನ್ಯಾಚುರಲ್ ಸ್ಟಾರ್ ನಾನಿ ಬಗ್ಗೆ ಈ ಹಿಂದೆ  ಸೆನ್ಷೇಶನಲ್‌ ಕಮೆಂಟ್ ಮಾಡಿದ್ದರು. ‘ಶ್ರೀರೆಡ್ಡಿ+ನಾಣಿ= ಡರ್ಟಿ ಫಿಕ್ಚರ್, ಕಮಿಂಗ್ ಸೂನ್’ ಎನ್ನುವಂಥಹ ವಿಷಯವನ್ನು ಫೇಸ್‌‌ಬುಕ್‌ ಸ್ಟೇಟಸ್‌ ಹಾಕಿದ್ದರು. ಇದು ಇಡೀ ಟಾಲಿವುಡ್‌ ಚಿತ್ರರಂಗದಲ್ಲೇ ತಲ್ಲಣ ಮೂಡಿಸಿತ್ತು. ಈಗ ಮತ್ತೊಂದು ಸ್ಟೇಟಸ್ ಇದೇ ರೀತಿ ತಲ್ಲಣ ಮೂಡಿಸಿದೆ.

ಟಾಲಿವುಡ್ ಸ್ಟಾರ್ ನಾನಿಯವರನ್ನು ಗುರಿಯಾಗಿಸಿಕೊಂಡು ಕಮೆಂಟ್ ಮಾಡಿರುವ ಶ್ರೀರೆಡ್ಡಿ, ಆತ ತನ್ನ ಜತೆ ದೈಹಿಕ ಸಂಪರ್ಕ ನಡೆಸಿರುವುದಾಗಿ ಆರೋಪಿಸಿದ್ದಾರೆ. ಇದರ ಜತೆ ಅಶ್ಲೀಲ ಪದಗಳ ಮೂಲಕ ನಾನಿ ವಿರುದ್ಧ ಬರೆದುಕೊಂಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ  ವಿಚಾರ ಚಿತ್ರಂಗದಲ್ಲಿ ಸಂಚಲನ ಮೂಡಿಸಿದೆ ಎನ್ನಲಾಗಿದೆ.

ಈ ವಿಚಾರವಾಗಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ನ್ಯಾಚ್ಯುರಲ್ ಸ್ಟಾರ್ ನಾನಿ ಅವರ  (ಶ್ರೀರೆಡ್ಡಿ) ಜೊತೆ ಅವರು ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಮಾತಿಗೆ ಇಳಿಯಲು ನನಗೆ ಇಷ್ಟವಿಲ್ಲ, ಏನಿದ್ದರೂ ಅವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ಈಗಾಗಲೇ ಮಾನನಷ್ಟ ಮೊಕದ್ದಮೆ ನೋಟಿಸ್‌ನ್ನು ಅವರಿಗೆ ಕಳುಹಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Tags