ಸುದ್ದಿಗಳು

ತೆಲುಗಿನ ಬಿಗ್ ಬಾಸ್2 ನಲ್ಲಿ ಫೈರ್ ಬ್ರ್ಯಾಂಡ್ ಶ್ರೀ ರೆಡ್ಡಿ!

ತೆಲುಗು ಟೆಲಿವಿಷನ್ ಚರಿತ್ರೆಯಲ್ಲೇ ಬಿಗ್ಗೆಸ್ಟ್ ರಿಯಾಲಿಟಿ ಶೋ ‘big boss’ season 2 ಪ್ರಸಾರಕ್ಕೆ ಚಾಲನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಪ್ರಸಾರವಾಗಿರುವ big boss season 1 ಕಾರ್ಯಕ್ರಮದಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದು ಈ ಕಾರ್ಯಕ್ರಮದ ಹೋಸ್ಟ್ ಆಗಿ ಟಾಲಿವುಡ್ ಸ್ಟಾರ್ ಎನ್ಟಿಆರ್ ನಡೆಸಿ ಕೊಟ್ಟಿದ್ದರು ಎನ್ನಲಾಗಿದೆ.

ಈಗ ಈ ಎರಡನೇ ಸೀಸನ್ ಗೆ ನ್ಯಾಚುರಲ್ ಸ್ಟಾರ್ ನಾನಿ ಹೋಸ್ಟ್ ಆಗಿ ಕಾರ್ಯ ನಿರ್ವಹಿಸಲಿದ್ದು ಜೂನ್ 10 ರಿಂದ 100 ದಿನಗಳ ಕಾಲ ನಡೆಯುವ  ಕಾರ್ಯಕ್ರಮಕ್ಕೆ ಸುಮಾರು 16 ಮಂದಿ ಸೆಲೆಬ್ರೆಟಿಗಳು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಈ 16 ಮಂದಿ ಸೆಲೆಬ್ರೆಟಿಗಳಲ್ಲಿ ಎಲ್ಲರ ಹೆಸರು ಪ್ರಕಟವಾಗದೇ ಇದ್ದರೂ ಕೆಲವರ ಹೆಸರುಗಳನ್ನು ಬಹಿರಂಗ ಪಡಿಲಾಗಿದೆಯಂತೆ. ಈ ಪ್ರಕಟ ಪಟ್ಟಿಯಲ್ಲಿ ತೆಲುಗಿನ ವಿವಾದಾಸ್ಪದ ನಟಿ ಹಾಗಿ ಕ್ಯಾಸ್ಟಿಂಗ್ ಕೌಚ್ ಪೈರ್ ಬ್ರ್ಯಾಂಡ್ ಶ್ರೀರೆಡ್ಡಿಯವರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.. ಈ ನಟಿಯು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಕುರಿತು ಸೋಷಿಯಲ್ ಟಾಕ್ ಹೇಗಿದೆ ಎಂದರೆ ನಾವೆಲ್ಲ ಊಹಿಸುವ ಹಾಗೆ ಈ ಸಲದ ಬಿಗ್ ಬಾಸ್ ಸೀಸನ್  ಹಾಟ್ ಹಾಟ್ ಆಗಿ ಇರಲಿದ್ದು ವಿವಾದಾಸ್ಪದ ಮನೋರಂಜನೆಯನ್ನು ಬಿಟ್ಟಿಯಾಗಿ ಪಡೆಯಬಹುದು ಎಂದು ಮಾತನಾಡಿಕೊಳ್ಳುವುದನ್ನು ನಾವು ನೋಡಬಹುದು.

ಈ ಹಿಂದೆ ನಟಿ ಶ್ರೀ ರೆಡ್ಡಿ ಕ್ಯಾಸ್ಟಿಂಗ್ ವಿಚಾರವಾಗಿ ನ್ಯಾಚುರಲ್ ಸ್ಟಾರ್ ನಾನಿಯವರ ಹೆಸರನ್ನು ಪ್ರಕಟಿಸುವುದರ ಮೂಲಕ ಸಂಚಲನ ಸೃಷ್ಟಿಸಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಈ ನಟಿ ಹೇಗೆ ನಾನಿಯವರನ್ನು ಕಮ್ಯೂನಿಕೇಟ್ ಮಾಡಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.

Tags