ಸುದ್ದಿಗಳು

ಹೈಟೆಕ್ ಸೆಕ್ಸ್ ರಾಕೆಟ್ ಕುರಿತು ಶ್ರೀರೆಡ್ಡಿ ಶಾಕಿಂಗ್ ಕಮೆಂಟ್‌!

ಟಾಲಿವುಡ್ ನಲ್ಲಿ ಸುಮಾರು ದಿನಗಳಿಂದ ಕಾಸ್ಟಿಂಗ್ ಕೌಚ್‌ ವಿರುದ್ಧ ಹೋರಾಟ ನಡೆಸುತ್ತಿರುವ ವಿವಾದಾಸ್ಮಕ ನಟಿ ಶ್ರೀರೆಡ್ಡಿ ಇದೀಗ ಮತ್ತೊಂದು ಶಾಕಿಂಗ್ ಕಮೆಂಟ್ ಮಾಡಿದ್ದಾರೆ ಎಂದು ಸುದ್ದಿಯಾಗಿದೆ.

ನನಗೂ ಸಹ ನನ್ನ ವೃತ್ತಿ ಜೀವನದ ರಂಭದ ದಿನಗಳಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಲು ಅಪ್ರೋಚ್ ಮಾಡಲಾಗಿತ್ತು ಎಂದು ಹೇಳಿವುದರ ಮೂಲಕ ಶ್ರೀರೆಡ್ಡಿ ಶಾಕ್ ನೀಡಿದ್ದಾರೆ . ಈ ಚಿತ್ರರಂಗದಲ್ಲಿ ನಟಿಸಲು ಅವಕಾಶ  ಸಿಗದ ಯುವತಿಯರನ್ನು ಅವರ ವೀಕ್ ನೆಸ್ ಅನ್ನು ಗುರಿಯಾಗಿಸಿಕೊಂಡು ಟಾರ್ಗೆಟ್‌ ಮಾಡಲಾಗುತ್ತದೆ. ಅವರಿಗೆ ವೀಸಾ ಹಾಗೂ ಪ್ಲೈಟ್‌ ಬುಕ್‌ ಮಾಡಿ ಅಮೆರಿಕಕ್ಕೆ ಕರೆದೊಯ್ಯಲಾಗುತ್ತದೆ. ಈ ವಿಷಯದ ಕುರಿತು ಟಾಲಿವುಡ್‌ ಕೆಲ ವ್ಯಕ್ತಿಗಳಿಗೂ ಗೊತ್ತಿದೆ. ಆದರೆ, ಅವರು  ಮಾತ್ರ  ಕುರಿತು ತಮಗೆ ಗೊತ್ತಿಲ್ಲದ ಹಾಗೆ ಹಾಗು ಸಂಭಂದವೇ ಇಲ್ಲದ ಹಾಗೆ ವರ್ತಿಸುತ್ತಿದ್ದಾರೆ ಎಂದು ಶ್ರೀರೆಡ್ಡಿ ಆರೋಪಿಸಿದ್ದಾರೆ.

ಮೊನ್ನೆ ತಾನೆ ಅಮೇರಿಕಾದ ಚಿಕಾಗೋದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ತೆಲುಗು ಚಿತ್ರರಂಗದ ಸಹ ನಿರ್ಮಾಪಕ ಕಿಶನ್‌‌‌ ಮೊಡುಗುಮುದಿ ಅಲಿಯಾಸ್‌‌ ಶ್ರೀಜಾ ಚೆನ್ನುಪತಿ ಹಾಗೂ ಚಂದ್ರಕಲಾ ಪೂರ್ಣಿಮಾ ಅಲಿಯಾಸ್‌‌‌‌ ವೆಭಾ ಜಯರಾಮ್‌‌‌‌‌ ಅವರನ್ನು ಬಂದಿಸಲಾಗಿತ್ತು.

ಈ ವಿಷಯದ ಕುರಿತಾಗಿ ಪ್ರತಿಕ್ರಿಯಿಸಿರುವ ನಟಿ  ಶ್ರೀರೆಡ್ಡಿ ಟಾಲಿವುಡ್‌ ನಲ್ಲಿ ನಡೆಯುತ್ತಿರುವ ಅಪಚಾರಗಳನ ಬಗ್ಗೆ ತಮ್ಮ ಕ್ರೀಶವನ್ನು ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಯಾಗಿದೆ.ಕಿಡಿಕಾರಿದ್ದಾರೆ.

Tags