ಸುದ್ದಿಗಳು

ಶ್ರೇಯಸ್ ಮಂಜು ಅಭಿನಯದ ‘ಪಡ್ಡೆಹುಲಿ’ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ

ಬೆಂಗಳೂರು, ಏ.15:

‘ಪಡ್ಡೆಹುಲಿ’ ಸಿನಿಮಾ ಚಿತ್ರೀಕರಣ ಮುಗಿಸಿ ಇದೇ ಶುಕ್ರವಾರ ತೆರೆಗೆ ಬರಲು ರೆಡಿಯಾಗಿದೆ. ಈಗಾಗಲೇ ಹಾಡು ಟ್ರೇಲರ್‌ ಗಳಿದಂಲೇ ಸಕ್ಕತ್ ಸುದ್ದಿಯಾಗಿದ್ದ ಈ ಚಿತ್ರ ಇದೇ ಏಪ್ರಿಲ್ 19ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇನ್ನೂ ಈ ಚಿತ್ರದಲ್ಲಿ ಕೆ.ಮಂಜು ಪುತ್ರ ಮೊದಲ ಬಾರಿಗೆ ನಾಯಕ ನಟನಾಗಿ ಸಿನಿಮಾಗೆ ಎಂಟ್ರಿಯಾಗುತ್ತಿದ್ದಾರೆ. ಈಗಾಗಲೇ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ರವಿಚಂದ್ರನ್ ನಟಿಸಿದ್ದು, ಶ್ರೇಯಸ್ ಗೆ ಸಾಥ್ ನೀಡಿದ್ದಾರೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಚಿತ್ರದ ಮೇಕಿಗ್ ವಿಡಿಯೋ ಇದೀಗ ಬಿಡುಗಡೆಯಾಗಿದೆ.

ಎರಡು ಮೇಕಿಂಗ್ ವಿಡಿಯೋ ಬಿಡುಗಡೆ

ಹೌದು, ಗುರುದೇಶಪಾಂಡೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಕಿಂಗ್ ವಿಡಿಯೋ ಲಾಂಚ್ ಆಗಿದೆ. ಈ ವಿಡಿಯೋದಲ್ಲಿ ಶ್ರೇಯಸ್ ಅವರ ಸ್ಟಂಟ್, ಕಾಲೇಜಿನಲ್ಲಿನ ಒಡೆದಾಟಗಳನ್ನು ತೋರಿಸಲಾಗಿದೆ. ಇನ್ನೂ ಸ್ಟಂಟ್ ವೇಳೆ ಕೈಗೆ ಪೆಟ್ಟಾದಾಗ ಯಾವುದನ್ನೂ ಲೆಕ್ಕಿಸದೇ ಮತ್ತೆ ಶೂಟಿಂಗ್ ಮುಂದುವರೆಸಿದ ಶ್ರೇಯಸ್ ಅವರ ವಿಡಿಯೋ ಕೂಡ ಇದರಲ್ಲಿದೆ. ಒಟ್ಟು ಎರಡು ವಿಡಿಯೋಗಳು ಬಿಡುಗಡೆಯಾಗಿದ್ದು, ಮತ್ತೊಂದು ವಿಡಿಯೋದಲ್ಲಿ ಚಿತ್ರದುರ್ಗದಲ್ಲಿ ನಡೆದ ಶೂಟಿಂಗ್ ಮೇಕಿಂಗ್ ತೋರಿಸಲಾಗಿದೆ.

ಶ್ರೇಯಸ್‌ ಗೆ ನಾಯಕಿ ನಿಶ್ಚಿಕಾ ನಾಯ್ಡು

ಇನ್ನೂ ಈ ಚಿತ್ರದಲ್ಲಿ ನಾಯಕನಾಗಿರುವ ಶ್ರೇಯಸ್ ಗೆ ನಾಯಕಿಯಾಗಿ ನಿಶ್ವಿಕಾ ಸ್ಕ್ರೀನ್‌ ಶೇರ್ ಮಾಡಿದ್ದಾರೆ. ಗುರು ದೇಶ್ ಪಾಂಡೆ ನಿರ್ದೇಶದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿರೋದು ಸುರೇಶ್.. ಈ ಮೊದಲು ಉಪ್ಪು ಹುಳಿ ಖಾರ ಸಿನಿಮಾಗೆ ಬಂಡವಾಳ ಹಾಕಿದ್ದ ನಿರ್ಮಾಪಕ ಈ ಸಿನಿಮಾಗೆ ಬಂಡವಾಳ ಹಾಕುವುದರ ಮೂಲಕ ಕೆ.ಮಂಜು ಪುತ್ರನನ್ನು ಪರಿಚಯ ಮಾಡಿದ್ದಾರೆ.  ಇನ್ನೂ ಈ ಚಿತ್ರದಲ್ಲಿ ಅಮಿತ್, ಅನಿಲ್ ಯಾದವ್ ಸೇರಿದಂತೆ ಅತಿದೊಡ್ಡ ತಾರಾಗಣ ಇರಲಿದ್ದಾರೆ. ಈಗಾಗಲೇ ಎಲ್ಲರಿಂದ ಪ್ರಶಂಸೆಗೆ ಒಳಗಾಗಿರುವ ಈ ನಟ ಸಿನಿಮಾದಲ್ಲಿ ಹೇಗೆ ಕಮಾಲ್ ಮಾಡ್ತಾರೆಂದು ಕಾದು ನೋಡಬೇಕು..

 

View this post on Instagram

 

😅 #paddehuli #kannada #cinema

A post shared by Shreyas Manju (@shreyaskmanju5) on

 

View this post on Instagram

 

So this is how I was on the sets 😝😝🙈 #paddehuli

A post shared by Shreyas Manju (@shreyaskmanju5) on

ಕ್ರೇಜಿಸ್ಟಾರ್ ಮಗಳ ಮದುವೆಗೆ ಫಿಕ್ಸ್ ಆಯ್ತು ದಿನಾಂಕ

#balkaninews #shreyaskmanju #sandalwood #paddehulikannadamovie #ravichandran

Tags