ಸುದ್ದಿಗಳು

ಸ್ವಿಮ್ ಸೂಟ್ ನಲ್ಲಿ ಶ್ರೇಯಾ ಶರಣ್ ಭರ್ಜರಿ ಡ್ಯಾನ್ಸ್..!!!

ಹೈದರಾಬಾದ್.ಮೇ.23: ಸೌತ್ ಇಂಡಿಯಾದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಶ್ರೇಯಾ ಶರಣ್ ಮ್ಯೂಸಿಯಂವೊಂದರಲ್ಲಿ ಬಿಕಿನಿ ತೊಟ್ಟು ಡ್ಯಾನ್ಸ್ ಮಾಡಿರುವುದು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.

ಹೌದು, ಶ್ರೇಯಾ ತಾವು ಡ್ಯಾನ್ಸ್ ಮಾಡಿದ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು, ಇದನ್ನು ನೋಡಿದ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಏಕೆಂದರೆ, ಅವರು ಒಂದು ಫೋಟೋ ಮುಂದೆ ಡ್ಯಾನ್ಸ್ ಮಾಡುವಾಗ, ಇದ್ದಕ್ಕಿದ್ದಂತೆ ಆ ಫೋಟೋದಲ್ಲಿದ್ದ ಮನುಷ್ಯನ ಮುಖ ಕೋತಿಯ ರೂಪ ಪಡೆಯುತ್ತದೆ. ಇದರಿಂದಾಗಿ ನಗೆ ಪಾಟಲಿಗೆ ಈಡಾಗಿದ್ದಾರೆ.

Image result for shriya saran

ಇನ್ನು ಶ್ರೇಯಾ ಕಳೆದ ವರ್ಷ ಮಾರ್ಚ್ ನಲ್ಲಿ ರಷ್ಯನ್ ಬಾಯ್ ಫ್ರೆಂಡ್ ಆ್ಯಂಡ್ರಿ ಕೊಸ್ಟಿವ್ ರನ್ನು ವಿವಾಹವಾಗಿದ್ದರು. ಆ್ಯಂಡ್ರಿ ಜೊತೆ ಮೋಜು ಮಸ್ತಿಯಲ್ಲಿ ತೊಡಗಿರುವ ಶ್ರೇಯ ಶರಣ್ ಲಂಡನ್ ಮ್ಯೂಸಿಯಂವೊಂದಕ್ಕೆ ಭೇಟಿ ನೀಡಿದ್ದಾರೆ. ಬಿಕಿನಿ ಮೇಲೆ ಪಾರದರ್ಶಕವಾದ ಗೌನ್, ಸನ್ ಗ್ಲಾಸ್ ಧರಿಸಿ ಫೋಟೋವೊಂದರ ಮುಂದೆ ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ದರು.

ಶ್ರೇಯಾ ತಮಿಳು, ತೆಲುಗು ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಾಗಯೇ ಕನ್ನಡದಲ್ಲಿ ‘ಅರಸು’ ಚಿತ್ರದಲ್ಲಿ ಅತಿಥಿ ಪಾತ್ರ ಹಾಗೂ ‘ಚಂದ್ರ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

‘ಮಾಯಾ ಕನ್ನಡಿ’ ಟೀಸರ್ ರಿಲೀಸ್…

#shreyasharan, #dance #troll #balkani #news #troll, filmnews, #kannadasuddigalu, #tollywoodfilms

Tags